Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಮಗಳ ಮೇಲೆ ಅತ್ಯಾಚಾರಗೈದು ದೂರು ನೀಡದಂತೆ ಕೊಲೆ ಬೆದರಿಕೆ ಹಾಕಿದ್ದ ಗವಿಸಿದ್ದಪ್ಪ ನಾಯಕ್ : ಸಂತ್ರಸ್ತೆ ತಾಯಿಂದ ಧರಣಿ

ನ್ಯಾಯ, ರಕ್ಷಣೆಗಾಗಿ ಸಂತ್ರಸ್ತೆ ಬಾಲಕಿಯ ತಾಯಿ, ಸಹೋದರಿಯಿಂದ ಡಿ.ಸಿ.ಕಛೇರಿ ಮುಂದೆ ಧರಣಿ

Hosashake News by Hosashake News
August 14, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜ್ಯ, ಸಾಮಾಜಿಕ
0
ಮಗಳ ಮೇಲೆ ಅತ್ಯಾಚಾರಗೈದು ದೂರು ನೀಡದಂತೆ ಕೊಲೆ ಬೆದರಿಕೆ ಹಾಕಿದ್ದ ಗವಿಸಿದ್ದಪ್ಪ ನಾಯಕ್ : ಸಂತ್ರಸ್ತೆ ತಾಯಿಂದ ಧರಣಿ

oppo_0

Share on FacebookShare on Twitter

* ಗವಿಸಿದ್ದಪ್ಪನನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಿ || *ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಿ ಎಂದು ಮನವಿ ಸಲ್ಲಿಕೆ ||

ಹೊಸಶಕೆ ನ್ಯೂಸ್-ಕೊಪ್ಪಳ: ಕೊಪ್ಪಳ ನಗರದಲ್ಲಿ ಕೆಲ ದಿನಗಳ ಹಿಂದೆ ಕೊಲೆಯಾಗಿರುವ ಗವಿಸಿದ್ದಪ್ಪ ನಾಯಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಬಾಲಕಿಯ ತಾಯಿ, ನನ್ನ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ, ಹಾಗೂ ನನಗೆ ಬೆದರಿಕೆ ಹಾಕಲಾಗಿದೆ,  ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತ್ತಿದ್ದಾರೆ.ಮಹಾತ್ಮ ಗಾಂಧೀಜಿ, ಹಾಗೂ ಡಾ.ಅಂಬೇಡ್ಕರ್ ರವರ ಪೋಟೋಗಳನ್ನು ಕೈಯಲ್ಲಿ ಹಿಡಿದುಕೊಂಡು ಗುರುವಾರ ತನ್ನ ಕಿರಿಯ ಮಗಳೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ ಧರಣಿ ಕುಳಿತಿದ್ದ ಸಂತ್ರಸ್ತೆಯ ತಾಯಿ  ಮಾತನಾಡಿ, ನನ್ನ ಮತ್ತು ನನ್ನ ಮಗಳ ನೋವನ್ನು ಸಹ ತಾವುಗಳು ಅರ್ಥಮಾಡಿಕೊಳ್ಳಬೇಕು. ನಾನು ಕಡು ಬಡವಳು ನನಗೆ ಮೂರು ಜನ ಹೆಣ್ಣು ಮಕ್ಕಳು ನನಗೆ ಗಂಡ ತೀರಿಕೊಂಡಿದ್ದು ನನಗೆ ಹಿಂದೆ ಮಂದೆ ಯಾರೂ ಇಲ್ಲ ನನ್ನ ಮಕ್ಕಳನ್ನು ನಾನೆ ದುಡಿದು ಸಾಕಬೇಕು ನನ್ನ ಕೈಯಿಂದ ಆದಷ್ಟು ಮಟ್ಟಿಗೆ ನಾನು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ ಎಂದು ಹೇಳಿದರು.  ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂತ್ರಸ್ತೆಯ ತಾಯಿಯು, ನನ್ನ ಮಗಳು ಕಂಪ್ಯೂಟರ್ ತರಬೇತಿಗೆ ಹೋಗುವಾಗ 16 ವರ್ಷದ ನನ್ನ ಮಗಳಿಗೆ ಕೊಲೆಯಾದ ಗವಿಸಿದ್ದಪ್ಪ ನನ್ನ ಪ್ರೀತಿ ಮಾಡು ಎಂದು ಹಿಂದೆ ಬಿದ್ದು ನನ್ನ ಮಗಳನ್ನು ಪುಸಲಾಯಿಸಿ ನನ್ನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇದು ನಂತರ ನನಗೆ ಗೊತ್ತಾಗಿ ವಿಷಯವನ್ನು ಗವಿಸಿದ್ದಪ್ಪನಿಗೆ ತಿಳಿ ಹೇಳುವ ಕೆಲಸ ಮಾಡಿದರೆ ಗವಿಸಿದ್ದಪ್ಪ ನನಗೆ ಬೆದರಿಕೆ ಹಾಕುತ್ತಿದ್ದ.

ಈ ವಿಷಯವನ್ನು ಆತನ ತಂದೆ, ತಾಯಿ ಮತ್ತು ಅಕ್ಕನಿಗೆ ತಿಳಿಸಿದರೆ ಅವರು ನಿನ್ನ ಮಗಳೆ ನಮ್ಮ ಹುಡುಗನ ಹತ್ತಿರ ಬರುತ್ತಾಳೆ ಹಾಗಾಗಿ ನೀನು ಸುಮ್ಮನೆ ಇದ್ದರೆ ಸರಿ ಇಲ್ಲಾ ಅಂದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಕಾರಣ ಮತ್ತು ಮರ್ಯಾದೆಗೆ ಅಂಜಿ ಹಾಗೂ ನಮಗೆ ಹಿಂದೆ ಮುಂದೆ ಯಾರೂ ಇಲ್ಲದೆ ಇರುವ ಕಾರಣ ಎಲ್ಲವನ್ನೂ ನಾವು ಸಹಿಸಿಕೊಂಡೆವು ಎಂದು ಹೇಳಿದರು.

ಆದರೆ ಗವಿಸಿದ್ದಪ್ಪ ಮಾತ್ರ ನನ್ನ ಮಗಳಿಗೆ ನಿನ್ನ ವಿಡಿಯೋ ಇದೇ ಎಂದು ಬ್ಲಾಕ್ ಮೇಲ್ ಮಾಡುತ್ತಾ ನನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. ಇಷ್ಟೆಲ್ಲಾ ಇದ್ದರೂ ಸಹ ಇನ್ನೂ ಅಪ್ರಾಪ್ತಯಾದ ನನ್ನ ಮಗಳ ಜೊತೆ ಮಾಡಿರುವುದು ಪ್ರೀತಿ ಎಂದು ನನ್ನ ಮಗಳ ಮೇಲೆ ಆದ ಅನ್ಯಾಯದ ಬಗ್ಗೆ ಯಾರೂ ಮಾತಾಡದೆ ಇರುವುದು ನನಗೆ ಅತಿವ ಸಂಕಟವನ್ನು ತಂದಿದೆ .

ಹಾಗಾಗಿ ದಯವಿಟ್ಟು ನನ್ನ ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಿ ಮತ್ತು ಈ ಅತ್ಯಾಚಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಿ ಎಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಾನು ನನ್ನ ಕಿರಿಯ ಮಗಳೊಂದಿಗೆ ಹೋರಾಟ ಮಾಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವು ಪತ್ರದಲ್ಲಿ  ಹೇಳಿದ್ದಾರೆ.

==ಗವಿಸಿದ್ದಪ್ಪನನ್ನು ನಡು ರಸ್ತೆಯಲ್ಲಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಹಾಗೂ ನನ್ನ ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಿ ಮತ್ತು ಈ ಅತ್ಯಾಚಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು, ನಮಗೆ ನ್ಯಾಯ, ರಕ್ಷಣೆ ನೀಡುವುಂತೆ ಬೇಡಿಕೊಂಡು, ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಾನು ನನ್ನ ಕಿರಿಯ ಮಗಳೊಂದಿಗೆ ಹೋರಾಟ ಮಾಡುತ್ತಿದ್ದೇನೆ :  ಸಂತ್ರಸ್ತೆಯ ತಾಯಿ..ಧರಣಿ ಕುಳಿತವರನ್ನು ಮನವೊಲಿಸಿ ಎಸ್ಪಿಯವರ ಭೇಟಿಗೆ ಕರೆದುಕೊಂಡು ಹೋದ ಪೊಲೀಸರು:  ನನ್ನ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ, ಹಾಗೂ ನನಗೆ ಬೆದರಿಕೆ ಹಾಕಲಾಗಿದೆ,  ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತ್ತಿದ್ದ ಸಂತ್ರಸ್ತೆ ಬಾಲಕಿಯ ತಾಯಿ, ಹಾಗೂ ಆಕೆಯ ಕಿರಿಯ ಸಹೋದರಿಯನ್ನು ಪೊಲೀಸರು ಧರಣಿ ಕುಳಿತುಕೊಳ್ಳುವುದು ಬೇಡ, ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಿರಿ, ಎಸ್ಪಿ ಅವರನ್ನು ಭೇಟಿ ಮಾಡಿ ನಿಮ್ಮ ಮನವಿ, ದೂರು ಸಲ್ಲಿಸಿ ಎಂದು ಧರಣಿ ಕುಳಿತವರನ್ನು ಆಟೋದಲ್ಲಿ ಕರೆದುಕೊಂಡು ಹೋಗಲು ಯತ್ನಸಿದರು ಆಗ ಇಲ್ಲ ನಮಗೆ ನ್ಯಾಯಬೇಕು ಎಂದು ಮತ್ತೆ ಪ್ರತಿಭಟನೆಗೆ ಕುಳಿತರು, ಸ್ಥಳದಲ್ಲಿದ್ದ ನಗರ ಠಾಣೆಯ ಪಿಐ ಜಯಪ್ರಕಾಶ ಅವರು ತಮ್ಮ ಸಿಬ್ಬಂದಿಯೊಂದಿಗೆ ಕೆಲ ಮುಸ್ಲಿಂ ಮುಖಂಡರೊಂದಿಗೆ ಧರಣಿ ಕುಳಿತವರನ್ನು ಮನವೊಲಿಸಿ ಎಸ್ಪಿಯವರ ಭೇಟಿಗೆ ಹಾಗೂ ನಗರ ಠಾಣೆಗೆ ಕರೆದುಕೊಂಡು ಹೋದರು ಎಂದು ಹೇಳಲಾಗಿದೆ.

Tags: Gavisiddappa Nayak murder case KoppalHosashake Daily Kopal News PaperKoppal Daily News-HosashakeKoppal:Gavisiddappa Nayak had threatened to kill his daughter for not reporting the rape.KoppalMothersister of victim girl stage protest for justice and protectionಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಕೊಪ್ಪಳಮಗಳ ಮೇಲೆ ಅತ್ಯಾಚಾರಗೈದು ದೂರು ನೀಡದಂತೆ ಕೊಲೆ ಬೆದರಿಕೆ ಹಾಕಿದ್ದ ಗವಿಸಿದ್ದಪ್ಪ ನಾಯಕ್
Previous Post

ಹೊಸಶಕೆ ದಿನಪತ್ರಿಕೆ

Next Post

79 ನೇ ಸ್ವಾತಂತ್ರ್ಯ ದಿನಾಚರಣೆ ಸಚಿವ ಶಿವರಾಜ ತಂಗಡಗಿ ಅವರಿಂದ ರಾಷ್ಟ್ರ ಧ್ವಜಾರೋಣ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!