ಹೊಸಶಕೆ ನ್ಯೂಸ್-ಕೊಪ್ಪಳ : ಕೊಪ್ಪಳ ನಗರದಲ್ಲಿ ಹತ್ಯೆಗೀಡಾದ ಯುವಕ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಭೇಟಿ ನೀಡಿ, ಕುಟಂಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸೇರಿದಂತೆ ಇನ್ನಿತರ ಮುಖಂಡರು, ಡಿಸಿ, ಎಸ್ಪಿ ಅವರು ಸಾಂತ್ವನ ಹೇಳಿದರು.
ಬುಧವಾರ ಗವಿಸಿದ್ದಪ್ಪ ನಾಯಕ ಅವರ ತಂದೆ-ತಾಯಿ ಸೇರಿದಂತೆ ಆತನ ಕುಟುಂಸ್ಥರನ್ನು ಬೇಟಿ ಮಾಡಿ ಕೊಲೆ ಘಟನೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿ, ಪ್ರಕರಣದಿಂದ ಆಗಿರುವ ನೋವು ತುಂಬಾ ದುಃಖವನ್ನುಂಟು ಮಾಡುತ್ತದೆ, ಕೊಲೆಯಾದ ಗವಿಸಿದ್ದಪ್ಪ ನಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಆರೋಪಿತರನ್ನು ಬಂಧಿಸಿ ತನಿಖೆಗೆ ಒಳಪಡಿಸಿದೆ, ನ್ಯಾಯಯುತ ತನಿಖೆ ನಡೆಯಲಿದೆ ಎಂದು ಸಚಿವ ಶಿವರಾಜ ತಂಗಡಗಿ ಕುಟುಂಬಶ್ತರಿಗೆ ಧೈರ್ಯವನ್ನು ತುಂಬಿದರು.
ಸರ್ಕಾರ, ಮತ್ತು ನಾವು ಸದಾ ಗವಿಸಿದ್ದಪ್ಪ ನ ಕುಟುಂಬದೊಂದಿಗೆ ಇರುತ್ತದೆ, ಸೂಕ್ತ ರಕ್ಷಣೆ ಸೇರಿ ಅಗತ್ಯ ಸಹಾಯವನ್ನು ಮಾಡಲಾಗುವುದು, ಯಾವದೇ ಕಾರಣಕ್ಕೆ ಎದೆಗುಂದಬೇಡಿ, ಆರೋಪಿತರಿಗೆ ತಕ್ಕ ಶಿಕ್ಷೆ ಆಗಲಿದೆ, ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಶಾಸಕ ರಾಘವೆಂದ್ರ ಹಿಟ್ನಾಳ ಹೇಳಿದರು, ಗವಿಸಿದ್ದಪ್ಪ ನ ತಂದೆ-ತಾಯಿ ಸೇರಿ ಆತನ ಕುಟುಂಬಸ್ಥರು ನಮಗೆ ನ್ಯಾಯ ಸಿಗಬೇಕು , ಕೊಲೆ ಮಾಡಿರುವವರಿಗೆ ಕಠಿಣ ಶಿಕ್ಷೆ ಆಗಬೇಕೆಂದರು.
ಕೊಲೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಬಾರದು : ಸಚಿವ ಶಿವರಾಜ ತಂಗಡಗಿ :ಕೊಪ್ಪಳದಲ್ಲಿ ಇಂತಹ ಘಟನೆ ಜರುಗಬಾರದಿತ್ತು, ಕೊಲೆ ಪ್ರಕರಣಕ್ಕೆ ಯಾರೂ ಕೋಮು ಬಣ್ಣ ಹಚ್ಚುವ ಅಥವಾ ಅದನ್ನು ಜಾತಿ ಜಾತಿಗಳ ಮಧ್ಯೆ ತಂದು ನಿಲ್ಲಿಸುವ ಕೆಲಸವನ್ನು ಮಾಡಬಾರದು, ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಸ್ಥರಿಗೆ ನಾವೇಲ್ಲರೂ ಧೈರ್ಯವನ್ನು ತುಂಬವ ಹಾಗೂ ಅವರೊಂದಿಗೆ ಇರಬೇಕೆ ಹೊರತು ಇದಕ್ಕೆ ಕೋಮು ಬಣ್ಣ ಹಚ್ಚಬಾರದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಹತ್ಯೆಗೀಡಾದ ಯುವಕ ಗವಿಸಿದ್ದಪ್ಪ ನಾಯಕ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವು ಈಗಾಗಲೇ ತನಿಖೆ ಹಂತದಲ್ಲಿದೆ, ನ್ಯಾಯಯುತ ತನಿಖೆ ನಡೆಯಲಿದೆ, ಜೊತೆಗೆ ಸರ್ಕಾರದಿಂದ ಕುಟುಂಬಸ್ಥರಿಗೆ ರಕ್ಷಣೆ, ಸಹಾಯ ಮಾಡಲಿದೆ, ಸ್ಥಳೀಯ ಶಾಸಕರು, ಹಿರಿಯ ಅಧಿಕಾರಿಗಳು ಕುಟುಂಬಸ್ಥರಿಗೆ ಅಗತ್ಯ ನೆರವನ್ನು ನೀಡಿದ್ದೇವೆ, ಹಿಂದೂ-ಮುಸ್ಲಿಮ್ ಮಧ್ಯೆ ನಡೆದ ಪ್ರಕರಣ ಇದಲ್ಲ, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಘಟನೆ ಕುರಿತು ಎಲ್ಲಾ ಮಾಹಿತಿಯನ್ನು ಮಾಧ್ಯಮದ ಮೂಲಕ ತಿಳಿಸಿದ್ದಾರೆ, ನಾವೇಲ್ಲರೂ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ಇದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ , ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ, ವಾಲ್ಮಿಕಿ ನಾಯಕ ಸಮಾಜದ ಹಾಗೂ ಮುಸ್ಲಿಮ್ ಸಮಾಜದ ಮುಖಂಡರು, ಇತರ ಜನಪ್ರತಿನಿಧಿಗಳು ಇದ್ದರು.