Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಗುತ್ತಿಗೆದಾರರ ಸಂಘದ ಆರೋಪ ಸತ್ಯಕ್ಕೆ ದೂರು  ಸ್ಟೋನ್ ಕ್ರಷರ್ ಮಾಲೀಕರ ಸಂಘದ ಸ್ಪಷ್ಟನೆ

ಕ್ರಷರ್ ಮಾಲೀಕರ ಸಂಕಷ್ಟವನ್ನು ನಿವಾರಿಸಲು ಏಕ ಮಾದರಿ ದರ ನಿಗದಿ

Hosashake News by Hosashake News
October 5, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಗುತ್ತಿಗೆದಾರರ ಸಂಘದ ಆರೋಪ ಸತ್ಯಕ್ಕೆ ದೂರು  ಸ್ಟೋನ್ ಕ್ರಷರ್ ಮಾಲೀಕರ ಸಂಘದ ಸ್ಪಷ್ಟನೆ
Share on FacebookShare on Twitter

ಪ್ರಸ್ತುತದಲ್ಲಿನ ಸಮಸ್ಯೆ ಪರಿಹಾರಕ್ಕೆ ಕ್ರಷರ್  ಏಕ ಮಾದರಿಯ ಪ್ರೇರಣಾ ಕನ್ಸಕ್ಷನ್  ಸಂಸ್ಥೆ ಆರಂಭ:ವಿ.ಕೆ.ನಾಲ್ವಾಡ್

ಹೊಸಶಕೆ ನ್ಯೂಸ್-ಕೊಪ್ಪಳ:  ಜಿಲ್ಲೆಯ ಗುತ್ತಿಗೆದಾರರಿಗೆ ಸಂಸದರು ಅಥವಾ ಇನ್ನಿತರ ಜನಪ್ರತಿನಿಧಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ.  ಮತ್ತು ಕ್ರಷರ್‌ಗಳ ವಿಷಯದಲ್ಲಿ ಸಂಸದರ ರಾಜಶೇಖರ ಅವರು ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ಹಿಡಿತ ಹೊಂದಿಲ್ಲ.  ನಮ್ಮ ಸಮಸ್ಯೆ ಪರಿಹಾರಕ್ಕೆ ಕಷರ್ ಮಾಲೀಕರೆಲ್ಲರೂ ಸೇರಿ ಏಕ ಮಾದರಿಯ ಪ್ರೇರಣಾ ಕನ್ಸಕ್ಷನ್ ಎಂಬ ಸಂಸ್ಥೆಯ ಮೂಲಕ ಸಾಮಗ್ರಿ ವಿತರಣೆ ಮಾಡುತ್ತಿದ್ದೇವೆ ಎಂದು  ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವಿ.ಕೆ.ನಾಲ್ವಾಡ್ ಹಾಗೂ ಕ್ರಷರ್ ಗಳ ಮಾಲಿಕರು ಸ್ಪಷ್ಟಪಡಿಸಿದ್ದಾರೆ

  ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕ್ರಷರ್‌ಗಳು ಇದ್ದು, ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಸಾಮಗ್ರಿಗಯನ್ನು ಉದ್ರಿ ಆಧಾರದಿಸಿ ಖರೀದಿಸಿ ನಿಗದಿತ ಸಮಯಕ್ಕೆ  ಬಿಲ್ ಪಾವತಿ ಮಾಡದೇ ತೊಂದರೆ ಕೊಡುತ್ತಿದ್ದಾರೆ.   ಎಲ್ಲಾ ಕ್ರಷರ್‌ಗಳ ಮಾಲೀಕರು ಒಂದು ಸಭೆ ಮಾಡಿ ಜಿಲ್ಲೆಯಲ್ಲಿರುವ ಗುತ್ತಿಗೆದಾರರು ಉದ್ರಿ ಆಧಾರದ ಮೇಲೆ ಕ್ರಷರ್‌ಗಳಿಂದ ಕಂಕರ್ ಮತ್ತಿತರೇ ಕಟ್ಟಡ ಕಾಮಗಾರಿಗಳ ಸಾಮಗ್ರಿಗಳನ್ನು ಪಡೆದು ಸುಮಾರು ದಿನಗಳಾದರು ಬಿಲ್ ಪಾವತಿ ಮಾಡದೇ ಇರುವುದರಿಂದ ಕ್ರಷ್‌ರಗಳು ಆರ್ಥಿಕ ನಷ್ಟ ಅನುಭವಿಸಿ ಕಾರ್ಯ ಸ್ಥಗಿತಗೊಳಿಸಿರುವ ಕುರಿತು ವಿವರಿಸಿದರು.
 ಗುತ್ತಿಗೆದಾರರು ಒಂದು ಕ್ರಷರ್‌ನಲ್ಲಿ ಬಾಕಿ ಮಾಡಿ ಅದನ್ನು ಪಾವತಿ ಮಾಡದೇ ಮತ್ತೊಂದು ಕಡೆ ಸಾಮಗ್ರಿಗಳನ್ನು ಪಡೆದು ಅಲ್ಲಿಯೂ ಕೂಡ ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿ ಮಾಡದೇ ಇರುವುದರಿಂದ ಕ್ರಷರ್‌ಗಳಿಗೆ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಈ ದೃಷ್ಟಿಯಿಂದ ಎಲ್ಲಾ ಕ್ರಷರ್ ಮಾಲೀಕರು ಸೇರಿ ಪ್ರೇರಣಾ ಕನ್ಸಟ್ರಕನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕವೇ ಸಾಮಗ್ರಿ ಖರೀದಿಸುವಂತೆ ನಿರ್ಧರಿಸಿದ್ದೇವೆ.  ಕ್ರಷರ್ ಮಾಲೀಕರ ಸಂಕಷ್ಟವನ್ನು ನಿವಾರಿಸಲು ಈ ಪದ್ಧತಿಯನ್ನು ನಾವು ಅನುಸರಿಸುತ್ತಿದ್ದೇವೆ ಎಂದು ತಿಳಿಸಿದರು.
ಆದರೆ ಕೆಲವು ಗುತ್ತಿಗೆದಾರರು ಪ್ರೇರಣಾ ಸಂಸ್ಥೆಯಿಂದಲೇ ಸಾಮಗ್ರಿ ಖರೀಸುವಂತೆ ಸಂಸದರು ಮತ್ತಿತರು ಜನಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.  ಎಲ್ಲಾ ಕ್ರಷ್‌ರಗಳಲ್ಲಿ ಉತ್ಪಾದನೆಯಾಗುವ ಸಾಮಗ್ರಿಗಳಿಗೆ ಏಕ ಮಾದರಿ ದರ ನಿಗದಿ ಮಾಡಿ ಮಾರಾಟ ಮಾಡುವ ಅವಶ್ಯಕತೆ ಇರುತ್ತದೆ ಎಂದು ನಿರ್ಧಾರ ಮಾಡಿ ಈ ಅಸೋಷಿಯೇಷನ್ ಆರಂಭಿಸಲಾಗಿದೆ ಎಂದು ಪ್ರೇರಣಾ ಸಂಸ್ಥೆಯ ಕೆ.ಜಾನಕಿರಾಮ್ ಅವರು ಸ್ಪಷ್ಟಪಡಿಸಿದರು.
ಕ್ರಷರ್ ಮಾಲೀಕರು ತಮಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪದ್ಧತಿ ಮಾಡಿಕೊಳ್ಳಲಾಗಿದೆ.  ಈ ವಿಷಯದಲ್ಲಿ ಸಂಸದರನ್ನು ಅನವಶ್ಯಕವಾಗಿ ಎಳೆದು ತರಬಾರದು.  ಸಂಸದರು ನಮಗೆ ಸಲಹೆ ನೀಡಿದ್ದಾರೆ ಹೊರತು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ   ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ಕೆ.ಜಾನಕಿರಾಮ್, ಜಡಿಯಪ್ಪ ಬಂಗಾಳಿ, ಮಂಜುನಾಥ ಸೋಂಪುರ, ಚಂದ್ರಕಾಂತ ಮಹಾಂತಯ್ಯಮಠ, ಅಮರೇಶ ಹೂಗರ  ಸೇರಿದಂತೆ ಇತರರು ಇದ್ದರು.
Tags: Contractors' Association's allegations are trueHosashake koppal daily news updetKoppal preerana newsSingle model rate fixed to alleviate the hardships of crusher ownersStone Crusher Owners' Association clarifiesಕೊಪ್ಪಳ:ಕ್ರಷರ್ ಮಾಲೀಕರ ಸಂಕಷ್ಟವನ್ನು ನಿವಾರಿಸಲು ಏಕ ಮಾದರಿ ದರ ನಿಗದಿಗುತ್ತಿಗೆದಾರರ ಸಂಘದ ಆರೋಪ ಸತ್ಯಕ್ಕೆ ದೂರು  ಸ್ಟೋನ್ ಕ್ರಷರ್ ಮಾಲೀಕರ ಸಂಘದ ಸ್ಪಷ್ಟನೆ
Previous Post

ಹೊಸಶಕೆ ದಿನಪತ್ರಿಕೆ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!