ಹೊಸಶಕೆ ನ್ಯೂಸ್-ಕೊಪ್ಪಳ: ಕರಾವಳಿ ಬಳಗ ಕೊಪ್ಪಳ (ರಿ), ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳ ಹಾಗೂ ಕರಾವಳಿ ಬಳಗ ಕೊಪ್ಪಳ ಇವರಿಂದ ಜೂನ್ 28 ರಂದು ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮವು ದಿನಾಂಕ: 28-06-2025 ಶನಿವಾರ ಸಂಜೆ 06.00 ಗಂಟೆಗೆ ನಗರದ ಸಾಹಿತ್ಯ ಭವನ ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು : ಶಾಸಕರಾದ ರಾಘವೇಂದ್ರ ಹಿಟ್ನಾಳ ವಹಿಸುವರು ಉದ್ಘಾಟನೆಯನ್ನು ಸಂಸದರಾದ ರಾಜಶೇಖರ ಹಿಟ್ನಾಳ ನೇರವೇರಿಸುವರು
ಮುಖ್ಯ ಅತಿಥಿಗಳಾಗಿ : ಮಾಜಿ ಸಂಸದರಾದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷರಾದ ಅಮ್ಮದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾದಿಕಾರದ ಅಧಕ್ಷರಾದ ಕೆ ಶ್ರೀನಿವಾಸ ಗುಪ್ತಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಕರಾವಳಿ ಬಳಗದ ಗೌರವ ಅಧ್ಯಕ್ಷರಾದ ಜೀವನ ಶೆಟ್ಟಿ, ಕೊಪ್ಪಳ, ಸಿದ್ದಿವಿನಾಯಕ ಯಕ್ಷಗಾನ ಮಂಡಳಿ, ಹಟ್ಟಿಯಂಗಡಿಯ ಸಂಚಾಲಕರಾದ ರಂಜಿತ ಶೆಟ್ಟಿ ವಕ್ವಾಡಿ ಪಾಲ್ಗೊಳಲಿದ್ದಾರೆ,
ಕೊಪ್ಪಳದ ಜನತೆಗೆ ಯಕ್ಷಗಾನ ಸವಿರುಚಿಯನ್ನು ಪಡೆಯಲು ಇದೊಂದು ಸದಾವಕಾಶವಾಗಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಜನತೆ ಭಾಗವಹಿಸಿ ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ ವೀಕ್ಷಿಸಲು ಸರ್ವರನ್ನು ಸಂಘಟಿಕರು ಸ್ವಾಗತಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾವಿದರನ್ನು ಹಾಗೂ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಲು ಕೋರಿದ್ದಾರೆ .