Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಪರಿಸರ ಉಳಿಯಲಿ ಗಾಂಧಿ ಬಳಗದಿಂದ ಮೌನ ಉಪವಾಸ ಸತ್ಯಾಗ್ರಹ

ಕಾರ್ಖಾನೆಗಳಿಂದ ಪರಿಸರ, ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ ಆನಂದತೀರ್ಥ ಪ್ಯಾಟಿ

Hosashake News by Hosashake News
November 23, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ದೇಶ, ಪರಿಸರ, ಪ್ರಾದೇಶಿಕ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಪರಿಸರ ಉಳಿಯಲಿ ಗಾಂಧಿ ಬಳಗದಿಂದ ಮೌನ ಉಪವಾಸ ಸತ್ಯಾಗ್ರಹ
Share on FacebookShare on Twitter

ಹೊಸಶಕೆ ನ್ಯೂಸ್–ಕೊಪ್ಪಳ: ಕೊಪ್ಪಳದ ಸುತ್ತಮುತ್ತ ಈಗಾಗಲೇ ಹಲವಾರು ಕಾರ್ಖಾನೆಗಳ ಉತ್ಪಾದನೆಯಿಂದ ಪರಿಸರ ಮತ್ತು ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ. ನೀರು, ಮಣ್ಣು, ಗಾಳಿ ಕಲುಷಿತಗೊಂಡಿದ್ದು ಜನರ ಅರೋಗ್ಯದಲ್ಲೂ ಕೂಡ ಬದಲಾವಣೆ ಆಗಿದೆ. ಕ್ಷಯ, ಅಸ್ತಮಾ, ಕ್ಯಾನ್ಸರ್ ನಂತ ಕಾಯಿಲೆಗಳು ಕಾಣಿಸಿ ರೈತರ ಬದುಕನ್ನು ನರಕಕ್ಕೆ ದೂಡಿದೆ ಎಂದು ಗಾಂಧಿ ಬಳಗದ ನೇತಾರರು  ಪರಿಸರವಾದಿ, ಸಾವಯವ ಕೃಷಿಕರಾದ ಆನಂದ ತೀರ್ಥ ಪ್ಯಾಟಿ ಹೇಳಿದರು.

ಬಲ್ಡೋಟಾ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದಿಂದ ಭಾನುವಾರ ಮೌನ ಉಪವಾಸ ಸತ್ಯಾಗ್ರಹ ನಡೆಯಿತು.

ನಗರದ ತಾ. ಪಂ. ಹತ್ತಿರ ಗಾಂಧೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೇಸರಿ,ಬಿಳಿ,ಹಸಿರಿನ ಖಾದಿ ನೂಲಿನ ಹಾರವನ್ನು ಹಾಕಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಗೌರವ ನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಕಾರ್ಖಾನೆಗಳ ವಿಸ್ತರಣೆ ಮಾಡಿದರೆ ಕೊಪ್ಪಳ ಮತ್ತು ಸುತ್ತಾಮುತ್ತ ಇರೋ ಹಳ್ಳಿಗಳು ಇನ್ನೂ ಹತ್ತೇ ವರ್ಷದಲ್ಲಿ ಸಂಪೂರ್ಣ  ಧೂಳ್ಮಯವಾಗಿ ಜನ ಜೀವನದ ಬದುಕು ಅಸ್ತವ್ಯಸ್ತಗೊಳ್ಳುತ್ತದೆ. ಇದನ್ನು  ಸರ್ಕಾರ ನಿಲ್ಲಿಸಬೇಕು ಸುಸ್ಥಿರ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ತೆರೆದು ಇಲ್ಲಿನ ಯುವಕರಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು  ಎಂದರು.

ಬಲ್ದೋಟಾ ಕಂಪನಿ ನಮ್ಮ ಪಾಲಿಗೆ ಈಸ್ಟ್ ಇಂಡಿಯಾ ಕಂಪನಿಯಷ್ಟೇ ಪಿಡುಗಾಗಿದೆ. ಕೊಪ್ಪಳದಿಂದ ಇದನ್ನು ಓಡಿಸಲು ಗಾಂಧಿ ಮಾರ್ಗವು ನಮಗೆ ಮುಖ್ಯವಾಗಿ ಬೇಕಾಗುತ್ತದೆ ಎಂದು   ಹೇಳಿದರು. 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದ ಆನಂದತೀರ್ಥ ಪ್ಯಾಟಿ. ಬಸವರಾಜ ಸವಡಿ, ಯುವರಾಜ ಬಡಿಗೇರ, ಶಿವಪ್ಪ ಹಡಪದ ಹಾಗೂ ಮಲ್ಲನಗೌಡ ಡಿ. ಕೈಗೊಂಡರು.

ಧರಣಿಯಲ್ಲಿ ಸಮವಸ್ತ್ರಧಾರಿಗಳಾಗಿ ಮೌನೇಶ ಹೊಸಕೆರಿ, ವೆಂಕಟೇಶ ಬಿ.ಕೆ, ಭೀಮಪ್ಪ ಹೂಗಾರ, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ಮೂಕಪ್ಪ ಮೇಸ್ತ್ರಿ ಬಸಾಪುರ, ಬಿ.ಎ.ಆಡೂರು, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಖಬೂಲ್ ರಾಯಚೂರು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಹಾದೇವಪ್ಪ ಮಾವಿನಮಡು, ಪ್ರಕಾಶ ಮೇದಾರ ಇದ್ದರು.ವೆಂಕಣ್ಣ ಕಟ್ಟಿ  ಮತ್ತಿತರರು ಪಾಲ್ಗೊಂಡಿದ್ದರು.

Tags: Baldota BSPLExindia's ongoing indefinite strike against expansion enters 24th dayHosashake Koppal newsKalyani SteelKirloskarKopal Silent hunger strike by Gandhi groupKoppal Daily News-HosashakeKoppal Silent hunger strike by Gandhi group to preserve environmentKoppal ಪರಿಸರ ಉಳಿಯಲಿ ಗಾಂಧಿ ಬಳಗದಿಂದ ಮೌನ ಉಪವಾಸ ಸತ್ಯಾಗ್ರಹKoppal-Factories have had a profound impact on the environment and the lives of wildlife. Anandatirtha PattiMukunda SumiSilent hunger strike by Gandhi group to preserve environmentಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕಲ್ಯಾಣಿ ಸ್ಟೀಲ್ಕಾರ್ಖಾನೆಗಳಿಂದ ಪರಿಸರಕಿರ್ಲೋಸ್ಕರ್ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ ಆನಂದತೀರ್ಥ ಪ್ಯಾಟಿಬಲ್ಡೋಟಾ ಬಿಎಸ್ಪಿಎಲ್ಮುಕುಂದ ಸುಮಿ
Previous Post

ಕುಷ್ಟಗಿಯಲ್ಲಿ ಸಿವಿಸಿ ಫೌಂಡೇಶನ್ ವತಿಯಿಂದ ನ. 26, ಮತ್ತು 27 ರಂದು ದೇಸಿ ಭತ್ತದ ತಳಿ ಪ್ರದರ್ಶನ

Next Post

ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುತ್ತಿದೆ: ನಾರಾಯಣಗುರುಗಳ ಆದರ್ಶ ಪ್ರಸ್ತುತ-ಕೆ.ವಿ.ಪ್ರಭಾಕರ್

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!