Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಮಹಾಶಿವರಾತ್ರಿ ಫೆ.26 ವೈವಿಧ್ಯಮಯ ಶಿವಲಿಂಗ ದರ್ಶನ: ಯೋಗಿನ ಅಕ್ಕ

ಉದ್ಭವಲಿಂಗು, ಅಂತರಲಿಂಗು, ಸಹಸ್ರಲಿಂಗು ದರ್ಶನ, ವಿಶ್ವಸದ್ಭಾವನಾ ಶಾಂತಿ ಯಾತ್ರೆ

Hosashake News by Hosashake News
February 23, 2025
in ಜಿಲ್ಲೆ
0
ಮಹಾಶಿವರಾತ್ರಿ ಫೆ.26 ವೈವಿಧ್ಯಮಯ ಶಿವಲಿಂಗ ದರ್ಶನ: ಯೋಗಿನ ಅಕ್ಕ
Share on FacebookShare on Twitter

ಉದ್ಭವಲಿಂಗು, ಅಂತರಲಿಂಗು, ಸಹಸ್ರಲಿಂಗು ದರ್ಶನ, ವಿಶ್ವಸದ್ಭಾವನಾ ಶಾಂತಿ ಯಾತ್ರೆ

ಹೊಸಶಕೆ ನ್ಯೂಸ್-ಕೊಪ್ಪಳ:
ಮಹಾಶಿವರಾತ್ರಿ ಪ್ರಯುಕ್ತ ವಿಶ್ವಸದ್ಭಾವನಾ ಶಾಂತಿ ಯಾತ್ರೆಯನ್ನು ದಿನ.23 ಭಾನುವಾರ ಬೆಳಿಗ್ಗೆ 8 ಗಂಟೆಗೆ ಏರ್ಪಡಿಸಲಾಗಿದೆ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಶಾಂತಿಯಾತ್ರೆ ಸಾಗುತ್ತದೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯೋಗಿನಿ ಅಕ್ಕನವರು ಹೇಳಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಈ ವರ್ಷ ಮಹಾಶಿವರಾತ್ರಿ ಪ್ರಯುಕ್ತ ಕೊಪ್ಪಳ ನಗರದಲ್ಲಿ ಪ್ರಪ್ರಥಮ ಬಾರಿಗೆ ವೈವಿಧ್ಯಮಯ ಶಿವಲಿಂಗ ದರ್ಶನ ಉದ್ಭವಲಿಂಗು, ಅಂತರಲಿಂಗು, ಸಹಸ್ರಲಿಂಗು, ಈ ಮೂರು ಲಿಂಗುಗಳ ದರ್ಶನವನ್ನು ದಿ. 26,27,28 ಫೆಬ್ರವರಿ 2025 ರಂದು ಏರ್ಪಡಿಸಲಾಗಿದೆ ಎಂದರು.

ಪ್ರತಿದಿನ ಸಂಜೆ 5 ರಿಂದ 9 ಗಂಟೆಯವರೆಗೆ ಹೊಸಪೇಟೆ ರಸ್ತೆಯಲ್ಲಿರುವ ಈಶ್ವರಗುಡಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿ.26 ಮಹಾಶಿವರಾತ್ರಿ ಉದ್ಘಾಟನಾ ಮಹೋತ್ಸವಕ್ಕೆ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಎಂಎಲ್‌ಸಿ ಹೇಮಲತಾ ನಾಯಕ, ಸಿವಿಲ್ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ, ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಡಾ.ಬಸವರಾಜ್ ಕ್ಯಾವಟರ, ಕೆಎಸ್ ಹಾಸ್ಪಿಟಲ್, ಮುಂತಾದವರು ಪಾಲ್ಗೊಳ್ಳುವರು ಎಂದರು

ದಿ.27 ಪರಿಸರ ಸಂರಕ್ಷಣಾ ಮಹೋತ್ಸವದಡಿಯಲ್ಲಿ ಸ್ವಚ್ಛ ಮನ ಸ್ವಚ್ಛ ಜೀವನ, ಕೊಪ್ಪಳ ನಗರದ ಪೌರಕಾರ್ಮಿಕರಿಗೆ ಸನ್ಮಾನ, ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರ ಸಭೆ ಅಧ್ಯಕ್ಷ ಅಮಜದ್ ಪಟೇಲ್, ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ, ಪೌರಾಯುಕ್ತ ಗಣಪತಿ ಪಾಟೀಲ್ ಮುಖಂಡರಾದ ಸಿ.ವಿ. ಚಂದ್ರಶೇಖರ ಮುಂತಾದವರು ಪಾಲ್ಗೊಳ್ಳುವರು

ಮಾರ್ಚ್ 1 ರಿಂದ10 ರ ವರೆಗೆ ಶಿವಧ್ಯಾನ ಶಿಬಿರವು ಸಂಜೆ 6.30 ರಿಂದ 7.30 ರವರೆಗೆ ಈಶ್ವರ ಗುಡಿ ಆವರಣದಲ್ಲಿ ಜರುಗುವುದು.ಸುದ್ದಿಗೋಷ್ಠಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ನೇಹ ಅಕ್ಕನವರು ಇದ್ದರು

Previous Post

Next Post

ಕಾರ್ಖಾನೆ ಸ್ಥಾಪನೆ ಬೇಡ ಸಿಎಂ ಬಳಿಗೆ ಜನಪ್ರತಿನಿಧಿಗಳ ನಿಯೋಗ : ಸಚಿವ ಶಿವರಾಜ್ ತಂಗಡಗಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Select Month

    Most commented

    ಕೆಡಿಪಿ ಸದಸ್ಯರಾಗಿ ಕುರುಗೋಡ ರವಿ ಯಾದವ ನೇಮಕ

    ಅ.ಕ. ಬ್ರಾಹ್ಮಣ ಮಹಾಸಭೆ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂಜೀವ ದೇಶಪಾಂಡೆ ನೇಮಕ

    ಎಂ.ಎಸ್.ಪಿ.ಎಲ್ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು : ನರೇಂದ್ರ ಕುಮಾರ್ ಬಲ್ದೋಟ್

    ಹೊಸಶಕೆ ದಿನಪತ್ರಿಕೆ

    Hosashake daily Koppal

    ಹೊಸಶಕೆ ದಿನಪತ್ರಿಕೆ

    • Facebook
    • Twitter
    • Instagram
    Call us: +91 7026237749
    Email: hosashakepress@gmail.com

    © 2025 Hosashakenews - Powered by KIPL.

    No Result
    View All Result
    • Home
    • About Us
    • E-paper
    • ಸುದ್ದಿ
    • ದೇಶ
    • ರಾಜ್ಯ
    • ಜಿಲ್ಲೆ
    • ಪರಿಸರ
    • ಅವಲೋಕನ
    • ಶಿಕ್ಣಣ-ಆರೋಗ್ಯ
    • ಕ್ರೀಡೆ
    • ಕಲೆ-ಸಾಹಿತ್ಯ-ಸಂಸ್ಕೃತಿ
    • ರಾಜಕೀಯ
    • ಪ್ರಾದೇಶಿಕ

    © 2025 Hosashakenews - Powered by KIPL.

    error: Content is protected !!
    Contact usContact us