ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಹೊಸಶಕೆ ನ್ಯೂಸ್-ಕೊಪ್ಪಳ : ಆ.3 ರಂದು ಪ್ರೀತಿಯ ವಿಚಾರಕ್ಕೆ ಕೊಲೆಯಾಗಿದ್ದ ಕೊಪ್ಪಳ ನಗರದ ಗವಿಸಿದ್ದಪ್ಪ ನಾಯಕನ ಘಟನೆ ಖಂಡಿಸಿ, ಹಾಗೂ ಪ್ರಕರಣವನ್ನು ಸಿಬಿಐ ಅಥವಾ ಎನ್ ಐ ಎ ಗೆ ವಹಿಸುವುಂತೆ ಹಾಗೂ ಹತ್ಯೆಗೀಡಾಗಿರುವ ಗವಿಸಿದ್ದಪ್ಪ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.ನಗರದಲ್ಲಿ ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಗೆ ಅನೇಕ ಸಮುದಾಯ, ರಾಜಕೀಯ ಪಕ್ಷದ ಮುಖಂಡರು ಮತ್ತು ಸಂಘಟನೆಗಳು ಬಂದ್ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು, ಶಾಲಾ-ಕಾಲೇಜುಗಳು ಸೇರಿ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತ ಬಂದ್ ಮಾಡಿದ್ದರು. ಹತ್ಯೆಗೀಡಾದ ವಾಲ್ಮಿಕಿ ಸಮುದಾಯದ ಯುವ ನಾಯಕ ಗವಿಸಿದ್ದಪ್ಪನಿಗೆ ನ್ಯಾಯಸಿಗಬೇಕು, ಬಂಧಿತ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರುಪಡಿಸಿ, ಕೊಲೆ ಹಿಂದಿರುವ ಕೈಗಳನ್ನು ಪತ್ತೆ ಹಚ್ಚಲು ಎಎನ್ಐ ಯ ತನಿಖೆಗೆ ಒಳಪಡಿಸಿ, ಮೃತನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ, ರಕ್ಷಣೆ ನೀಡುವುಂತೆ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ, ಜಿಲ್ಲೆಯ, ತಾಲ್ಲೂಕಿನ ವಾಲ್ಮೀಕಿ ಸಮುದಾಯದ ನಾಯಕರು ಸೇರಿದಂತೆ, ಸಾವಿರಾರೂ ಸಂಖ್ಯೆಯಲ್ಲಿ ಜನರು ಬಂದ್, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಗಡಿಯಾರ್ ಕಂಬದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಅಶೋಕ ವೃತ್ತದ ಬಳಿ ಬಂದು ಸಮಾವೇಶಗೊಂಡಿತು, ಈ ಸಂದರ್ಭದಲ್ಲಿ ಅನೇಕ ಮುಖಂಡರು, ಸ್ವಾಮೀಜಿಗಳು ಮಾತನಾಡಿದರು. ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅಮಾನುಷವಾಗಿ ಕೊಲೆಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಆತನ ಕುಟುಂಬಕ್ಕೆ ಆಸರೆ ಮತ್ತು ನ್ಯಾಯ ಕೊಡಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾದಿಂದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಸರಿಯಾದ ಶಿಕ್ಷೆ ಕೊಟ್ಟಾಗ ಮಾತ್ರವೇ ಇಂತಹ ಕುಕೃತ್ಯಗಳು ನಿಲ್ಲಲಿವೆ. ಈ ಪ್ರಕರಣದಲ್ಲಿ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ತತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಇದರ ತನಿಖೆಯಾಗಿ ಕೊಲೆಯಲ್ಲಿ ಬಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗಡಿಯಾರ್ ಕಂಬದ ಬಳಿ ಪ್ರಾರಂಭವಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ತೆರಳಿದರು. ಅಶೋಕ ವೃತ್ತದ ಬಳಿ ನಡೆದ ಪ್ರತಿಭಟನೆಯ ಸಮಾವೇಶದಲ್ಲಿ ಮಾಜಿ ಶಾಸಕರಾದ ಶಿವನಗೌಡ ನಾಯಕ, ರಾಜುಗೌಡ ನಾಯಕ, ಬಸವರಾಜ ದಡೆಸೂಗೂರು, ಮೃತ ಗವಿಸಿದ್ದಪ್ಪನ ತಂದೆ ನಿಂಗಪ್ಪ ನಾಯಕ, ಮುಖಂಡರಾದ ಸಿವಿ ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಇತರ ನಾಯಕರು ಹಾಗೂ ವಾಲ್ಮೀಕಿ ಸ್ವಾಮೀಜಿಗಳು ಮಾತನಾಡಿ ಕೊಲೆಗೀಡಾದ ಗವಿಸಿದ್ದಪ್ಪ ನಾಯಕ ನಿಗೆ ನ್ಯಾಯಸಿಗಬೇಕು, ಆರೋಪಿತರಿಗೆ ಕಠಿಟ ಶಿಕ್ಷೆಗೆ ಗುರಿಪಡಿಸಲು, ಹಾಗೂ ಹಿಂದೂ ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ಮತ ಓಲೈಕೆ ರಾಜಕಾರಣವನ್ನು ಕೈಬಿಡುವುಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮನವಳ್ಳಿ, ಮಹಾಸಭಾ ಜಿಲ್ಲಾಧ್ಯಕ್ಷ ಡಾ. ಕೆ. ಎನ್. ಪಾಟೀಲ, ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಮುಖಂಡರಾದ ಶರಣು ತಳ್ಳಿಕೇರಿ , ಬಸವರಾಜ ಗೌರಾ, ವಿರುಪಾಕ್ಷಪ್ಪ ಸಿಂಗನಾಳ, ರಾಜು ನಾಯಕ, ಸುರೇಶ ಡೊಣ್ಣಿ, ಬಂಗಾರು ಲಕ್ಷ್ಮಣ, ರವಿ, ಟಿ. ರತ್ನಾಕರ, ನಾಗರಾಜ ಬಿಲ್ಗಾರ, ಯಮನೂರಪ್ಪ ನಾಯಕ, ಶಿವಮೂರ್ತಿ ಗುತ್ತೂರು, ಮಂಜುನಾಥ ಜಿ. ಗೊಂಡಬಾಳ, ಮಾರುತಿ ತೋಟಗಂಟಿ, ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಶಿವರಡ್ಡಿ ವಕೀಲರು, ಹನುಮೇಶ ನಾಯಕ, ಸಿ. ಗದ್ದೆಪ್ಪ, ರುಕ್ಮಣ್ಣ ಶಾವಿ, ಕರಿಯಪ್ಪ ಬೀಡನಾಳ, ಬಸವರಾಜ ಬಿ. ಲಿಂಗೇಶ ಕಲ್ಗುಡಿ, ಜ್ಯೋತಿ ಎಂ. ಗೊಂಡಬಾಳ, ವಿಶಾಲಾಕ್ಷಿ ವಾಲ್ಮೀಕಿ, ಸುಮಂಗಲಾ ನಾಯಕ ಸೇರಿದಂತೆ ಸಾವಿರಾರೂ ಜನರು ಪಾಲ್ಗೊಂಡಿದ್ದರು.