ಕೊಲೆ ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಹೊಸಶಕೆ ನ್ಯೂಸ್-ಕೊಪ್ಪಳ: ಪ್ರೀತಿ ವಿಚಾರವಾಗಿ ನಗರದ ಕುರುಬರ ಓಣಿ ನಿವಾಸಿಯಾದ ಗವಿಸಿದ್ದಪ್ಪ ನಾಯಕ್‌ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ನಡೆದ 24 ಗಂಟೆಯೊಳಗೆ ಒಟ್ಟು ನಾಲ್ಕು ಜನ ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಭಾನುವಾರ ರಾತ್ರಿ ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ಯುವಕನನ್ನು ನಾಲ್ಕು ಜನರು ಯುವಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡ್ಡಿದ್ದರು, ಅಂದೇ ಪ್ರಮುಖ ಅರೋಪಿಯಾದ ಸಾಧಿಕ್ ಹುಸೇನ್ ಕೊಲ್ಕಾರ್ ಎನ್ನುವವನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಲೆ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಸಾಧಿಕ್ ಹುಸೇನ್ ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನೇ ಗವಿಸಿದ್ದಪ್ಪ ನಾಯಕ್ ಕೂಡ ಪ್ರೀತಿಸುತ್ತಿದ್ದ ಮತ್ತು ಕಾಟ ಕೂಡ ನೀಡುತ್ತಿದ್ದ ತಾನು ಪ್ರೀತಿಸಿದ ಯುತಿಗೆ ತೊಂದರೆ ಆಗುತ್ತಿರುವುದನ್ನು ಸಾಧಿಕ್ ನಿಂದ ಸಹಿಸಿಕೊಳ್ಳಲಾಗದೆ ಈ ಕೊಲೆ ಮಾಡಿದ್ದಾನೆ ಈ ಕೊಲೆ ಕೇವಲ ಪ್ರೀತಿಯ ವಿಚಾರವಾಗಿ ನಡೆದಿದ್ದು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.
ಉಳಿದ ಮೂರು ಜನ ಅರೋಪಿಗಳಾದ ಗೇಸುದರಾಜ @ ಗೇಸು ಪಟೇಲ್, ನಿಜಾಮ್ @ ನಿಜಾಮುದ್ದಿನ್ ಮತ್ತು ಮಹೇಬೂಬ್ @ ಗಿಡ್ಡ ಸಿಕ್ಕಲ್‌ಗಾರ್ ಎಂಬುವರನ್ನು ಬಂಧಿಸಲಾಗಿದೆ, ಹೆಚ್ಚಿನ ಮಾಹಿತಿಯನ್ನು ಪಡೆಯಲು ಅರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರಿಂದ ಎರಡು ಲಾಂಗ್, ಒಂದು ಬೈಕ್ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ, ಕೊಲೆ ಪ್ರಕರಣವನ್ನು ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಡಾ: ರಾಮ್ ಎಲ್. ಅರಸಿದ್ದಿ ಅವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.
ಗವಿಸಿದ್ದಪ್ಪ ನಾಯಕ ನ ಕೊಲೆಗೆ ಕಾರಣ ಏನು..? ನಗರದ ಕುರುಬರ ಓಣಿಯ ನಿವಾಸಿಯಾದ ವಾಲ್ಮಿಕಿ ಸಮಾಜದ ಗವಿಸಿದ್ದಪ್ಪ ನಾಯಕ್ (26) ಎನ್ನುವ ಯುವಕನನ್ನು ರವಿವಾರ ರಾತ್ರಿ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ ನಾಲ್ವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದವರಲ್ಲಿ ಪ್ರಮುಖ ಅರೋಪಿ ಎನ್ನಲಾದ ಸಾಧಿಕ್ ಕೋಲ್ಕಾರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ಸ್ವಲ್ಪ ಸಮಯದ ನಂತರ ಇನ್ನೂ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಓರ್ವ ಆರೋಪಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿ ಕೆರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಯುವಕ ಗವಿಸಿದ್ದಪ್ಪ ನಾಯಕ್ ವೃತ್ತಿಯಲ್ಲಿ ಚಾಲಕನಾಗಿದ್ದ. ಗವಿಸಿದ್ದಪ್ಪ ಮುಸ್ಲಿಂ ಯುವತಿಯೊರ್ವಳನ್ನು ಪ್ರೀತಿಮಾಡುತ್ತಿದ್ದ. ಈ ವಿಷಯ ಪಾಲಕರಿಗೆ ತಿಳಿದಿದ್ದರಿಂದ ಎರಡೂ ಸಮಾಜಗಳ ಮುಖಂಡರು ಬುದ್ಧಿವಾದ ಹೇಳಿದ್ದರು. ಬಳಿಕ ರಾಜೀ ಸಂಧಾನ ಮಾಡಿಸಲಾಗಿತ್ತು.
ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಿತಿ ಕೇಂದ್ರದ ಸೈಯದ್ ನದಿಮುಲ್ಲಾ ಖಾದ್ರಿ ಮಸೀದಿ ಮುಂದೆ ರಸ್ತೆಯಲ್ಲಿ ದಿನಾಂಕ:03.08.2025 ರಂದು ರಾತ್ರಿ.07.00 ಗಂಟೆ ಸುಮಾರಿಗೆ ತಾನು ಮದುವೆಯಾಗಲು ಇಚ್ಚಿಸಿದವರನ್ನು ಈ ಹಿಂದೆ ಗವಿಸಿದ್ದಪ್ಪ ಈತನು ಪ್ರೀತಿಸಿದ ವಿಷಯ ಗೊತ್ತಾಗಿ ಸಾದೀಕ್ ಹುಸೇನ್ ಕೋಲ್ಕಾರ್ ಸಾ:ಸ್ಕೆಲಾನಪುರ ಓಣಿ ಕೊಪ್ಪಳ ಈತನು ತನ್ನ ಸಂಗಡ ಇತರೆ ಮೂರು ಜನರನ್ನು ಕರೆದುಕೊಂಡು 2 ಮಚ್ಚುಗಳಿಂದ ಗವಿಸಿದ್ದಪ್ಪ ಈತನ ಕುತ್ತಿಗೆಗೆ ಜೋರಾಗಿ ಹೊಡೆದು ಕೊಲೆ ಮಾಡಿದ ಘಟನೆ ಕುರಿತು ಮೃತನ ತಂದೆ ನಿಂಗಜ್ಜ ಟಣಕನಕಲ್ ಸಾ:ಕುರುಬರ ಓಣಿ, ಕೊಪ್ಪಳ ಇವರು ನೀಡಿದ ದೂರಿನ ಮೇಲಿಂದ ದಿನಾಂಕ-03.08.2025 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ 2:85/2025, 500:103(1) R/W 3(5)BNS-2023 & 3(2)(v) SC/ST Act-1989 ತನಿಖೆ ಕೈಗೊಳ್ಳಲಾಗಿತ್ತು.
== ತಪ್ಪಿಸಿಕೊಂಡಿದ್ದ ಇನ್ನೂಳಿದ ವ್ಯಕ್ತಿಗಳಾದ ಗೇಸುದರಾಜ@ಗೇಸು ಸಾ: ಮಿಟ್ಟಿಕೇರಿ ಓಣಿ ಕೊಪ್ಪಳ. ನಿಜಾಮ @ ನಿಜಾಮುದ್ದಿನ ಸಾ:ನಿರ್ಮಿತಿಕೇಂದ್ರ ಕೊಪ್ಪಳ ಮತ್ತು ಮಹೇಬೂಬ@ಗಿಡ್ಡ ಸಾ: ಮಹೇಬೂಬನಗರ ಕೊಪ್ಪಳ. ಇವರನ್ನು ಆ.4 ರಂದು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇವರು ಸಾದೀಕ ಹುಸೇನ್ ಇವನೊಂದಿಗೆ ಸೇರಿ ಪ್ರಕರಣದಲ್ಲಿ ಕೊಲೆ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಸಿದ ಎರಡು ಮಚ್ಚುಗಳನ್ನು ಆಪಾದಿತರಿಂದ ಜಫ್ತು ಮಾಡಿಕೊಂಡು, ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿದೆ : ಡಾ.ರಾಮ್ ಎಲ್.ಅರಸಿದ್ದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ==
ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ತಂಡ :
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿ, ಪ್ರಕರಣವನ್ನು ಭೇದಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್‌ಕುಮಾರ ಆರ್. ರವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸೆನ್ ಠಾಣೆ ಪ್ರಭಾರ ಡಿ.ಎಸ್.ಪಿ ಯಶವಂತಕುಮಾರ ನೇತೃತ್ವದಲ್ಲಿ ಪಿ.ಐ ಕೊಪ್ಪಳ ನಗರ ಠಾಣೆ ಕೆ.ಜಯಪ್ರಕಾಶ ಮತ್ತು ಸಿಬ್ಬಂದಿಯವರಾದ ಖಾಜಾಸಾಬ, ಶಿವಕುಮಾರ, ಶರಣಪ್ಪ, ಗಂಗಾಧರ, ಕರಬಸಪ್ಪ, ಗೂಡಸಾಬ, ಮಂಗಳೇಶ, ಮಂಜುನಾಥ, ಮಲ್ಲಿಕಾರ್ಜುನ, ಹನುಮೇಶ, ಶರಣಪ್ಪ ಹಾಗೂ ತಾಂತ್ರಿಕ ವಿಭಾಗದ ಪ್ರಸಾದ, ಮಂಜುನಾಥ, ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.