* ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ, || * ಜನರ ಬದುಕು ಉಳಿಯಬೇಕು ಬಹಳ ಮುಖ್ಯ : ಗವಿಶ್ರೀ
ಹೊಸಶಕೆ ನ್ಯೂಸ್-ಕೊಪ್ಪಳ: ಕಾರ್ಖಾನೆಗಳನ್ನು ಕಳಿಸಿ ಕೊಪ್ಪಳ ನಾಡನ್ನು ಉಳಿಸಿ, ಬನ್ನಿ ಉಸಿರು ಬಿಡುವ ಮುನ್ನ ಧ್ವನಿ ಎತ್ತೋಣ ಘೋಷವಾಕ್ಯದೊಂದಿಗೆ ಬಲ್ಡೋಟಾ ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆದ ಕೊಪ್ಪಳ ಬಂದ್, ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ಸಂಪೂರ್ಣ ಯಶಸ್ವಿಯಾಯಿತು.
ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ತಾಪನೆಗೆ ಸರ್ಕಾರ ಅನುಮತಿಸಿರುವದನ್ನು ಖಂಡಿಸಿ ಹಾಗೂ ಈಗಾಗಲೇ ಸ್ಥಾಪಿತವಾಗಿರುವ ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಪ್ಪಿಸಲು ಆಗ್ರಹಿಸಿ ಕೊಪ್ಪಳ ತಾಲೂಕ ಪರಿಸರ ಹಿತರಕ್ಷಣಾ ವೇದಿಕೆ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳು ಸೋಮವಾರ ಕರೆನೀಡಿದ್ದ ಕೊಪ್ಪಳ ಬಂದ್ ನಲ್ಲಿ ಪಕ್ಷಾತೀತಾವಾಗಿ ಎಲ್ಲಾ ಪಕ್ಷದ ಮುಖಂಡರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಕೊಪ್ಪಳ ನಗರದ ಸಾರ್ವಜನಿಕರು, ವಿದ್ಯಾರ್ಥೀ-ಯುವಕರು, ಮಹಿಳೆಯರು, ವಿವಿಧ ಧರ್ಮದ ದರ್ಮಗುರುಗಳು, ಸ್ವಾಮೀಜಿಗಳು ಬಂದ್, ಪ್ರತಿಭಟನಾ ಮೆರವಣಿಗೆ ಸೇರಿದಂತೆ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆಯಿಂದಲೆ ಸಾರಿಗೆ ಸಂಚಾರ, ಶಾಲಾ-ಕಾಲೇಜುಗಳು ಸೇರಿ ಅಂಗಡಿ ಮುಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು, ಜನರು ಸ್ವಇಚ್ಛೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡರು, ಗವಿಮಠದ ಆವರಣದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ನಗರದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ತಾಲೂಕ ಕ್ರೀಡಾಂಗಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯು ಜರುಗಿ, ಬಳಿಕ ಸಮಾವೇಶ ನಡೆಯಿತು.
ಗವಿಮಠದ ಆವರಣದಲ್ಲಿ ಸೇರಿದ್ದ ಜನಸ್ತೋಮದಲ್ಲಿ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಇತರ ಮಠಾಧೀಶರು ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯಲ್ಲಿ ಜನರು ಪ್ಯಾಕ್ಟರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಕಾರ್ಖಾನೆ ಹಠಾವೋ ಕೊಪ್ಪಳ ಬಚ್ಚಾವೋ ಎಂದು ಘೋಷಣೆಗಳನ್ನು ಕೂಗಿದರು.
ಹಲವು ಸಾಕ್ಷಿಗಳಿಗೆ ಕಾರಣವಾದ ಬೃಹತ್ ಸಮಾವೇಶ
ಕೊಪ್ಪಳ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾ ಚಳುವಳಿ ಬಳಿಕ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಕೊಪ್ಪಳದ ಸುಪ್ರಸಿದ್ಧ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.
ಈಗಾಗಲೇ ಇರೋ ಅನೇಕ ಸ್ಟೀಲ್ ಪ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ಸಮಾವೇಶದಲ್ಲಿ ವಿಡಿಯೋ ಪ್ರದರ್ಶನ ಮಾಡಲಾಯಿತು. ದೂಳು ಮತ್ತು ಹೊಗೆಯಿಂದ ಜನರು ಸಂಕಷ್ಟ ಪಡುತ್ತಿರುವ ದೃಶ್ಯಗಳನ್ನು ನೋಡುತ್ತಲೇ ಗವಿಮಠದ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಹಾಕಿ, ಕೊಪ್ಪಳ ಸಾಂಸ್ಕೃತಿಕ ರಾಜಧಾನಿಯಾಗಿದೆ. ಆದರೆ, ಇದೀಗ ಕರಿ ಅರಳಿಯಂತಾಗಿದೆ. ಬಲ್ಡೋಟಾ ಸೇರಿದಂತೆ ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ ಎಂದರು.
ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ, ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆಗಳಿವೆ. ಬರೀ ಕಾರ್ಖಾನೆಗಳೇ ಇದ್ದರೇ ಜನ ಇರುವುದಾರು ಎಲ್ಲಿ? ಇದೇ ರೀತಿ ಕಾರ್ಖಾನೆ ಆರಂಭವಾದರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲಲ್ಲಿ ಹೋಗುವವರು ಕಡಿಮೆಯಾಗುತ್ತಾರೆ. ನರಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಕೊಪ್ಪಳ ತಿಪ್ಪೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುತ್ತಮುತ್ತಲಿನ ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಅಸ್ತಮಾ ಬರುತ್ತಿದೆ. ಇರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಹೊಗೆ ಉಗಳುವ ಕಾರ್ಖಾನೆಗಳನ್ನು ನಮಗೆ ಕಳಿಸುವ ಕೆಲಸ ಸರ್ಕಾರ ಮಾಡಬಾರದು. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿರಬಾರದು. ಸರ್ಕಾರ ಬಡವರ ಪರ ಇರಬೇಕು. ಸರ್ಕಾರ ಕೊಪ್ಪಳ ಜನರನ್ನು ಜೋಪಾನ ಮಾಡಬೇಕಿದೆ. ಸರ್ಕಾರ ತಾಯಿಯಿದ್ದಂತೆ, ವಿಷ ಹಾಕುತ್ತೀರೋ ಅಥವಾ ಅಮೃತ ಹಾಕುತ್ತಿರೋ ನಿಮಗೆ ಬಿಟ್ಟಿದ್ದು. ಕೊಪ್ಪಳ ಜನರಿಗೆ ಬದುಕಲು ಅವಕಾಶ ನೀಡಿ ಎಂದು ವಾಗ್ದಾಳಿ ಮಾಡಿದರು.
ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ..
ಸಮಾವೇಶದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜೆಡಿಎಸ್ ಮುಖಂಡ ಸಿ ವಿ ಚಂದ್ರಶೇಖರ್, ಗಿಣಗೇರಿ ಶ್ರೀಕಂಠ ಸ್ವಾಮಿಗಳು, ಮುಸ್ಲಿಂ ಧರ್ಮ ಗುರು ಮಹಪ್ತಿ ನಜೀರ್ ಅಹ್ಮದ, ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ,ದೊಡ್ಡನಗೌಡ ಪಾಟೀಲ , ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಗವಿಸಿದ್ದಪ್ಪ ಕಂದಾರಿ, ಮಾಜಿ ಸಚಿವ ಹಾಲಪ್ಪ ಆಚಾರ್ , ಹೋರಾಟಗಾರ ರಾಘವೇಂದ್ರ ಕುಷ್ಟಗಿ ಸೇರಿದಂತೆ ಇತರರು ಮಾತನಾಡಿದರು.
ಕಾರ್ಖಾನೆಗಳಿಂದ ಜನರ ಬದುಕಿನ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಭಾವುಕರಾದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು
ಸಮಾವೇಶ ಉದ್ದೇಶಿಸಿ ಮಾತನಾಡಿದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದೇಶದ ಪ್ರಗತಿಯಲ್ಲಿ ಕಾರ್ಖಾನೆಗಳು ಬೇಕು, ಆದರೆ ಅವು ಎಲ್ಲಿ ಸ್ಥಾಪಿಸಬೇಕು ಎನ್ನುವುದು ಬಹಳ ಮುಖ್ಯ, ನಮ್ಮಲ್ಲಿ ಎರಡುನೂರಕ್ಕು ಹೆಚ್ಚುಕಾರ್ಖಾನೆಗಳು ಇವೆ ಇವುಗಳಲ್ಲಿ ಕೆಲವು ಹೆಚ್ಚು ಅಪಾಯಕಾರಿ ಕಾರ್ಖಾನೆಗಳು ಇವೆ. ಇನ್ನು ಹೆಚ್ಚಿನ ಕಾರ್ಖಾನೆಗಳು ಬರಲಿವೆ, ತಾಲ್ಲೂಕಿನ ಸುತ್ತಮುತ್ತ ಹಲವು ಪ್ಯಾಕ್ಟರಿಗಳು ಆದರೆ ಜನ ಎಲ್ಲಿಗೆ ಹೋಗಬೇಕು, ಎನ್ನುವ ಪ್ರಶ್ನೆ ಇದೆ.
ಕೊಪ್ಪಳ ನರಕಕ್ಕಿಂತ ಹೆಚ್ಚು ಆಗಲಿದೆ, ತೊಟ್ಟಿಲಕ್ಕೆ ಹೋಗುವವರ ಸಂಖ್ಯೆ ಕಡಿಮೆ ಮಸಣಕ್ಕೆಹೋಗುವವರು ಹೆಚ್ಚುಆಗಲಿದೆ. ಕೊಪ್ಪಳ ಇವಾಗ ತಿಪ್ಪೇ ಆಗಿದೆ, ಗಿಣಗೇರ ಹಿರೇಬಗನಾಳ ಸೇರಿ ಇತರಡೆ ಹೋದರೆ ನಮಗೆ ಅಲ್ಲಿನ ಪರಿಸ್ಥಿತಿ ಅರಿವಿಗೆ ಬರುತ್ತಿದೆ, ಈಗಾಗಲೇ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನಮ್ಮ ಆಯುಷ್ಯಕಡಿಮೆಆಗುತ್ತಿದೆ ಪ್ಯಾಕ್ಟರಿಯವರ ಆಯುಷ್ಯ ಹೆಚ್ಚಾಗುತ್ತಿದೆ.
ಗಾಳಿ ವಾತಾವರಣ ಕೆಟ್ಟಿದೆ, ಇನ್ನೂ ಹದಗೆಡುತ್ತಿದೆ, ಪರಿಸ್ಥಿತಿ ಹೀಗೆ ಮುಂದುವರೆದರೆ ಹೇಗೆ, ಇರುವ ಒಂದೆ ಒಂದು ನದಿ ತುಂಗಭದ್ರಾ ಮಾತ್ರ…. ಇರುವ ನದಿಯು ಕಲಷಿತವಾಗುತ್ತಿದೆ, ನಾವು ಎಷ್ಟೇ ಅಭಿವೃದ್ಧಿ ಆದ್ರು, ಡಿಜಿಟಲ್ ಕರಣವಾದರೂ ಸಹ ನಮಗೆ ರೊಟ್ಟಿ ಬೇಕು ಅಂದ್ರೆ ಭೂಮಿ ಬೇಕು….ನಾನು ಈ ಹೋರಾಟಕ್ಕೆ ಯಾಕೇ ಬಂದೆ, ಕೊಪ್ಪಳ ಮಠದ ಭಕ್ತರು ಹಿತವು ಮುಖ್ಯವೆಂದು ಭಾವುಕರಾಗಿ ಮಾತನಾಡಿ, ನಾವು ಉಳಿಯಬೇಕು, ನಾನು ಆತ್ಮಸಾಕ್ಷಿಯಾಗಿ ಬಂದಿದ್ದೇನೆ, ಜನರ ಬದುಕು ಉಳಿಯಬೇಕು ಬಹಳ ಮುಖ್ಯ ವಾಗಿದೆ. ಎಂದು ಹೇಳುತ್ತಲೆ ಭಾವುಕರಾಗಿ ಕಣ್ಣಿರು ಹಾಕಿದರು.
ನನ್ನ ಮಕ್ಕಳು ಕಷ್ಟದಲ್ಲಿದ್ದಾಗ ನಾನುಹೊರಗಡೆ ಬರದಿದ್ದರೆ ಹೇಗೆ, ನಾನು ಈಹೋರಾಟದ ನೇತೃತ್ವ ವಹಿಸಿಕೊಳ್ಳುವದಿಲ್ಲ, ಗಾಳಿ. ನೀರು, ಪರಿಸರ ಎಲ್ಲರಿಗೂಬೇಕು, ಸತ್ಯವನ್ನು ಹೇಳಬೇಕು ಅದಕ್ಕೆ ನಾನು ನಿಮಗೆ ಹೋರಾಟಕ್ಕೆ ಕರೆನೀಡಿದೆ. ನಾನು ಗವಿಸಿದ್ದಪ್ಪನನ್ನು ಎಷ್ಟು ಪ್ರೀತಿಸುತ್ತೇನೆ ಅಷ್ಟೇ ಜನರನ್ನು ಪ್ರೀತಿಸುತ್ತೇನೆ…. ನಾನು ಹೃದಯ,ಪ್ರೇಮದಿಂದ ಗೆದಿದ್ದೇನೆ, ನಾನು ಯಾರ ವಿರುದ್ಧವೂ ಗುಡಗಿಲ್ಲ, ಸಡ್ಡುವಡೆದಿಲ್ಲ, ಎಂ ಎಸ್ ಪಿಎಲ್ ಗೆ ನಾವು ಯಾಕೇ ವಿರೋಧ ಮಾಡಬೇಕು, ಕೊಪ್ಪಳ ಸಂಸ್ಕೃತಿಯ, ಸಾಂಸ್ಕೃತಿಕ, ಕಲಾವಿದ, ಹೋರಾಟ ಗಾರರ ಬಿಡು, ಇಷ್ಟು ಪ್ಯಾಕ್ಟರಿಗಳು ಇವೆ ಅಲ್ಲಿ ಕೇವಲ ಪೆಗ್ಗು, ಹೆಗ್ಗು ಇವೆ.
ಕಾರ್ಖಾನೆಯವರು ಹೇಳುತ್ತಿದ್ದಾರೆ, ಜರ್ಮನ್ ಟೆಕ್ನಾಲಜಿ ಎಂದು ಮೊದಲು ಜರ್ಮನ, ಆಮೇಲೆ ಇಂಡಿಯಾ, ಬಳಿಕದ ಪರಿಸ್ಥಿತಿ ನಮ್ಮ ಕಣ್ಣುದೆರುಗೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು ನಾನು ಈ ಹೊಸ ಪ್ಯಾಕ್ಟರಿಗೆ ವಿರೋಧ ಇಲ್ಲ, ಎಲ್ಲಕಡೆ ಪ್ಯಾಕ್ಟರಿಗಳು ಆದರೆ ನಾವು ಎಲ್ಲಿ ಹೋಗಬೇಕು..!? ಇಲ್ಲಿ ಒಂದು ಮಾಯಾಜಾಲವೇ ಇದೆ, ಇಲ್ಲಿರುವ ಕಾರ್ಖಾನೆಗಳು ಮೂವತ್ತು ವರ್ಷಗಳಿಂದ ಇವೆ ಅವುಗಳಿಂದ ಆಗಿರುವ ಲಾಭ ಏನು.. ಹೊಸ ಚಿಂತನೆ ಬೇಕು,
ನಾನು ಭಕ್ತರಿಗೆ ಬಡಿದಾಡುವಕ್ಕೆ ಹಚ್ಚುವವನಲ್ಲ, ಭಕ್ತಿಯಲ್ಲಿ ಹಚ್ಚುವೆ. ಇವಾಗ ಇದ್ದ ಪ್ಯಾಕ್ಟರಿಗಳು ವಿಸ್ತರಣ ಆಗಬಾರದು, ಹೊಸ ಪ್ಯಾಕ್ಟರಿಗಳ ಸ್ಥಾಪನೆ ಬೇಡ, ಈ ಬಗ್ಗೆ ಸರ್ಕಾರ ಚಿಂತನೆ ಮಾಡಲಿ, ನಮ್ಮ ಹೋರಾಟ ತಾತ್ವಿಕ, ಸಾತ್ವಿಕವಾಗಿರಬೇಕು ಎಂದರು
+++
ಜನಪ್ರತಿನಿಧಿಗಳನ್ನು ತರಾಟೆಗೆ…
ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಕೈಗಾರಿಕೆ ಸ್ಥಾಪನೆ ಆಗುತ್ತಿದ್ದರು ಸುಮ್ನೆ ಇದ್ದಿರಿ…ಯಾಕೇ..!? ನಮಗೆ ಯಾವುದೇ ಕಾರಣ ಬೇಡ, ಸರ್ಕಾರ ನಿಮ್ಮದು ಇದೆ, ಹೋಗಿ ಕಾರ್ಖಾನೆ ರದ್ದು ಆದೇಶ ತರಬೇಕು… ಜನಪ್ರತಿನಿಧಿಗಳು ನಮ್ಮ ದನಿಯಾಗಿ ಕೆಲಸ ಮಾಡಲಿ, ನಿಮ್ಮ ಪ್ರಭಾವ ಇದೆ, ಪ್ರಯತ್ನ ನಿಮ್ಮ ಜವಾಬ್ದಾರಿ ಇದೆ, ಎಲ್ಲಾ ಜನಪ್ರತಿನಿಧಿಗಳ ಉತ್ತರಕ್ಕಾಗಿ ಕಾಯುತ್ತೇವೆ, ನಮ್ಮ ಪರವಾಗಿ ಒಳ್ಳೆಯ ಕೆಲಸ ಮಾಡಿರಿ. ನಮನ್ನು ಜಪಾನ್‌ಮಾಡುವುದು ಬೇಡ, ಜೋಪಾನ ಮಾಡಿರಿ, ಯಾವುದೇ ಅಹಿತಕರ ಘಟನೆಗಳಿಗೆ ಹೋಗಬಾರದು, ನಾವು ಸರ್ಕಾರವನ್ನು ನಿಮ್ಮನ್ನು ಕೇಳುತ್ತೇವೆ ಸರ್ಕಾರ ತಾಯಿಇದ್ದ ಆಗೆ, ನಮಗೆ ನ್ಯಾಯ ಕೊಡಿ, ನಾವು ಸತ್ಯದ ಪರದ್ವನಿ ಎತ್ತಿದ್ದೇವೆ ನ್ಯಾಯಕೊಡಿ ಎಂದರು
==
ಸಮಾವೇಶದಲ್ಲಿ ಮೊದಲು ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳದಲ್ಲಿ ಹೊಸ ಕೈಗಾರಿಕೆ ಸ್ಥಾಪನೆ ಬೇಡವೆಂದು ನಾವು ಸಿಎಂ ಅವರ ಜೊತೆ ಮಾತನಾಡಿದ್ದೇವೆ, ಜನರಿಗೆ ತೊಂದರೆ ಆಗುತ್ತಿದ್ದರೆ, ಈ ಬಗ್ಹೆ ಪರಿಶೀಲಿಸುವ ಭರವಸೆ ನೀಡಿದ್ದಾರೆ, ನಾವು ಯಾವುದೆ ಕಾರ್ಖಾನೆ ವಿರುದ್ಧ ಇಲ್ಲ, ಜನರಿಗೆ ತೊಂದರೆ ಆಗದಂತೆ ಸ್ಥಾಪಿಸಲು ಮನವಿ ಮಾಡಿದ್ದೇವೆ ಎಂದರು.
==
ನಮ್ಮ ಬದುಕಿಗೆ ನಾವೇ ನೇತೃತ್ವ, ಜನರ ಬದುಕು ನ್ಯಾಯಯುತ ಬದುಕಿಗೆ ಕಾರ್ಖಾನೆಗಳಿಂದ ಸಂಕಷ್ಟ ಬಂದೊದಗಿದೆ. ಜನರು ಹಲವು ರೋಗಗಳಿಂದ ಬಳಲುತ್ತಿದ್ದು, ಬದುಕು ಸಾಗಿಸುವುದು ತೀರಾ ದುಸ್ತರವಾಗಿದೆ ತಕ್ಷಣ ನಾವೇಲ್ಲರೂ ಎಚ್ಛತ್ತು ಜನರ ಉಸಿರು ಉಳಿಸಬೇಕು, ಜನಜಾಗೃತಿಬೇಕಾಗಿದೆ, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮನ್ನು ಬದುಕಲು ಬಿಡಿರಿ : ಗಿಣಗೇರಿ ಶ್ರೀಕಂಠ ಸ್ವಾಮಿಗಳು
== ಉದ್ಯಮ ಗಳು ಒಂದೇ ಕಡೆ ಕ್ರೂಢೀಕರಣವಾಗಬಾರದು, ಗಿಣಗೇರ ಸೇರಿ ಹತ್ತಾರು ಹಳ್ಳಿಗಳ ಜನ ಜೀವನ ತುಂಬಾ ಅಸ್ತವ್ಯಸ್ತತೆ ಆಗಿದೆ, ಬಾದಿತ ಹಳ್ಳಿಗಳ ಐಎಂ ನಿಂದ ಜನರ ಆರೋಗ್ಯ ಸಮೀಕ್ಷೆ ಆಗಬೇಕು. ಎಂಎಸ್ಪಿಎಲ್ ಕಾರ್ಖಾನೆಗೆ ಸರ್ಕಾರ ನೀಡಿರುವ ಅನುಮತಿಯನ್ನು ತಕ್ಷಣ ರದ್ದುಗೊಳಿಸಬೇಕು. ಗದಗಿ ಕಪ್ಪತಗುಡ್ಡ ಉಳಿವಿಗಾಗಿ ಹಾಗೂ ಪೊಸ್ಕೊ ಚಳುವಳಿ ತರಹ ಹೋರಾಟ ನಡೆಯಬೇಕು. ಅಣುಸ್ಥಾವರ ಸ್ಥಾಪನೆಗೆ ಕೊಪ್ಪಳ ತಾಲ್ಲೂಕಿನ ಹಳ್ಳಿಗಳಲ್ಲಿ ಸಮೀಕ್ಷೆ ನಡೆದಿದೆ, ಇದೊಂದು ಅಪಾಯಕಾರಿ ಬೆಳವಣಿಗೆ, ಅಣುಸ್ಥಾವರ ಸ್ಥಾಪನೆ ಬೇಡ, ಪರಿಸರ ಸ್ನೇಹಿ ಆಗಿರುವ ಸೂರ್ಯಶಕ್ತಿ ಉತ್ಪಾದನೆ ಆಗಲಿ, ನಮಗೆ ಎಲ್ಲದಕ್ಕೂ ಶಿಕ್ಷಣ ಬೇಕು, ಕೊಪ್ಪಳ ವಿ ವಿ ರದ್ದು ಆಗುವ ಅಪಾಯ ಇದೆ, ಕೊಪ್ಪಳದಲ್ಲಿ ಸ್ನಾತಕೋತ್ತರ ಇದ್ದಾಗ ಏಳುನೂರು ವಿದ್ಯಾರ್ಥಿಗಳು ಇದ್ದರು, ತಳಕಲ್ ಗೆ ಸ್ಥಳಾಂತರ ಆದ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ, ಹೀಗೆ ಮುಂದುವರೆದರೆ ಕೊಪ್ಪಳ ಮತ್ತು ಜಿಲ್ಲೆಯ ಜನರ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ : ಅಲ್ಲಮಪ್ರಭು ಬೆಟ್ಟದೂರ, ಹಿರಿಯ ಸಾಹಿತಿ, ಹೋರಾಟಗಾರರು
== ಮುಸ್ಲಿಂ ಧರ್ಮ ಗುರು ಮಹಪ್ತಿ ನಜೀರ್ ಅಹ್ಮದ ಮಾತನಾಡಿ, ಕೊಪ್ಪಳವನ್ನು ನರಕವನ್ನಾಗಿ ಮಾಡಲು ಬಿಡುವದಿಲ್ಲ, ನಾವು ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪನೆಗೆ ಬಿಡಬಾರದು, ಈಗಿರುವ ಕಾರ್ಖಾನೆಗಳಿಂದ ಅನುಭವಿಸುತ್ತಿರುವ ಸಂಕಷ್ಟ ಹೇಳತೀರುದು, ಒಗ್ಗಟ್ಟಿನಿಂದ ನಾವು ನಮ್ಮ ಜನರ ರಕ್ಷಣೆಗಾಗಿ ಮುಂದಾಗಬೇಕೆಂದರು.


++++ ನಾವು ಇಂದು ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. ಕೊಪ್ಪಳದ ಪರಿಸರ ಇಂದುಹೇಗೆ ಇದೆ ಅದರ ಪರಿಸ್ಥಿತಿ ನಾವು ಅನುಭವಿಸುತ್ತಿದ್ದೇವೆ. ನಾವು ಸಿಎಂ ಅವರನ್ನು ಭೇಟಿ ಮಾಡಿ ಕಾರ್ಖಾನೆ ಸ್ಥಾಪನೆ ಬೇಡ ಎಂದು ಮನವಿ ಮಾಡಿದ್ದೇವೆ, ಈ ಬಗ್ಗೆ ಅವರು ಸಕರತ್ಮಕವಾಗಿ ಸ್ಪಂದಿಸಿದ್ದಾರೆ. ನಾವು ಅಧಿಕಾರಸಲ್ಲಿದ್ಸವರಿಂದ ತಪ್ಪು ಆಗಿದೆ, ರೈತರು ಇಂದುಸ್ಪರ್ಧಾತ್ಮಕವಾಗಿ ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ,ಕಾರ್ಖಾನೆ ಟೌನ್ ಶೀಪ್ ಮಾಡಬೇಕಾಗಿದೆ, ಈಗಾಗಲೇ ಇರುವ ಕಾರ್ಖಾನೆಗಳಿಂದ ಜನರ ಬದುಕು ಹಾಳಾಗಿದೆ, ಸಿಂಗಟಾಲೂರ ಏತ ನೀರಾವರಿ ಜಾರಿಬರಲಿದೆ, ಆದರೆ ವಿವಿಧ ಕಾರ್ಖಾನೆಗಳಿಗೆ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ, ಕಾರ್ಖಾನೆಗಳು ನಿಯಮಗಳನ್ನು ಪಾಲಿಸುತ್ತಿಲ್ಲ, ಜನರು ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು. ಬದುಕುನ್ನು ಕಟ್ಟಿಕೊಳ್ಳುವದಕ್ಕಾಗಿ ಪರಿಸರ ಸಂರಕ್ಷಣೆಗಾಗಿ ಹೋರಾಟ ಮುಂದುವರೆಯಲಿ : ಸಂಗಣ್ಣ ಕರಡಿ, ಮಾಜಿ ಸಂಸದರು
+++ ಕಾರ್ಖಾನೆಗಳಿಂದ ಅಲ್ಲಿಯ ಹಳ್ಳಿಯ ಜನರು ಅನುಭವಿಸುತ್ತಿರುವದನ್ನು ನೋಡಿದರೆ ಅಲ್ಲಿಯ ಪರಿಸ್ಥಿತಿ ಕಣ್ಣುದೆರುಗೆ ಇದೆ. ಯಾವುದೇ ಕಾರಣಕ್ಕೂ ಇಲ್ಲಿ ಕಾರ್ಖಾನೆ ಸ್ಥಾಪನೆ ಬೇಡ, ಇದರ ಸ್ಥಳಾಂತರ ಕ್ಕೆ ನಿರಂತರ ಒಗ್ಗಟ್ಟಿನ ಹೋರಾಟ ಮುಂದುವರೆಯಲಿದೆ : ಸಂಸದ ರಾಜಶೇಖರ ಹಿಟ್ನಾಳ
+++++ ನಾವೇಲ್ಲರೂ ಕೊಪ್ಪಳದಲ್ಲಿ ಆರೋಗ್ಯದಿಂದ ಬದುಕಬೇಕಾದರೆ ಹೋರಾಟ ಅನಿವಾರ್ಯ ವಾಗಿತ್ತು, ಹೋರಾಟವು ಪಕ್ಷಾತೀತಾವಾಗಿದೆ. ಇಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ, ಜನರ ಸುರಕ್ಷಿತ ಆರೋಗ್ಯ ಕ್ಕಾಗಿ ಹೋರಾಟ ಅನಿವಾರ್ಯ, ಗವಿಶ್ರೀ ಗಳು ಸೇರಿ ಎಲ್ಲಾ ಧರ್ಮಗುರುಗಳು ಭಾಗಿಯಾಗಿದ್ದಾರೆ.ಎಂ ಎಸ್ ಪಿ ಎಲ್ ವಿಸ್ತೀರ್ಣೆ ಈಗಾಗಲೇ ಸ್ಥಾಪನೆ ಕಾರ್ಯ ನಡೆದಿದೆ, ಇದನ್ನು ತಡೆಗಟ್ಟುವ ಕೆಲಸ ಆಗಬೇಕು, ನಮ್ಮ ಹೋರಾಟ ಸರ್ಕಾರಗಳಿಗೆ ತಲುಪಿದೆ, ಸುಮಾರು ಮೂವತ್ತು ಹಳ್ಳಿಗಳ ಜನರ ಬದುಕು ಹೇಗೆ ಇದೆ ಎಂದು ನೋಡುತ್ತಿದ್ದೇವೆ, ಈ ಎಲ್ಲಾ ಕಾರ್ಖಾನೆ ಯವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಹಳ್ಳಿಗರಿಗೆ ಮಾತ್ರವಲ್ಲ ಕೊಪ್ಪಳ ನಗರದ ಜನರ. ಆರೋಗ್ಯದ ಮೇಲೆ ಪರಿಣಾಮ ಬಿರೀದೆ. ಹೊಸ ಕಾರ್ಖಾನೆ ಬೇಡ, ಇರುವ ಕಾರ್ಖಾನೆಗಳಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಸರ್ಕಾರ ಗಮನಿಸಬೇಕು.: ಸಿ ವಿ ಚಂದ್ರಶೇಖರ್, ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರು
++++ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕಾರ್ಖಾನೆಗೆ ಗಳಿಗೆ ನಾವು ಸ್ವಾಗತ ಕೋರಿದ್ದೇವೆ, ಆದ್ರೆ ಅದರಿಂದ ಆಗುತ್ತಿರುವ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ, ಸರ್ಕಾರ ಕೂಡಲೇ ಹೊಸ ಕಾರ್ಖಾನೆ ಸ್ಥಾಪನೆಗೆ ನೀಡಿರುವ ಅನುಮೋದನೆಯನ್ನು ರದ್ದುಪಡಿಸಬೇಕು ಹಾಗೂ ಸ್ಥಾಪಿತ ಕೈಗಾರಿಕೆಗಳಿಂದ ಆಗುತ್ತಿರುವ ತೊಂದರೆ, ಸರ್ಕಾರದ ನಿಯಮಗಳ ಉಲ್ಲಂಘನೆ ಬಗ್ಗೆ ಕ್ರಮಜರುಗಿಸಬೇಕು
++++ ದೊಡ್ಡನಗೌಡ ಪಾಟೀಲ , ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಗವಿಸಿದ್ದಪ್ಪ ಕಂದಾರಿ ಮಾತನಾಡಿ ಜನರ ಜೀವನದ ರಕ್ಷಣೆ ಗಾಗಿ ಕಾರ್ಖಾನೆ ಸ್ಥಾಪನೆ ಬೇಡ. ಮಾತನಾಡಿ, ಪ್ರಕೃತಿ ಕೊಟ್ಟಿರುವ ಪರಿಸರವನ್ನು ನಾವು ಕಾಪಡಿಕೊಳ್ಳಬೇಕಾಗಿದೆ, ಈ ಹೋರಾಟಕ್ಕೆ ಯಶಸ್ಸು ಸಿಗುತ್ತದೆ, ತುಂಗಭದ್ರಾ ಡ್ಯಾಂ ನ ನೀರನ್ನು ಎಲ್ಲಾ ಪ್ಯಾಕ್ಟರಿಯವರು ಬಳಸಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಚಿಂತನೆ ನಡೆಯಬೇಕಾಗಿದೆ.
ಶಾಸಕ ಜನಾರ್ಧನ ರೆಡ್ಡಿ, ಮಾತನಾಡಿ, ಶಾಸಕ ರಾಘವೇಂದ್ರ ಅವರ ಮಾತಿನಲ್ಲಿ ಹೇಳಿದಂತೆ ಸಿಎಂ ಅವರು ಮಾತುಕೊಟ್ಟಂತೆ ಯಾವುದೇ ಕಾರಣಕ್ಕೂ ಇಲ್ಲಿ ಪ್ಯಾಕ್ಟರಿಗೆ ಅವಕಾಶ ಬೇಡ, ಇದೇ ಹೋರಾಟ ಅಂತಿಮವಾಗಲಿ ಅವರ ಮಾತಿನಂತೆ ನಡೆದರೆ ಸಾಕು,ನಾವೇಲ್ಲರೂ ಸದನದಲ್ಲಿ ಈ ಬಗ್ಗೆ ದ್ವನಿ ಎತ್ತುತ್ತೇವೆ.
++++ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಉದ್ಯಮಗಳು ಬೇಕು, ಆದ್ರೆ ಅವು ಎಲ್ಲಿರಬೇಕು ಎನ್ನುವುದು ಸರ್ಕಾರಕ್ಕೆಗೊತ್ತಿರಬೇಕು, ಇಲ್ಲಿ ಐವತ್ತಕ್ಕೂ ಹೆಚ್ಚು ಪ್ಯಾಕ್ಟರಿಗಳು ಇವೆ , ಅವುಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯದಿಂದ ಆಗಿರುವ ಜನರ ಆರೋಗ್ಯದ ಮೇಲೆನ ಪರಿಣಾಮ ಹಾಗೂ ಪರಿಸರ ಉಳಿವಿಗಾಗಿ ಸರ್ಕಾರ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು
+++++ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ, ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆಯಿಂದ ಅರಣ್ಯ ನಾಶವಾಗಿದೆ, ಪ್ಯಾಕ್ಟರಿಗಳಿಂದ ಜನರ ಆರೋಗ್ಯ ಹಾಳಾಗುತ್ತಿದೆ, ನದಿ, ಡ್ಯಾಂನಲ್ಲಿ ನೀರು ಇಲ್ಲ, ಅರಣ್ಯ ಉಳಿಸಿ, ಅಕ್ರಮ ಗಣಿಗಾರಿಕೆ ತಡೆಗಟ್ಟಿರಿ. ಕಾರ್ಖಾನೆಗಳ ಕಳುಹಿಸಿ ಮನುಷ್ಯರನ್ನು ಉಳಿಸಿ ಹೋರಾಟ ಮುಂದುವರೆಯಲಿ ಎಂದು ಹೇಳಿದರು.