Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಗ್ರಾಮ ಸಭೆಗಳು ಗ್ರಾಮ ಪಂಚಾಯತಿ ಅಭಿವೃದ್ದಿಗೆ ಪೂರಕ: ಬಸವರಾಜ ಪಾಟೀಲ್

ಇರಕಲ್ಲಗಡಾ ಗ್ರಾಮ ಪಂಚಾಯತಿಯನಲ್ಲಿ ನರೇಗಾ ಕ್ರಿಯಾ ಯೋಜನೆ ತಯಾರಿಕೆ  ಗ್ರಾಮಸಭೆ

Hosashake News by Hosashake News
November 18, 2025
in ಜಿಲ್ಲೆ, ಪರಿಸರ, ಪ್ರಾದೇಶಿಕ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಗ್ರಾಮ ಸಭೆಗಳು ಗ್ರಾಮ ಪಂಚಾಯತಿ ಅಭಿವೃದ್ದಿಗೆ ಪೂರಕ: ಬಸವರಾಜ ಪಾಟೀಲ್
Share on FacebookShare on Twitter

ನರೇಗಾದಡಿ ಶೇ.65%ರಷ್ಟು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳು ಅನುಷ್ಠಾನಿಸುವದು ಕಡ್ಡಾಯ-ದೇವರಾಜ ಪತ್ತಾರ

ಹೊಸಶಕೆ ನ್ಯೂಸ್-ಕೊಪ್ಪಳ: ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗು ಗ್ರಾಮಸ್ಥರ ಬೇಡಿಕೆಗಳು ಈಡೇರಲು  ಗ್ರಾಮಸಭೆಗಳು ಅಭಿವೃದ್ಧಿಗೆ ಪೂರಕವೆಂದು ಗ್ರಾಮಸಭಾ ನೋಡಲ್ ಅಧಿಕಾರಿ ಹಾಗು  ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಪಾಟೀಲ್ ಹೇಳಿದರು.

ತಾಲೂಕಿನ ಇರಕಲ್ಲಗಡಾ ಗ್ರಾಮ ವತಿಯಿಂದ ಇರಕಲ್ಲಗಡಾ ಗ್ರಾಮದ  ರುದ್ರಮುನಿಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತು ಜರುಗಿದ ಗ್ರಾಮಸಭೆಯಲ್ಲಿ  ಮಾತನಾಡಿದರು.

ಈಗಾಗಲೇ ಮನೆ ಮನೆ ಭೇಟಿ ಮೂಲಕ ರೈತರಿಂದ, ಗ್ರಾಮಸ್ಥರಿಂದ ಕಾಮಗಾರಿ ಬೇಡಿಕೆಯನ್ನು ಪಡೆಯಲಾಗಿರುತ್ತದೆ. ವಾರ್ಡಸಭೆ ಮೂಲಕ ವಾರ್ಡನಲ್ಲಿರುವ ಜನರ ಬೇಡಿಕೆ ಕೂಡಾ ಪಡೆಯಲಾಗಿದೆ. ಅಂತಿಮವಾಗಿ ಕಾಮಗಾರಿ ಗುಚ್ಚ ತಯಾರಿಸಿ ಗ್ರಾಮಸಭೆ ಮೂಲಕ ಒಪ್ಪಿಗೆ ಪಡೆದು ಮಾನವ ದಿನಗಳ ಗುರಿಗೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯತಿಯಿಂದ ಅಂತಿಮವಾಗಿ ಅನುಮೋದನೆ ಪಡೆಯಲಾಗುತ್ತದೆ ಎಂದರು.

ತಾಲೂಕ ಪಂಚಾಯತಿಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ಗ್ರಾ.ಪಂ ಹಾಗು ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುತ್ತದೆ ಎಂದರು. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ ಮಾತನಾಡಿ ವಾರ್ಡಸಭೆಗಳ ಮೂಲಕ ಗ್ರಾಮ ಪಂಚಾಯತಿಯಿಂದ ಕಾಮಗಾರಿ ಬೇಡಿಕೆ ಪಡೆಯಲು ಈಗಾಗಲೇ ವಾರ್ಡಸಭೆ ಜರುಗಿಸಲಾಗಿದೆ. ಬರುವ ಏಪ್ರೀಲ್ ನಿಂದ ಕಾಮಗಾರಿ ಆರಂಭಿಸಲು ಕೂಲಿಕಾರರ, ರೈತರ ಬೇಡಿಕೆ ಸಲ್ಲಿಸಲು ಇದೊಂದು ಸದಾವಕಾಶ ಎಂದರು.

ಕೃಷಿ ಅಧಿಕಾರಿ ಯೋಗೇಶ್ ಮಾತನಾಡಿ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಿವಮ್ಮ ಶೇಖರಪ್ಪ ನಾಯಕ್ ಪಂಚಾಯತ್ ಅಭಿವೃದ್ಧಿ  ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ, ಕೃಷಿ ಅಧಿಕಾರಿ ಯೋಗೇಶ್, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಣ್ಣ ಗೋಸಲದೊಡ್ಡಿ, ವೀರಭದ್ರಯ್ಯ ಕಲ್ಮಠ, ರೇವಣಸಿದ್ದಯ್ಯ ಹಿರೇಮಠ, ದ್ಯಾಮಣ್ಣ ದೇಸಾಯಿ, ಕಾರ್ಯದರ್ಶಿ ಪೂರ್ಣೇಂದ್ರಸ್ವಾಮಿ, ತಾಂತ್ರಿಕ ಸಂಯೋಜಕ ಯಮನೂರ, ತಾಂತ್ರಿಕ ಸಹಾಯಕ ಪ್ರವೀಣ, ಕರವಸೂಲಿಗಾರ ಕೊಟ್ರೇಶ್, BFT ರವಿಶಂಕರ, ಡಿಇಒ ಮೌನೇಶ್‌ ಗ್ರಾಮ ಕಾಯಕ  ಮಿತ್ರ ಶ್ರೀದೇವಿ, ರೈತರು, ಸಂಜಿವಿನಿ ಒಕ್ಕೂಟದ ಮಹಿಳೆಯರು, ಗ್ರಾಮಸ್ಥರು, ಕಾಯಕ ಬಂಧುಗಳು, ಮಹಿಳೆಯರು ಪಾಲ್ಗೊಂಡಿದ್ದರು.

== ಗ್ರಾ.ಪಂ ಹಾಗು ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುತ್ತದೆ,  ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರಿ. ಕೂಲಿ&ಸಾಮಾಗ್ರಿ ಹಣದಿಂದ ಅನುಕೂಲ, ಮತ್ತು  ರಾಷ್ಟ್ರೀಯ ತೋಟಗಾರಿಕೆ ಇಲಾಖೆಯಿಂದ ಅಲ್ಲಿಯೂ ಕೂಡಾ ಸೌಲಭ್ಯ ದೊರೆಯುತ್ತದೆ. ನರೇಗಾದಡಿ ಶೇ.65%ರಷ್ಟು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳು ಅನುಷ್ಠಾನಿಸುವದು ಕಡ್ಡಾಯವಾಗಿದೆ : ದೇವರಾಜ ಪತ್ತಾರ, ತಾಲೂಕ ಪಂಚಾಯತಿಯ ಐಇಸಿ ಸಂಯೋಜಕರು, ಕೊಪ್ಪಳ

Tags: Koppal Districr news HoashakeKoppal Gram Sabha to prepare NREGA action plan in Irakallagada Gram PanchayatKoppal Hosashake daily newsKoppal Taluka Pnachyat Implementation of natural resource management works is mandatory - Devaraja PattaraKoppal ಇರಕಲ್ಲಗಡಾ ಗ್ರಾಮ ಪಂಚಾಯತಿಯನಲ್ಲಿ ನರೇಗಾ ಕ್ರಿಯಾ ಯೋಜನೆ ತಯಾರಿಕೆ  ಗ್ರಾಮಸಭೆನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳು ಅನುಷ್ಠಾನಿಸುವದು ಕಡ್ಡಾಯ-ದೇವರಾಜ ಪತ್ತಾರ
Previous Post

ರೈತರ ವಿಚಾರದಲ್ಲಿ ರಾಜಕೀಯ‌ ಸಲ್ಲ : ಸಚಿವ ಶಿವರಾಜ್ ತಂಗಡಗಿ

Next Post

ಇಂದು ಬೆಂಗಳೂರಿನಲ್ಲಿ “ಸಂಪತ್ತಿಗೆ ಸವಾಲ್” ನಾಟಕ ಪ್ರದರ್ಶನ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!