Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಮೇ. 20 ರಿಂದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ

ಒಂದು ತಿಂಗಳ ಕಾಲ ದಾಸೋಹ ಸೇರಿ ಭಕ್ತರಿಗೆ ಮೂಲಭೂತ ಸೌಕರ್ಯ : ಸಂಸದ ರಾಜಶೇಖರ್ ಹಿಟ್ನಾಳ

Hosashake News by Hosashake News
May 2, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸಾಮಾಜಿಕ, ಸುದ್ದಿ
0
ಮೇ. 20 ರಿಂದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ : ಸುಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವವು ಮೇ. 20 ರಿಂದ ಒಂದು ತಿಂಗಳ ಕಾಲ ಜರುಗಲಿದೆ, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ನಡೆಯುವ ಮೊದಲ ಜಾತ್ರೆ  ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮವನ್ನು ಕೈಗೊಂಡು, ಆಗಮಿಸುವ ಭಕ್ತಾದಿಗಳಿಗೆ ಸಕಲ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು. ಸಂಸದರ ಕಛೇರಿಯಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತಸ್ವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರವು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಜಾತ್ರೆಯಲ್ಲಿ ಪ್ರಸಾದ ವ್ಯವಸ್ಥೆ  ಒಂದು ತಿಂಗಳ ಕಾಲ ವರಗೆ ಇರಲಿದೆ, ಈ ದಾಸೋಹಕ್ಕೆ ಭಕ್ತರು ತಮ್ಮ ಇಚ್ಛೆಯಂತೆ ದವಸ ಧ್ಯಾನ್ಯಗಳನ್ನು ದಾನ ಮಾಡಬಹುದು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುವದರಿಂದ  ಅವರಿಗೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು  ಸಭೆಗಳನ್ನು ನಡೆಸಲಾಗಿದೆ, ಐದು ದಿವಸ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ, ಹತ್ತು ಲಕ್ಷಕ್ಕೂ ಹೆಚ್ಚು ಜನರು ಬರುವರು. ದೇವಸ್ಥಾನಕ್ಕೆ ಬರಲು ಒಂದೇ ರಸ್ತೆ ಇರುವದರಿಂದ ಭಕ್ತರು ಬರಲಿಕ್ಕೆ ತೊಂದರೆ ಆಗುತ್ತಿತ್ತು, ಇವಾಗ ಎಡ ಮತ್ತು ಬಲಭಾಗಕ್ಕೆ ಹೊಂದು ಕೊಂಡು ಹೋಗಲು, ಬರಲು ಪ್ರತ್ಯೇಕ ಮಾಡಲಾಗಿದೆ. ಸಾರಿಗೆ ವ್ಯವಸ್ಥೆ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ಬಿಡಲು ತಿಳಿಸಲಾಗಿದೆ. ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವು ದೇವಸ್ಥಾನದ ಪೂಜಾ ಕಾರ್ಯ ನೋಡಬಹುದು  ಎಂದು ವಿವರಿಸಿದರು.

ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೊಪ್ಪಳ, ಗಂಗಾವತಿ, ಹಿಟ್ನಾಳ್ ಕಡೆಯಿಂದ ಬರುವ ಮಾರ್ಗದಲ್ಲಿ 3 ಕಡೆ ಸ್ನಾನಗೃಹ, ಗಳನ್ನು ಒಳಗೊಂಡ ಪ್ರತ್ಯೇಕ ಪುರುಷ ಮತ್ತು ಮಹಿಳೆಯರ ಶೌಚಾಲಯಗಳು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆ, ಹಾಗೂ ದೇವಸ್ಥಾನದ ಸಮೀಪ ತಲುಪವಂತೆ ದೇವಸ್ಥಾನದ ಎಡಭಾಗ ಮತ್ತು ಬಲಭಾಗದ ಖಾಸಗಿ ಹೊಲಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ, ಸರ್ಕಾರಿ ಬಸ್ಸುಗಳಿಗೆ ಹಾಗೂ ಖಾಸಗಿ ಬಸ್ಸುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದಾದ್ಯಂತ ಹಾಗೂ ಅಂಧ್ರ, ಮಹಾರಾಷ್ಟ್ರ ಹಾಗೂ ಇನ್ನಿತರೆ ಪ್ರದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಯವರ ದರ್ಶನವನ್ನು ಪಡೆಯಲು ಆಗಮಿಸುತ್ತಿದ್ದು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದೆ, ಬರುವ ದಿನಗಳಲ್ಲಿ ಒಂದು ನೂರು ಕೋಟಿ ವೆಚ್ಚದಲ್ಲಿ‌ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಈ ಬಗ್ಗೆ  ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳೀದರು.   ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಆಡಳಿತಾಧಿಕಾರಿ ಪ್ರಕಾಶರಾವ್, ಮುಖಂಡರಾದ ಪಾಲಾಕ್ಷಪ್ಪ. ಗುಂಗಾಡಿ, ವೇಂಕಟೇಶ ವಡ್ಡರ್, ಈರಣ್ಣ ಈಳಗೇರ ಇತರರು ಇದ್ದರು.

==ದೇವಾಲಯಕ್ಕೆ ಪ್ರತ್ಯೇಕ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಅಳವಡಿಸಿ, ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವಾಗಿ ನೋಡಲು ಅನುಕೂಲವಾಗಲಿದೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶ, ಪಾರ್ಕಿಂಗ್ ಪ್ರದೇಶ, ನದಿ ತೀರ, ಬಯಲು ಪ್ರದೇಶ, ಮುಖ್ಯರಸ್ತೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪ್ರತ್ಯೇಕ ಸಮಿತಿಯನ್ನು ರಚಿಸಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಆರೋಗ್ಯ ಸುರಕ್ಷತೆಗಾಗಿ ವೈಧ್ಯರ ತಂಡವನ್ನು ಮತ್ತು ಸುರಕ್ಷತೆಗಾಗಿ ಅಗ್ನಿಶಾಮಕ ದಳ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಆರಕ್ಷಕ ತಂಡ ಮತ್ತು ಹೆಚ್ಚಿನ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಿದೆ. : ರಾಜಶೇಖರ್ ಹಿಟ್ನಾಳ, ಸಂಸದರು ಕೊಪ್ಪಳ ==

Tags: Basic facilities for devotees including Dasoh for a month: MP Rajashekhar HitnalKoppal Huligemma TempleMP Rajashekar HitanalSri Huligemma Devi Temple's Jathramahotsava from May 20ಒಂದು ತಿಂಗಳ ಕಾಲ ದಾಸೋಹ ಸೇರಿ ಭಕ್ತರಿಗೆ ಮೂಲಭೂತ ಸೌಕರ್ಯ : ಸಂಸದ ರಾಜಶೇಖರ್ ಹಿಟ್ನಾಳಮೇ. 20 ರಿಂದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ
Previous Post

ಜಾತಿಗಳ ನಡುವೆ-ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ: ಸಿದ್ದರಾಮಯ್ಯ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!