ಹೊಸಶಕೆ ನ್ಯೂಸ್-ಕೊಪ್ಪಳ: ನಗರದಲ್ಲಿ ಹಿಂದೂ ವಾಲ್ಮೀಕಿ ಯುವಕನ ಕೊಲೆ ಮಾಡಿದ ಸಾಧಿಕ್ ಕೊಲ್ಕಾರ ಮತ್ತು ಅವರ ಸಂಗಡಿಗರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಜೆಡಿಎಸ್ ಪರಿಶಿಷ್ಟ ಪಂಗಡದ ಜಿಲ್ಲಾ ಅಧ್ಯಕ್ಷ ರಮೇಶ ಡಂಬ್ರಳ್ಳಿ ಆಗ್ರಹ ಪಡಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೊಲೆ ಮಾಡಿದ ಯುವಕರ ಗುಂಪು ಗಾಂಜ ಸೇವನೆ. ಬೈಕ್ ವೀಲಿಂಗ್. ಇನ್ನಿತರ ಅಪರಾಧ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಕೊಲೆಗಾರರ ಅಪರಾಧ ಮನೋಭಾವನೆ ತೋರುತ್ತದೆಎಂದರು.
ಜಿಲ್ಲೆಯಲ್ಲಿ ಇಂಥ ಘೋರ ಘಟನೆ. ಹತ್ಯೆ, ಕೊಲೆ ಹಿಂದೆಂದೂ ನಡೆದಿರಲಿಲ್ಲ. ಕಾರಣ ಏನೇ ಇದ್ದರೂ ಕೊಲೆ ಮಾಡುವಂಥ ಘಟನೆ ಅಗಬಾರದಿತ್ತು. ಕುಟುಂಬದಲ್ಲಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಅವರೆಲ್ಲ ಅನಾಥರಾಗಿದ್ದಾರೆ. ಎರಡು ಕೋಮಿನ ಜನರು ಶಾಂತಿ ಕಾಪಾಡಬೇಕು. ಮುಂದೆ ಇಂತಹ ಯಾವುದೇ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಬೇಕು ಎಂದು ಹೇಳಿದರು.
ಯುವಕನ ಕೊಲೆ ಪ್ರಕರಣ ಸಂಬಂಧಿಸಿದಂತೆ ಆ.8 ರಂದು ನಡೆಯುವ ಕೊಪ್ಪಳ ಬಂದ್ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಿದ್ದೇವೆ ಎಂದರು. ಈ ಸಂಧರ್ಭದಲ್ಲಿ ಮುಖಂಡರಾದ ಶರಣಪ್ಪ ಜಡಿ, ಮಂಜುನಾಥ ಸೊರಟುರು, ಸೋಮನಗೌಡ ಹೊಗರನಾಳ, ರವಿಕುಮಾರ್ ಮೇದಾರ ಇತರರು ಇದ್ದರು