ನ್ಯಾಯಮಂಡಳಿಯು 2010ರ ಡಿಸೆಂಬರ್‌ನಲ್ಲಿ ತನ್ನ ಆರಂಭಿಕ ವರದಿಯನ್ನು ಸಲ್ಲಿಸಿತ್ತು, ಆದರೆ ರಾಜ್ಯಗಳು ಎತ್ತಿದ ಉಲ್ಲೇಖಗಳು ಮತ್ತು ಆಕ್ಷೇಪಣೆಗಳಿಗೆ ಹೆಚ್ಚಿನ ವಿಚಾರಣೆಗಳು ಮತ್ತು ನಿರ್ಧಾರಗಳು ಅಗತ್ಯವಾಗಿದ್ದವು. 2014ರಲ್ಲಿ ಆಂಧ್ರಪ್ರದೇಶದ ವಿಭಜನೆಯು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಅದರ ನಂತರ ಹೊಸದಾಗಿ ರೂಪುಗೊಂಡ ತೆಲಂಗಾಣವು ಕೃಷ್ಣಾ ಜಲ ವಿವಾದದಲ್ಲಿ ಪಾಲುದಾರನಾಯಿತು. ಅಂದಿನಿಂದ, ಅದರ ಗಡುವನ್ನು ಸತತ ಅಧಿಸೂಚನೆಗಳ ಮೂಲಕ ಹಲವು ಬಾರಿ ವಿಸ್ತರಿಸಲಾಗಿದೆ. ಇತ್ತೀಚಿನ ವಿಸ್ತರಣೆಯು ಅದೇ ಮಾದರಿಯನ್ನು ಮುಂದುವರೆಸಿದೆ, ಸರ್ಕಾರವು ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯ ಸೆಕ್ಷನ್ 5(3) ಅನ್ನು ಉಲ್ಲೇಖಿಸಿ, “ಸಾರ್ವಜನಿಕ ಹಿತಾಸಕ್ತಿಗಾಗಿ ಮತ್ತು ಪಕ್ಷ ರಾಜ್ಯಗಳ ಕಳವಳಗಳನ್ನು ಪರಿಹರಿಸಲು” ಹೆಚ್ಚಿನ ಸಮಯವನ್ನು ನೀಡಿದೆ.
ಬೆಂಗಳೂರು: ಕೃಷ್ಣಾ ನದಿ ಅಂತರ-ರಾಜ್ಯ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಕೇಂದ್ರ ಸರ್ಕಾರ ಜು.31ರ ವರೆಗೆ ಅವಧಿಯನ್ನು ವಿಸ್ತರಿಸಿದೆ. ತನ್ನ ಕೆಲಸವನ್ನು ಪೂರ್ಣಗೊಳಿಸಲು ನ್ಯಾಯಮಂಡಳಿ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆ ಜಲಶಕ್ತಿ ಸಚಿವಾಲಯ ಆದೇಶ ಹೊರಡಿಸಿದೆ.
ಜಲಶಕ್ತಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, 1956ರ ಅಂತರ-ರಾಜ್ಯ ನದಿ ನೀರು ವಿವಾದ ಕಾಯ್ದೆಯ ಅಧಿಕಾರಗಳ ಅಡಿಯಲ್ಲಿ ಈ ವಿಸ್ತರಣೆ ಮಾಡಲಾಗಿದೆ. ನ್ಯಾಯಮಂಡಳಿಯ ಅಧಿಕಾರಾವಧಿಯನ್ನು ಈ ಹಿಂದೆ ಮಾರ್ಚ್ 2024ರ ಅಧಿಸೂಚನೆಯ ಮೂಲಕ 2025ರ ಜು.31ರವರೆಗೆ ವಿಸ್ತರಿಸಲಾಗಿತ್ತು. 2004ರ ಏಪ್ರಿಲ್‌ನಲ್ಲಿ ರಚನೆಯಾದ ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿವಾದಗಳನ್ನು ನಿರ್ಣಯಿಸಲು ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿತ್ತು.
ಕೃಷ್ಣಾ ಮೇಲ್ದಂಡೆ ಹಂತ–3ರ ನೀರು ಹಂಚಿಕೆಯ ತೀರ್ಪು ಬಂದು 15 ವರ್ಷ ಕಳೆದಿದೆ. ಕೇಂದ್ರ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಈ ಮಧ್ಯೆ ನ್ಯಾಯಮಂಡಳಿಯ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿರುವ ಕ್ರಮ ಸರಿಯಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರತಿಭಟಿಸಬೇಕು ಎಂಬ ಅಭಿಪ್ರಾಯವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿನ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ.
ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮೂರನೇ ಹಂತದ ಯೋಜನೆಗಳ ಕಾಮಗಾರಿಗಳನ್ನು ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸಬೇಕು. ಅದಕ್ಕೂ ಮೊದಲು ಭೂಸ್ವಾಧೀನದ ವಿಷಯವನ್ನು ಇತ್ಯರ್ಥಗೊಳಿಸಬೇಕು. ಪರಿಹಾರದ ಮೊತ್ತವನ್ನು ನಿರ್ಧರಿಸಲು ಅಧಿಕಾರಿಗಳು, ರೈತ ಮುಖಂಡರು ಮತ್ತು ಶಾಸಕರು ಸಭೆಯನ್ನು ಕರೆದು ಮಾತುಕತೆ ನಡೆಸಬೇಕು. ಈ ಕುರಿತು ಒಂದು ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದ ಮುಂದಿಡಲು ಸಿದ್ದರಾಮಯ್ಯ ಸೂಚಿಸಿದ್ದಾರೆ.
ರೈತರು, ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಮಾತುಕತೆ : ಎಚ್.ಕೆ.ಪಾಟೀಲ : ಕೃಷ್ಣಾ ಮೇಲ್ದಂಡೆ ಹಂತ– 3ರ ಯೋಜನೆಗಳ ಅನುಷ್ಠಾನಕ್ಕಾಗಿ ಅಗತ್ಯವಿರುವ ಭೂಸ್ವಾಧೀನದಿಂದ ಜಮೀನು ಕಳೆದುಕೊಳ್ಳುವವರಿಗೆ ಏಕಗಂಟಿನಲ್ಲಿ ಪರಿಹಾರದ ಮೊತ್ತ ಪಾವತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಆ ಭಾಗದ ರೈತರು, ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ಮುಖ್ಯಮಂತ್ರಿಯವರು ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿಸಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿರುವರು ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಆದಷ್ಟು ಬೇಗ ಪರಿಹಾರ ದರದ ವಿಷಯವನ್ನು ಇತ್ಯರ್ಥಗೊಳಿಸಬೇಕು. ಈಗಾಗಲೇ ವಿಳಂಬವಾಗಿರುವುದರಿಂದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಬೇಕು ಎಂದು ಉತ್ತರ ಕರ್ನಾಟಕ ಭಾಗದ ಸಚಿವರು ಒತ್ತಾಯಿಸಿದರು’ ಎಂದು ಅವರು ಹೇಳಿದ್ದಾರೆ.
==ಕೃಷ್ಣಾ ನ್ಯಾಯಮಂಡಳಿ 2010ರಲ್ಲಿ ಕೃಷ್ಣಾ ನದಿ ನೀರಿನ ಹಂಚಿಕೆ ಮಾಡಿದೆ. ಆ ತೀರ್ಪಿನ ಪ್ರಕಾರ, ಶೇ 65ರಷ್ಟು ಹೆಚ್ಚುವರಿ ಹರಿವನ್ನು ಅವಲಂಬಿಸಿ ಮಹಾರಾಷ್ಟ್ರಕ್ಕೆ 81 ಟಿಎಂಸಿ ಅಡಿ, ಕರ್ನಾಟಕಕ್ಕೆ 177 ಟಿಎಂಸಿ ಅಡಿ ಮತ್ತು ಆಂಧ್ರಪ್ರದೇಶಕ್ಕೆ 190 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಮೂರನೇ ಹಂತವನ್ನು ಅನುಷ್ಠಾನ ಗೊಳಿಸಿದರೆ, ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.
====‘ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ (ಬ್ರಿಜೇಶ್ ಕುಮಾರ್ ಆಯೋಗ) ಅವಧಿ ಮತ್ತೊಂದು ವಿಸ್ತರಿಸಿರುವ ಕೇಂದ್ರದ ಕ್ರಮದ ಬಗ್ಗೆ ನಮ್ಮ ವಿರೋಧವಿಲ್ಲ. ಇದರಿಂದ ನಾವು ಕೊಡಬೇಕಾದ ನೀರಿನ ಪಾಲಿನ ಪ್ರಮಾಣ ಜಾಸ್ತಿಯೇನೂ ಆಗುವುದಿಲ್ಲ: ಸಿದ್ದರಾಮಯ್ಯ, ಸಿಎಂ—-