ಹೊಸಶಕೆ ನ್ಯೂಸ್-ಯಲಬುರ್ಗಾ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು ಯಲಬುರ್ಗಾ ಪಟ್ಟಣ ಆಶ್ರಯ ಸಮಿತಿರವರು, ಆಶ್ರಯ ಯೋಜನೆಯಡಿ ಜಮೀನು ಖರೀದಿಸಲು ಕಡತದಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ನಾಗೇಶ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಯಲಬುರ್ಗಾ ಪಟ್ಟಣದ ವ್ಯಾಪ್ತಿಯ ನಗರ ವಸತಿ ಯೋಜನೆಯಡಿ 1636 ನಿವೇಶನ ರಹಿತರಿದ್ದು ಸದರಿ ನಿವೇಶನ ರಹಿತರಿಗೆ ವಸತಿಯೋಜನೆಯಡಿ ನಿವೇಶನ ಸೌಲಭ್ಯ ಕಲ್ಪಿಸಿಕೊಡಲು, ಯಲಬುರ್ಗಾ ನಗರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನು ಅವಶ್ಯವಿರುತ್ತದೆ.
ಸದರಿ ಉದ್ದೇಶಕ್ಕಾಗಿ ಜಮೀನು ಖರೀದಿ ರೂಪದಲ್ಲಿ ಕೊಡಲು ಇಚ್ಚಿಸುವವರು ತಮ್ಮ ಜಮೀನಿನ ಚಾಲ್ತಿ ಪಹಣಿ ಪತ್ರಿಕೆ, ಫಾರ್ಮ ನಂ-10,ಜಮೀನು ಮಾಲೀಕರ ಆಧಾರ ಕಾರ್ಡ ಪ್ರತಿ.,ಆಕಾರ ಬಂದ, ನಕ್ಷೆ ದಾಖಲಾತಿಗಳೊಂದಿಗೆ ಪಟ್ಟಣ ಪಂಚಾಯತ ಕಾರ್ಯಾಲಯ, ಯಲಬುರ್ಗಾಕ್ಕೆ (15)ದಿನಗಳೊಳಗಾಗಿ ಸಲ್ಲಿಸಲು ಪ.ಪಂ. ಮುಖ್ಯಾಧಿಕಾರಿ ನಾಗೇಶ್ ಅವರು ತಿಳಿಸಿರುವರು