Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕೆಕೆಆರ್‌ಡಿಬಿ 2025- 26 ನೇ ಸಾಲಿನ 5 ಸಾವಿರ ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ-ಡಾ.ಅಜಯ್ ಸಿಂಗ್

ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ

Hosashake News by Hosashake News
July 25, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜಕೀಯ, ರಾಜ್ಯ, ಸಾಮಾಜಿಕ, ಸುದ್ದಿ
0
ಕೆಕೆಆರ್‌ಡಿಬಿ 2025- 26 ನೇ ಸಾಲಿನ 5 ಸಾವಿರ ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ-ಡಾ.ಅಜಯ್ ಸಿಂಗ್
Share on FacebookShare on Twitter

ಕೆಕೆಆರ್‌ಡಿಬಿ ಕ್ರಿಯಾ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಬೇಗ ಅನುಮೋದನೆ ಸಿಕ್ಕಿರೋದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಗತಿಗೆ ಹಿದೆಂದಿಗಿಂತಲೂ ಹೆಚ್ಚಿನ ವೇಗ ದೊರಕಲಿದೆ ಡಾ. ಅಜಯ್‌ ಧರಂಸಿಂಗ್‌, :  ಕೆಕೆಆರ್‌ಡಿಬಿ ಅಧ್ಯಕ್ಷರು ಕಲಬುರ್ಗಿ

 ಹೊಸಶಕೆ ನ್ಯೂಸ್- ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2025- 26 ನೇ ಸಾಲಿನ 5 ಸಾವಿರ ಕೋಟಿ ರು ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂದ್‌ ಗೆಲ್ಹೋಟ್‌ ಅವರು ಜುಲೈ 24 ರಂದು ಅನುಮೋದನೆ ನೀಡಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಅವರು ತಿಳಿಸಿದ್ದಾರೆ.

ಕೆಕೆಆರ್‌ಡಿಬಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಈ ಬಾರಿ ಜುಲೈನಲ್ಲೇ ಅಂಕಿತ ಹಾಕುವ ಮೂಲಕ ಕಲ್ಯಾಣ ನಾಡಿನ ಪ್ರಗತಿಗೆ ಹೊಸ ವೇಗ ನೀಡುವ ದಿಶೆಯಲ್ಲಿ ಹೊಸ ಅವಕಾಶ ಒದಗಿಸಿದ್ದಾರೆಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಧರ್ಮಸಿಂಗ್‌ ಖುದ್ದು ರಾಜಭವನಕ್ಕೆ ತೆರಳಿ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಮಂಡಳಿಯ ಕ್ರಿಯಾ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿ ರಾಜಭವನಕ್ಕೆ ರಾಜಭವನಕ್ಕೆ ಸದರಿ ಕ್ರಿಯಾ ಯೋಜನೆ ಕಡತ ರವಾನಿಸಿದ್ದರು. ಇದೀಗ ರಾಜ್ಯಪಾಲರು ತ್ವರಿತವಾಗಿ ಅಂಕಿತ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಲ್ಯಾಣ ಭಾಗದಲ್ಲಿ ಮಂಡಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. 2023- 24 ರ ಸಾಲಿನ ಕ್ರಿಯಾ ಯೋಜನೆಗೆ ರಾಜ್ಯಪಾಲರು ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿದ್ದರು. ಈ ಸಾಲಿನಲ್ಲಿ ಮಂಜಳಿಯ ಸಭೆ ಆಗಸ್ಟ್‌ 29 ರಂದು ನಡೆಸಲಾಗಿತ್ತು. ಆದಾಗ್ಯೂ ಮಾರ್ಚ್‌ 31 ರೊಳಗಾಗಿ ಕೆಕೆಆರ್‌ಡಿಬಿಯಿಂದ 2009 ಕೋಟಿ ರು ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸಲಾಗಿತ್ತು.

ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ. ಮೈಕ್ರೋ, ಮ್ಯಾಕ್ರೋ ಯೋಜನೆಯಡಿಯಲ್ಲಿನ ಅನುದಾನ ಹಂಚಿಕೆಯ ವಿವರಗಳಿರುವ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ ದೊರಕಿದೆ. 10. 5. 2025 ರಂದು ಜರುಗಿದ ಕೆಕೆಆರ್‌ಡಿಬಿ ಮಂಡಳಿಯ ಸಭೆಯಲ್ಲಿನ ಚರ್ಚೆಗಳು, ನಿರ್ಣಯಗಳಂತೆ ಹಾಗೂ ಮಂಡಳಿಯ ನಿಯಮಗಳಂತೆ, 2025– 26 ರ ಮೈಕ್ರೋ, ಮ್ಯಾಕ್ರೋ, ವಿವೇಚನೆ ಅನುದಾನ, ಆಡಳಿತಾತ್ಮಕ ವೆಚ್ಚ ಸೇರಿದಂತೆ ಎಲ್ಲಾ ಹಂತಗಳಲ್ಲಿಯೂ ಅನುದಾನ ಹಂಚಿಕೆ ಮಾಡಿ ರೂಪಿಸಲಾಗಿರುವ ಕ್ರಿಯಾ ಯೋಜನೆ ಜನಸಂಖ್ಯೆಗೆ ಅನುಗುಣವಾಗಿಯೂ ಇದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

2024- 25 ನೇ ಸಾಲಿನಲ್ಲಿ ಜುಲೈ ತಿಂಗಳ 1 ರಂದೇ ಮಂಡಳಿಯ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಸದರಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಆಗಸ್ಟ್‌ ತಿಂಗಳಲ್ಲಿ ಅನುಮೋದನೆ ನೀಡಿದ್ದರು. ಈ ಬಾರಿ 2025- 26 ನೇ ಸಾಲಿನ ಮಂಡಳಿಯ ಸಭೆಯನ್ನು ಶಾಸಕರು, ಸಂಸದರು, ಮಂತ್ರಿಗಳು ಒಳಗೊಂಡೆತೆ ಮೇ ತಿಂಗಳ 10 ರಂದೇ ನಡೆಸಿ ಸಿದ್ಧಪಡಿಸಿದ್ದ 5 ಸಾವಿರ ಕೋಟಿ ರುಪಾಯಿ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂಗ್‌ ಗೆಲ್ಹೋಟ್‌ ಅವರು ಜುಲೈ 3 ನೇ ವಾರದಲ್ಲೇ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಮಂಡಳಿಯಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಕೊಳ್ಳಲು ಹೆಚ್ಚಿನ ಅನುಕೂಲವಾದಂತಾಗಿದೆ . ಮುಖ್ಯಮಂತ್ರಿಗಳು ಮಂಡಿಸಿರುವ ಆಯವ್ಯವಯದಲ್ಲಿನ ಮಿತಿಯಂತೆಯೇ 5 ಸಾವಿರ ಕೋಟಿ ರುಪಾಯಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆ 5 ಸಾವಿರ ಕೋಟಿ ರುಪಾಯಿಗಳಿಗೆ ಕ್ರಿಯಾ ಯೋಜನೆ ತಯ್ಯಾರಿಸಲು ಅನುಮತಿ ನೀಡಿತ್ತು. ಅದರಂತೆಯೇ ಮಂಡಳಿಯ ಕ್ರಿಯಾ ಯೋಜನೆಗೆ ಇದೀಗ ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಇದು ಬರುವ ದಿನಗಳಲ್ಲಿ ಮಂಡಳಿಯ ಅನುದಾನ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಅವಕಾಶ ಒದಗಿಸಿದೆ .ಕೆಕೆಆರ್‌ಡಿಬಿ ಕ್ರಿಯಾ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಬೇಗ ಅನುಮೋದನೆ ಸಿಕ್ಕಿರೋದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಗತಿಗೆ ಹಿದೆಂದಿಗಿಂತಲೂ ಹೆಚ್ಚಿನ ವೇಗ ದೊರಕಲಿದೆ ಡಾ. ಅಜಯ್‌ ಧರಂಸಿಂಗ್‌, :  ಕೆಕೆಆರ್‌ಡಿಬಿ ಅಧ್ಯಕ್ಷರು ಕಲಬುರ್ಗಿ

Tags: 000 crore action plan for KKRDB 2025-26 - Dr. Ajay SinghGovernor signs Rs 5KKRDB Kalaburga News Hosashake DailyThe CDI index is being identified and a plan is being formulated based on Dr. Nanjundappa's report: Dr. Ajay Singhಕೆಕೆಆರ್‌ಡಿಬಿ 2025- 26 ನೇ ಸಾಲಿನ 5 ಸಾವಿರ ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ-ಡಾ.ಅಜಯ್ ಸಿಂಗ್ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ: ಡಾ.ಅಜಯ್ ಸಿಂಗ್
Previous Post

ರಾಬಕೊವಿ ಗೆ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಆಯ್ಕೆ

Next Post

ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ- ಸಿಇಓ ವರ್ಣಿತ್ ನೇಗಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ

ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದ ಶಿವರಾಜ್  ತಂಗಡಗಿ

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ – ಸಚಿವ ಶಿವರಾಜ ತಂಗಡಗಿ

ವಿಜಯೇಂದ್ರ, ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!