Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ: ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆ

ಶ್ರೀಗವಿಮಠದ ಆವರಣದಲ್ಲಿ ಬಾಳೆಹಣ್ಣು ಇತರ ಹಣ್ಣು ಎಸೆಯದಿರಲು ಮನವಿ

Hosashake News by Hosashake News
December 27, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಕ್ರೀಡೆ, ಜಿಲ್ಲೆ, ದೇಶ, ಪರಿಸರ, ಪ್ರಾದೇಶಿಕ, ರಾಜ್ಯ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ: ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳ ಸಹಯೋಗದೊಂದಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸಲಾಗಿದೆ.  ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಶ್ರೀ ಮಠವು ಉಚಿತ ವೈದ್ಯಕೀಯ ಸೇವೆಗೆ ಹೆಚ್ಚು ಒತ್ತು ಕೊಟ್ಟು ಬಂದಿರುವ ಭಕ್ತಾದಿಗಳಲ್ಲಿ ಕಂಡು ಬಂದ ರೋಗಕ್ಕೆ ಅನುಗುಣವಾಗಿ ಪರಿಣಿತ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಯನ್ನು ಕೊಡುವ ಸೆವೆಯನ್ನು ಮಾಡುತ್ತಿದೆ. ಕಳೆದ ವರ್ಷ 2024ರ ಜಾತ್ರೆಯಲ್ಲಿ ರೋಗಿಗಳ ತಪಾಸಣೆ ಮಾಡಿ ಉಚಿತ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾಗಿತ್ತು.

ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳ ಸಹಯೋಗದೊಂದಿಗೆ ಬರುವಂತಹ ಭಕ್ತಾದಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು. ಇದರ ಜೊತೆಗೆ ಔಷಧಿಯ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷವಾಗಿ ಜಾತ್ರೆಯ ಆವರಣ, ಪ್ರಸಾದ ನಿಲಯ ಹಾಗೂ ಪೋಲಿಸ್ ಚೌಕಿ ಹತ್ತಿರ ಸದರಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು 24 ಘಂಟೆ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ. ಸದರಿ ವ್ಯವಸ್ಥೆಯು 01/01/2026ರಿಂದ 18/01/2026ರವರೆಗೆ ಬೆಳಿಗ್ಗೆ 8.00 ಗಂಟೆಯಿAದ ರಾತ್ರಿ 12.00ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ರಾತ್ರಿ 12 ಗಂಟೆಯ ನಂತರ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ ಹಾಗೂ ಕೆ.ಎಸ್ ಹಾಸ್ಪಿಟಲ್ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಹಾಗೆಯೇ ಅಂಬುಲೆನ್ಸ ಸೇವೆ ಸಹ 24 ಗಂಟೆ ಲಭ್ಯವಿರುತ್ತದೆ. ದಾಸೋಹದಲ್ಲಿ ನಿರಂತರ ಸೌಲಭ್ಯಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಿವರವನ್ನು ಲಗತ್ತಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಡಾ ಗುರುರಾಜ್ – 9480193373, ಡಾ ಎಂ ಸೂರ್ಯನಾರಾಯಣ – 9845631442, ಡಾ ಎಸ್. ಎಂ ಸಾಲಿಮಠ – 9845010950, ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ದೂರವಾಣಿ ಸಂಖ್ಯೆ :08539 -221989 ಸಂಪರ್ಕಿಸಲು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಸೌಲಭ್ಯ ಸ್ಥಳಗಳು : ಜಾತ್ರೆಯ ಆವರಣ, ಮಹಾದಾಸೋಹ, ಪೋಲಿಸ್ ಚೌಕಿ ಪಕ್ಕದಲ್ಲಿ, ನಿಯೋಜಿತ ವಸತಿ ಸ್ಥಳಗಳು, ಲಭ್ಯವಿರುವ ಸೌಲಭ್ಯಗಳು:ತುರ್ತು ವೈದ್ಯಕೀಯಚಿಕಿತ್ಸೆ, ಪ್ರಥಮಚಿಕಿತ್ಸೆ, ಉಚಿತ ಚಿಕಿತ್ಸಾ ಸಲಹೆ ಮತ್ತು ಔಷಧಿ ವಿತರಣೆ ಹಾಗೂ ದಿನಾಂಕ 01/01/2026ರಿಂದ 18/01/2026ರವರೆಗೆ, ಸಮಯ ಬೆಳಿಗ್ಗೆ 8.00 ರಿಂದ ರಾತ್ರಿ 12.00ರವರೆಗೆ  24 ಗಂಟೆ ತುರ್ತು ವೈದ್ಯಕೀಯ ಚಿಕಿತ್ಸೆ : ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಚಿಕಿತ್ಸಕರು, ಆಯುರ್ವೇದ ಮಹಾವಿದ್ಯಾಲಯದ ವೈದ್ಯರು 32, ಸ್ನಾತಕೋತ್ತರ ವಿದ್ಯಾರ್ಥಿಗಳು 100, ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಪರಿಣಿತ ವೈದ್ಯರು (ಕಿಮ್ಸ ಕೊಪ್ಪಳ) – 10, ಅಂಬುಲೆನ್ಸ ವ್ಯವಸ್ಥೆ ಸಹ ಇರುತ್ತದೆ 03, ಅಂಬುಲೆನ್ಸ ವ್ಯವಸ್ಥೆಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ :-9632002808, 9741624504, 8747926455, 8088939400, ಕೆ ಎಸ್ ಹಾಸ್ಪಿಟಲ್ ಸಿಬ್ಬಂದಿ ನುರಿತ ತಜ್ಞ ವೈದ್ಯರು ಎಲ್ಲ ವಿಧದ ತುರ್ತು ಸೇವೆ 24 x 7 ಲಭ್ಯವಿರುತ್ತದೆ.==

ಶ್ರೀಗವಿಮಠದ ಆವರಣದಲ್ಲಿ ಬಾಳೆಹಣ್ಣು ಇತರ ಹಣ್ಣು ಎಸೆಯದಿರಲು ಮನವಿ  : 

ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದಿನಾಂಕ 05.01.26ರಂದು ಸೋಮವಾರ ಜರುಗುವ ಮಹಾರಥೋತ್ಸವದಲ್ಲಿ  ಮಹಾರಥೋತ್ಸವವು ಸಾಗುವ ಸಂಧರ್ಭದಲ್ಲಿ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ಮಾಹಾರಥಹೋತ್ಸವಕ್ಕೆ ಅರ್ಪಿಸುವುದು ಸಂಪ್ರದಾಯ. ಆದರೆ ಬಾಳೆಹಣ್ನು ಒಗೆಯುವುದು ಜಾಸ್ತಿ ಆಗಿದ್ದು, ಅದರಿಂದ ಸ್ವಚ್ಚತೆಗೆ ಹಾಗೂ ಎಷ್ಟೋ ಜನರಿಗೆ ಕಾಲು ಜಾರಿ ಬೀಳುವ ಸಂಧರ್ಭ ಬರುತ್ತವೆ. ಆದಕಾರಣ ಮುನ್ನಚ್ಚೆರಿಕೆಯ ಕ್ರಮವಾಗಿ ಸಧ್ಭಕ್ತಾಧಿಗಳು ಬಾಳೆಹಣ್ಣು ರಥೋತ್ಸವಕ್ಕೆ ಎಸೆಯಬಾರದೆಂದು  ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Tags: Appeal not to throw bananas and other fruits in the premises of Sri Gavi MathKoppal Gavimath News KoppalKoppal ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವSri Gavisiddheshwara Jatra Ramahotsava: Free health and medical servicesಶ್ರೀಗವಿಮಠದ ಆವರಣದಲ್ಲಿ ಬಾಳೆಹಣ್ಣು ಇತರ ಹಣ್ಣು ಎಸೆಯದಿರಲು ಮನವಿ
Previous Post

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

Next Post

ಬಲ್ಡೋಟ್ ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಭೂಮಿ, ಪರಿಸರ ರಕ್ಷಣೆ ಹಾಡು

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!