ಹೊಸಶಕೆ ನ್ಯೂಸ್-ಕೊಪ್ಪಳ.
ಹಿರೇಸಿಂದೋಗಿ ಪಕ್ಕದ ಹಿರೇಹಳ್ಳದಲ್ಲಿ ವ್ಯಾಪಕವಾಗಿ ಮರಳು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಬಗ್ಗೆ ಬಹಳಷ್ಟು ದೂರುಗಳ ಹಿನ್ನೆಲೆಯಲ್ಲಿ ತಡೆಗಟ್ಟಲು ಸ್ಥಳಕ್ಕೆ ತೆರಳಿದ್ದ ಭೂ ವಿಜ್ಞಾನಿ ನಾಗರಾಜು ಈ. ಮತ್ತು ಅವರ ವಾಹನ ಚಾಲಕ ಸಚಿನ್ ಗೌರಿಪುರ ಮೇಲೆ ಹಲ್ಲೆ ನಡೆದಿರುವ ಘಡನೆ ನಡೆದಿದೆ.
ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಸಮೀಪದಲ್ಲಿ ಶನಿವಾರ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಅಕ್ರಮ ಮರಳು ದಂದೆಕೊರರು ಹಲ್ಲೆ ಎಸಗಿರುವರು
ಹಿರೇಸಿಂದೋಗಿ ಪಕ್ಕದ ಹಿರೇಹಳ್ಳದಲ್ಲಿ ವ್ಯಾಪಕವಾಗಿ ಮರಳು ಅಕ್ರಮವಾಗಿ ಸಾಗಣೆ ದಂದೆ ಎಗ್ಮಾಗಿಲ್ಡದೆ ನಿರಂತರವಾಗಿ ನಡೆದಿದೆ. ಆದರೆ ಇದಕ್ಕೆ ಕಡಿವಾಣ ಮಾತ್ರ ಬದ್ದಿಲ್ಲ , ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರ, ಜನಪ್ರತಿನಿಧಿಗಳ ಬೆಂಬಲಿಗರು ನಡೆಸತ್ತಿರು ಅಕ್ರಮ ಮರಳು ದಂದೆ ಬಗ್ಗೆ ಬಹಳಷ್ಟು ದೂರುಗಳ ಬಂದಿದ್ದವು. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಮೂವರು ಸಿಬ್ಬಂದಿ ಸ್ಥಳಕ್ಕೆ ಬಂದು, ಟ್ರ್ಯಾಕ್ಟರ್ ಮತ್ತು ಟಿಪ್ಪರ್ಗಳಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದುದ್ದನ್ನು ಚಿತ್ರೀಕರಿಸಿ, ವಶಕ್ಕೆ ಪಡೆಯಲು ಹೋದಾ ವೇಳೆಯಲ್ಲಿ ದಾಳಿ ಮಾಡಿ ಮೊಬೈಲ್ಗಳನ್ನು ಕಸಿದುಕೊಂಡಿದ್ದಾರೆ ಎಂದು ಹೇಳಲಾಗಿದ್ದು ಈ ಬಗ್ಗೆ ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದ ನೋಂದಣೆ ಸಂಖ್ಯೆ ಇರದ ವಾಹನಗಳು ಮರಳು ಸಾಗಿಸುತ್ತಿದ್ದವರನ್ನು ದಾಖಲೆಗಳನ್ನು ನೀಡಲು ಹೇಳಿದ್ದಾರೆ. ಯಾವುದಕ್ಕೂ ಉತ್ತರಿಸದಕ್ಕೆ ವಾಹನಗಳನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿದ್ದ ಐದು ಜನರು ಸೇರಿಕೊಂಡು ಜೀವ ಬೆದರಿಕೆ ಹಾಕಿ ಬಲವಂತವಾಗಿ ಟ್ರ್ಯಾಕ್ಟರ್ ಓಡಿಸಿಕೊಂಡು ಹೋಗಿರುವ ಘಟನೆ ಕುರಿತು ಎ ಭೂ ವಿಜ್ಞಾನಿ ನಾಗರಾಜು ನೀಡಿದ ದೂರಿನ ಮೇರೆಗೆಚಿಕ್ಕಸಿಂದೋಗಿಯ ಗುಡದಪ್ಪ ಕಾಸಲೇರ, ಶಬ್ಬೀರಸಾಬ್ ವಾಲಿಕಾರ, ಮಲ್ಲಪ್ಪ ಚಿಕ್ಕೇನಕೊಪ್ಪ, ವೀರಯ್ಯ ಹಿರೇಮಠ ಮತ್ತು ಚಿಕ್ಕೇನಕೊಪ್ಪದ ಯಲ್ಲಪ್ಪ ತಲ್ಲೂರ ವಿರುದ್ಧ ಎಫ್ಐಆರ್ ದಾಖಲಾಗಿದೆ.