Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಪ್ರಾದೇಶಿಕ

ಕೋಳಿ  ಕೂಗುವ ಮೊದಲೇ ಎದ್ದು ಕೆಲಸಕ್ಕೆ ಹೊರಡುವ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ: ಕೆ.ವಿ.ಪ್ರಭಾಕರ್

ಪತ್ರಿಕಾ ವೃತ್ತಿ ನಿತ್ಯ ಬೆಳಗ್ಗೆ ಆರಂಭವಾಗುವುದೇ ಪತ್ರಿಕಾ ವಿತರಕರಿಂದ

Hosashake News by Hosashake News
March 2, 2025
in ಪ್ರಾದೇಶಿಕ, ರಾಜ್ಯ, ಸುದ್ದಿ
0
ಕೋಳಿ  ಕೂಗುವ ಮೊದಲೇ ಎದ್ದು ಕೆಲಸಕ್ಕೆ ಹೊರಡುವ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ: ಕೆ.ವಿ.ಪ್ರಭಾಕರ್
Share on FacebookShare on Twitter

ಹಾಸನದಲ್ಲಿ ಜಿಲ್ಲಾ ಪತ್ರಿಕಾ ವಿತರಕರ ಸಮ್ಮೇಳನ

ಹೊಸಶಕೆ ನ್ಯೂಸ್-ಹಾಸನ (ಚನ್ನರಾಯಪಟ್ಟಣ): ನಿತ್ಯ ಬೆಳಗ್ಗೆ ಕೋಳಿ  ಕೂಗುವ ಮೊದಲೇ ಎದ್ದು ಕೆಲಸಕ್ಕೆ ಹೊರಡುವ ಪತ್ರಿಕಾ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ ಇದ್ದಂತೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು.

ರಾಜ್ಯ ಪತ್ರಿಕಾ ವಿತರಕರ ಸಂಘ, ಹಾಸನ ಜಿಲ್ಲಾ ಪತ್ರಿಕಾ ವಿತರಕರ ಸಂಘ, ಚನ್ನರಾಯಪಟ್ಟಣ ತಾಲೂಕು ಪತ್ರಿಕಾ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಹಾಸನ ಜಿಲ್ಲಾ ಪತ್ರಿಕಾ ವಿತರಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮದ ನರಮಂಡಲ ಇದ್ದಹಾಗೆ. ನರ ಮಂಡಲ ಇದ್ದರಷ್ಟೆ ಮನುಷ್ಯನ ದೇಹ ಕೆಲಸ ಮಾಡುವುದು. ಹಾಗೆಯೇ ಪತ್ರಿಕಾ ವಿತರಕರು ಪತ್ರಿಕಾ ಕ್ಷೇತ್ರದ ನರಮಂಡಲ. ಇಡೀ ದೇಶದ ಬೀದಿ ಬೀದಿಗಳಲ್ಲಿ ಓಡಾಡಿ ಸುದ್ದಿ ವಿತರಣೆ ಮಾಡುವ ವಿತರಕರು ಇಲ್ಲದೆ ಮುದ್ರಣಗೊಂಡ ಪತ್ರಿಕೆಗಳಿಗೆ ಮೋಕ್ಷ ಸಿಗುವುದಿಲ್ಲ ಎಂದು ನುಡಿದರು.

ಈ ನರಮಂಡಲಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮಾತೃ ಹೃದಯ. ಈ ಬಾರಿಯ ಬಜೆಟ್ ನಲ್ಲೂ ಪತ್ರಿಕಾ ಕಾರ್ಮಿಕರಿಗೆ ಅನುಕೂಲ ಆಗುವ ಭರವಸೆ ಇದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯಿಂದ ಈಗಾಗಲೇ ಸಾಕಷ್ಟು  ಸವಲತ್ತುಗಳು ಸಿಗುತ್ತಿವೆ.  ಈಗ ಆರೋಗ್ಯ ವಿಮೆಯ ಬೇಡಿಕೆ ಕೂಡ ಈಡೇರಿದೆ. ವಿತರಕರು ಹೆಚ್ಚೆಚ್ಚು ಸಂಘಟಿತರಾದಷ್ಟೂ  ತಮ್ಮ ಬೇಡಿಕೆಗಳಿಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.

Previous Post

ಬಲ್ದೋಟ್- ಬಿಎಸ್ಪಿಎಲ್ ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ ಅನುಮತಿಸಿದೆ : ಹೆಚ್ ಡಿ ಕುಮಾರಸ್ವಾಮಿ

Next Post

ನೊಂದ ಮನಗಳಿಗೆ ಮುದ ನೀಡುವ ಶಕ್ತಿ ಸಂಗೀತಕ್ಕಿದೆ – ಬ್ರಹ್ಮಕುಮಾರಿ ಯೋಗಿನಿ ಅಕ್ಕ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!