ಹೊಸಶಕೆ ನ್ಯೂಸ್ -ಕೊಪ್ಪಳ : 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೇಯಲ್ಲಿನ ಕಾಮಗಾರಿಗಳ ಅಳವಡಿಕೆಯ ಸ್ಥಳವನ್ನು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನo ಪಾಂಡೆಯ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಇರಕಲಗಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿಯಿಂದ ಅನುಷ್ಠಾನಗೊಂಡ ಹನಮನಹಟ್ಟಿ ಗ್ರಾಮದ ಶಾಲಾ ಕಂಪೌಂಡ ಕಾಮಗಾರಿ, ಯಲಮಗೇರಿ ಗುಡ್ಡದಲ್ಲಿರುವ ಜಿನ್ನಾಪುರ ಹನಮಂತ ದೇವಸ್ಥಾನದ ಹತ್ತಿರ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಪ್ರಗತಿಯಲ್ಲಿರುವ ಮಣ್ಣು-ನೀರು ಸಂರಕ್ಷಣಾ ಕಾಮಗಾರಿ(ಎಸ್.ಎಂ.ಸಿ), ಸಾಮಾಜಿಕ ಅರಣ್ಯ ಇಲಾಖೆಯ ಸಂಘ-ಸಂಸ್ಥೆಗಳಲ್ಲಿ ಸಸಿ ನೆಟ್ಟ ಕಾಮಗಾರಿ ಪರಿಶೀಲಿಸಿದರು.
ಚಾಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಇಓ ಅವರು ಭೇಟಿ ನೀಡಿ, ಅಲ್ಲಿರುವ ಮಕ್ಕಳ ಕಲಿಕಾ ಮಟ್ಟ ವೀಕ್ಷಿಸಿದರು. ಮಕ್ಕಳಿಗೆ ಮೊಟ್ಟೆ, ಆಹಾರ ವಿತರಣೆ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಎಡಿಪಿಸಿ ಮಹಾಂತಸ್ವಾಮಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ, ಟಿಸಿ ಯಮನೂರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ,
ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಅಬ್ದು ಸಮಿ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜ ಕನ್ನಾಳ, ಗಸ್ತು ಅರಣ್ಯ ಪಾಲಕ ಸಂತೋಷ ಹಾವನೂರು, ಎಸ್.ಡಿ.ಎ.ಎ ರೇಣುಕಾ, ಟಿಎಇ ಮಲ್ಲಿಕಾರ್ಜುನ ಮೆಗಳಮನಿ, ತಾಂತ್ರಿಕ ಸಹಾಯಕಿ ನೇತ್ರಾವತಿ, ಸರಸ್ವತಿ, ಬೇರ್ ಫೂಟ್ ಟೆಕ್ನಿಷಿಯನ್ ರವಿಶಂಕರ ಪೂಜಾರ, ಕರವಸೂಲಿಗಾರ ಕೊಟ್ರೇಶ್ ಉಪಸ್ಥಿತರಿದ್ದರು.