*ಚುನಾವಣೆಯಿಂದ ದೂರ ಉಳಿದ ಕೆಎಂಎಫ್ನ ಮಾಜಿ ಅಧ್ಯಕ್ಷ ಭೀಮ ನಾಯ್ಕ
ಹೊಸಶಕೆ ನ್ಯೂಸ್-ಬಳ್ಳಾರಿ: ರಾಬಕೊವಿ (ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ) ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಕಾರಟಗಿಯ ಎನ್. ಸತ್ಯನಾರಾಯಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಸತ್ಯನಾರಾಯಣ ಮಾತ್ರವೇ ನಾಮಪತ್ರ ಸಲ್ಲಿಸಿದರು. ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ, ಬಳ್ಳಾರಿ ಉಪವಿಭಾಗಾಧಿಕಾರಿ ಪ್ರಮೋದ್ ಘೋಷಿಸಿದರು.
ಕೆಎಂಎಫ್‌ನ ಮಾಜಿ ಅಧ್ಯಕ್ಷ ಭೀಮ ನಾಯ್ಕ ಚುನಾವಣೆಯಿಂದ ದೂರ ಉಳಿದರು. ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ 7 ಮತ್ತು ಭೀಮ ನಾಯ್ಕ 5 ನಿರ್ದೇಶಕರ ಬಲ ಹೊಂದಿದ್ದರು. ಇದರ ಜತೆಗೆ ಸರ್ಕಾರ ಹಿಟ್ನಾಳ್ ಅವರನ್ನು ಒಕ್ಕೂಟಕ್ಕೆ ಎರಡು ದಿನಗಳ ಹಿಂದಷ್ಟೇ ನಾಮನಿರ್ದೇಶನ ಮಾಡಿತ್ತು. ಹೀಗಾಗಿ ಹಿಟ್ನಾಳ್ ಸಂಖ್ಯಾ ಬಲ 8ಕ್ಕೆ ಏರಿತ್ತು.ಎರಡೂ ಹುದ್ದೆಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಘವೇಂದ್ರ ಹಿಟ್ನಾಳ್ ಮತ್ತು ಎನ್. ಸತ್ಯನಾರಾಯಣ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸ್ಪರ್ಧೆಯಿಂದ ದೂರ ಉಳಿದ ಭೀಮ ನಾಯ್ಕ್ : ಕೆಎಂಎಫ್ ಹಾಲಿ ಅಧ್ಯಕ್ಷ ಭೀಮ ನಾಯ್ಕ್ ಈ ಸ್ಪರ್ಧೆಯಿಂದ ದೂರ ಉಳಿದಿದ್ದರು. 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ ಪರ 7 ನಿರ್ದೇಶಕರಿದ್ದರೆ, ಕೇವಲ ಐವರು ನಿರ್ದೇಶಕರ ಬೆಂಬಲವನ್ನಷ್ಟೇ ಭೀಮ ನಾಯ್ಕ್ ಹೊಂದಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ಹಿಟ್ನಾಳ್ ನಾಮ ನಿರ್ದೇಶನದಿಂದ ಅವರ ಬೆಂಬಲದ ಮತಗಳ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ನಾನು ನಾಮ ನಿರ್ದೇಶಿತ ಆಯ್ಕೆಯಾಗಲು ಮುಖ್ಯ ಕಾರಣವೇ ಹಿಂದಿನ ಅಧ್ಯಕ್ಷರು. ಈ ಹಿಂದಿನ ರಾಬಕೊವಿ ಅಧ್ಯಕ್ಷರು ದಮ್ಮಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂಬುದಾಗಿ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ, ಬಳ್ಳಾರಿಗೆ ಎರಡು ನಿರ್ದೇಶಕ ಸ್ಥಾನ ಕಲ್ಪಿಸಲು ಚರ್ಚಿಸುವೆ ಎಂದಿರುವ ಅವರು, ಕೆಎಂಎಫ್ ಡೆಲಿಗೇಷನ್ ಬಗ್ಗೆ ಚರ್ಚೆಯಾಗಿಲ್ಲ. ವರಿಷ್ಠರ ತಿರ್ಮಾನದಂತೆ ಆಯ್ಕೆಯಾಗಿರುವುದಾಗಿ ತಿಳಿಸಿದರು.
ಹುಲಿಗೆಮ್ಮದೇವಿ- ಗವಿಮಠಕ್ಕೆ ಭೇಟಿ: ರಾಬಕೊವಿ ಹಾಲು ಒಕ್ಕೂಟ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಆದ ಹಿನ್ನೆಲೆ ಶುಕ್ರವಾರ ಕಲ್ಯಾಣ ಕರ್ನಾಟಕದ ಆದಿಶಕ್ತಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದರು. ಬಳಿಕ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಹಿಟ್ನಾಳ್ ಕುಟುಂಬಸ್ಥರು ಪ್ರತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಳಿಕ ಹುಲಿಗೆಮ್ಮದೇವಿ ಹಾಗೂ ಗವಿಮಠಕ್ಕೆ ಹೋಗುವುದು ವಾಡಿಕೆಯಾಗಿದೆ. ಅದರಂತೆ ಹಿಟ್ನಾಳ್ ಭೇಟಿ ನೀಡಿ ದೇವರ ದರ್ಶನ ಪಡೆದು ಶ್ರೀಗಳಿಂದ ಆಶೀರ್ವಾದ ಪಡೆದರು.
==ಈ ಬಾರಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಭೀಮ ನಾಯ್ಕ್ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ನಡುವೆ ಸ್ಪರ್ಧೆ ಏರ್ಪಡಲಿದೆ ಎನ್ನಲಾಗಿತ್ತು. ಆದರೆ ಇದೀಗ ಭೀಮ ನಾಯ್ಕ್ ರಾಬಕೊವಿ ಅಧ್ಯಕ್ಷ ಸ್ಥಾನದ ಚುನಾವಣೆಯಿಂದಲೇ ದೂರ ಉಳಿದಿದ್ದಾರೆ. ಡೆಲಿಗೇಷನ್ ಪಡೆದು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರಾ ಎಂಬುದನ್ನು ನೋಡಬೇಕಿದೆ. ಇನ್ನೊಂದೆಡೆ ರಾಘವೇಂದ್ರ ಹಿಟ್ನಾಳ್ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ, ಅದಕ್ಕೆ ಬೇಕಾದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವ ಭಾಗವಾಗಿಯೇ ರಾಜ್ಯದ ವಿವಿಧ ಹಾಲು ಒಕ್ಕೂಟಗಳಲ್ಲಿರುವ ಆಪ್ತರನ್ನು ಕೆಎಂಎಫ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗಿದೆ. ಒಕ್ಕೂಟಕ್ಕೆ ಬರಬೇಕು ಅಂತೇನು ಇರಲಿಲ್ಲ. ಹಾಲಿ ನಿರ್ದೇಶಕರ ಒತ್ತಾಯದಿಂದ ಅಧ್ಯಕ್ಷನಾಗಿರುವೆ. ಎಲ್ಲ ನಿರ್ದೇಶಕರ ಬೆಂಬಲ ಹಾಗೂ ಸಿಎಂ ಸಿದ್ದರಾಮಯ್ಯ ವಿಶೇಷ ಆರ್ಶಿವಾದದೊಂದಿಗೆ ಆಯ್ಕೆಯಾಗಿರುವೆ, ನಾಮ ನಿರ್ದೇಶಿತ ಆಯ್ಕೆಯಾಗಲು ಮುಖ್ಯ ಕಾರಣವೇ ಹಿಂದಿನ ಅಧ್ಯಕ್ಷರು. ಈ ಹಿಂದಿನ ರಾಬಕೊವಿ ಅಧ್ಯಕ್ಷರು ದಮ್ಮಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂಬುದಾಗಿ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಮುಂದಿನ ದಿನಗಳಲ್ಲಿ ರಾಬಕೊವಿಯ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲಾಗುವುದು. ಹೊಸ ತಂತ್ರಜ್ಞಾನದೊಂದಿಗೆ ಅಳವಡಿಸಿ, ಮೆಗಾಡೇರಿ ಸ್ಥಾಪಿಸಲಾಗುವುದು : ರಾಘವೇಂದ್ರ ಹಿಟ್ನಾಳ್, ಶಾಸಕರು ಹಾಗೂ ರಾಬಕೊವಿ ನೂತನ ಅಧ್ಯಕ್ಷರು=