ಹೊಸಶಕೆ ನ್ಯೂಸ್-ಕೊಪ್ಪಳ: ಕ್ರಸ್ಟ್‌ಗೇಟ್ ಮುರಿದು ಒಂಬತ್ತು ತಿಂಗಳುಗಳೇ ಉರುಳಿದರೂ ವರದಿ ಪಡೆಯದೇ ಸರ್ಕಾರ ಕಾಲಹರಣ ಮಾಡುತ್ತಿದೆ. 19ನೇ ಕ್ರಸ್ಟ್ ಗೇಟ್ ಅಳವಡಿಸಲು ₹1.66 ಕೋಟಿಗೆ ಟೆಂಡ್ ನೀಡಲಾಗಿದ್ದು, ಜುಲೈ ಒಳಗೆ ಕಾಮಗಾರಿ ಮುಗಿಯಬೇಕಿದೆ. ಇನ್ನುಳಿದ ಕಾಮಗಾರಿಗಳ ಗತಿ ಏನು ಎಂದು ಜಿಲ್ಲಾ ಬಿಜೆಪಿ ನಾಯಕರು ಹೇಳಿದರು.
ಉತ್ತರ ಕರ್ನಾಟಕ ಭಾಗದ ಜೀವನಾಡಿಯಾದ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಕಳೆದ ವರ್ಷ ತಾತ್ಕಾಲಿಕವಾಗಿ ಅಳವಡಿಸಿರುವ ಕ್ರಸ್ಟ್‌ಗೇಟ್ ಪರಿಶೀಲಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಅವರು ‘ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ರಾಜ್ಯ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ರೈತರ ರಕ್ಷಣೆ ಮಾಡುವವರು ಯಾರು’ ಎಂದು ಪ್ರಶ್ನಿಸಿದರು.
ತುಂಗಭದ್ರಾ ಜಲಾಶಯಕ್ಕೆ ಕಾಯಂ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. ರಾಜ್ಯ ಸರ್ಕಾರ ತುಂಗಭದ್ರಾ ಮಂಡಳಿ ಮೇಲೆ ಎಲ್ಲ ಜವಾಬ್ದಾರಿ ಹಾಕಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ, ಜಲಾಶಯ ನಮ್ಮ ರಾಜ್ಯದಲ್ಲಿಯೇ ಇರುವುದರಿಂದ ಫಲಾನುಭವಿ ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣಕ್ಕಿಂತ ಕರ್ನಾಟಕದ ಮೇಲೆಯೇ ಹೆಚ್ಚು ಜವಾಬ್ದಾರಿಯಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ ಗೇಟ್ ತುಂಡಾದಾಗ ಎಲ್ಲ ಕೆಲಸ ಮಾಡುತ್ತೇವೆ ಎಂದು ಸಚಿವರು ಹೇಳಿದರು. ಇವರ ನಿರ್ಲಕ್ಷ್ಯದಿಂದ ರೈತರು ಕಷ್ಟ ಅನುಭವಿಸುವಂತಾಗಿದೆ, ಸರ್ಕಾರ ತೀವ್ರವಾಗಿ ಈ ವಿಷಯದ ಬಗ್ಗೆ ಹೆಚ್ಚು ಗಂಭೀರವಾಗಿ ಪರಿಗಣಿಸಲು ಒತ್ತಾಯಿಸಿದರು. ಎಂದರು ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ, ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ರಮೇಶ ವೈದ್ಯ, ಕೆ ಕರಿಯಪ್ಪ, ಗಣೇಶ ಹೊರತಟ್ನಾಳ್, ಮಂಜುನಾಥ, ಮಲ್ಲಿಕಾರ್ಜುನ ಸ್ವಾಮಿ, ಇತರರಿದ್ದರು.==ಹೊಸ ಕ್ರಸ್ಟ ಗೇಟ್ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಈ ಮೇ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿತ್ತು ಆದರೆ ಇನ್ನೂ ಕೆಲಸ ಪ್ರಾರಂಭವಾಗಿಲ್ಲ, ಈ ಬಾರಿ ಮಳೆಗಾಲ ಒಂದು ತಿಂಗಳು ಮುಂಚೆಯೇ ಶುರುವಾಗಿದ್ದು ಜಲಾಶಯಕ್ಕೆ ಈ ಬಾರಿ ಹೆಚ್ಚು ನೀರು ಸಂಗ್ರಹಣೆಯಾಗುವ ನಿರೀಕ್ಷೆ ಯಲ್ಲಿದೆ ಆದರೆ ಇನ್ನೂ ಕೂಡ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ ಪ್ರಾರಂಭವೆ ಆಗದಿರುವುದು ಬೇಸರದ ಸಂಗತಿ.: ಡಾ. ಬಸವರಾಜ ಕ್ಯಾವಟರ್, ಬಿಜೆಪಿ ಕಾರ್ಯಕಾರಿಣಿ ಸದಸ್ಯರು==
ಶಿವರಾಜ ತಂಗಡಿಗಿ ನಾಚಿಕೆ, ಮಾನ, ಮರ್ಯಾದೆ ಮೂರೂ ಬಿಟ್ಟಿದ್ದಾನೆ ಬಿಜೆಪಿ ಜಿಲ್ಲಾಧ್ಯಕ್ಷ ದಡೇಸ್ಗೂರ ವಾಗ್ದಾಳಿ :
ಸಚಿವ ತಂಗಡಗಿ ಗೆ ನನಗೆ ಕನಿಷ್ಠ ಜ್ಞಾನವೂ ಇಲ್ಲವೆಂದು ಹಾಗೂ ಶೋಕಿಗಾಗಿ ಅಂಗರಕ್ಷಕನನ್ನು ಕೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ನಾಚಿಕೆ, ಮಾನ ಹಾಗೂ ಮರ್ಯಾದೆ ಮೂರೂ ಬಿಟ್ಟಿದ್ದಾನೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಚಿವ ತಂಗಡಗಿ ಅವರ ಹೇಳಿಕೆಗೆ ಕಾಡಾ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ನಾನು ಆತನಷ್ಟು ದಡ್ಡನಲ್ಲ. ತಂಗಡಗಿ ನನಗೆ ಜ್ಞಾನವಿಲ್ಲ ಎನ್ನುತ್ತಾನೆ. ನನಗೆ ಜ್ಞಾನ ಇಲ್ಲದಿದ್ದರೆ ಪಕ್ಷ ಇಷ್ಟು ದೊಡ್ಡ ಸ್ಥಾನಮಾನ ನೀಡುತ್ತಿರಲಿಲ್ಲ. ಮಾಜಿ ಶಾಸಕರು ಹಾಗೂ ಸಂಸದರು ಗನ್‌ಮ್ಯಾನ್ ಕೇಳಲು ಕಾನೂನು ಚೌಕಟ್ಟಿನಲ್ಲಿ ಅವಕಾಶ ಇದೆ. ಗುಪ್ತಚರ ಇಲಾಖೆಯು ನನಗೆ ಗನ್ ಮ್ಯಾನ್ ನೀಡಬೇಕೆಂದು ಮಾಹಿತಿ ನೀಡಿದೆ. ಆದರೂ ನನಗೆ ಪೊಲೀಸ್ ಭದ್ರತೆ ಒದಗಿಸುತ್ತಿಲ್ಲ. ಈ ಕುರಿತು ನ್ಯಾಯಾಲಯದ ಮೊರೆ ಹೋಗುವದಾಗಿ ಹೇಳಿದರು.