ಮೆಕ್ಕೆಜೋಳ ಖರಿದಿ ಕೇಂದ್ರಗಳನ್ನು ಆರಂಭಿಸಲಿ : ಡಾ.ಬಸವರಾಜ ಕ್ಯಾವಟರ್
ಹೊಸಶಕೆ ನ್ಯೂಸ್–ಕೊಪ್ಪಳ: ತಾಲೂಕಿನಾದ್ಯಂತ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ಹಿಂದೆ ಪ್ರಭಾವಿಗಳ ಹಸ್ತಕ್ಷೇಪ ದೊಡ್ಡಮಟ್ಟದಲ್ಲಿದೆ. ಅಕ್ರಮ ಮರಳು ಮಾಫಿಯಾಗದಿಂದ ಕೆಲವು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮರಳು ದಂದೆಗೆ ಕಡಿವಾಣ ಹಾಕುವಂತೆ ನಾವು ಸಾಕಷ್ಟು ಭಾರಿ ಜಿಲ್ಲಾಡಳಿತದ ಅಧಿಕಾರಿಗಳಿಗ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ತಾಲೂಕಿನ ಕೋಳೂರು, ಬೂದಿಹಾಳ ಮತ್ತಿತರ ಗ್ರಾಮಗಳಲ್ಲಿ ಮತ್ತು ಹಿರೇಹಳ್ಳದ ಪಾತ್ರದಲ್ಲಿ ಈ ಹಿಂದೆ ಬೋಟ್ ಮೂಲಕ ಮರಳನ್ನು ತೆಗೆದು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ ಈಗ ಜೆಸಿಬಿ ಯಂತ್ರಗಳ ಮೂಲಕ ಮರಳನ್ನು ತೆಗೆದು ದೊಡ್ಡ ದೊಡ್ಡ ಟಿಪ್ಪರ್ಗಳಲ್ಲಿ ಸಾಗಿಸಲಾಗುತ್ತಿದೆ. ದೊಡ್ಡ ಟಿಪ್ಪರ್ಗಳಿಂದ ನಡೆಯುತ್ತಿರುವ ಮರಳು ದಂಧೆಗೆ ಜನರು ಬೇಸತ್ತಿದ್ದಾರೆ. ಗ್ರಾಮಗಳ ರಸ್ತೆಯಲ್ಲಿ ಓಡಾಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ತಾಲ್ಲೂಕು ಸೇರಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳು ದಂದೆ ತಡೆಗಟ್ಟಲು ನಾವು ಒತ್ತಾಯಿಸಿದರು ಸಹ ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಹೀಗೆ ಮುಂದುವರೆದರೆ ಹೇಗೆ, ಜಿಲ್ಲಾಡಳಿತ ಯಾಕೇ ಕ್ರಮ ಜರುಗಿಸುತ್ತಿಲ್ಲ, ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲವೇ ಇಲ್ಲ, ಜನರ ಸಂಕಷ್ಟ ಕೇಳೋರು ಇಲ್ಲ, ಬರೀ ಅಕ್ರಮ ದಂದೆಗಳು ನಡೆದಿದ್ದು, ಕಡಿವಾಣ ಮಾತ್ರ ಇಲ್ಲ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೋರಾಟವನ್ನು ಬಿಜೆಪಿ ಮುಂದುವರೆಸುತ್ತೇವೆ ಎಂದು ಹೇಳಿದರು
*ಮಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಿ : ಡಾ.ಬಸವರಾಜ ಕ್ಯಾವಟರ್ :
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಲ್ಲಿ ಸರಕಾರ ಹಿಂದೆಟು ಹಾಕುತ್ತಿದೆ. ಇದು ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ, ನಾವು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲೆ ರಾಜ್ಯದಲ್ಲಿ ರೈತರಿಗೆ ಹತ್ತಾರು ರೀತಿಯ ಸಮಸ್ಯೆ ಎದುರಾಗಿದೆ. ರಾಜ್ಯ ಸರ್ಕಾರ ಎಲ್ಲಾ ರಂಗಗಳನ್ನು ರಾಜ್ಯ ಸರಕಾರ ವಿಫಲವಾಗಿರುವುದು ಮುಖ್ಯಮಂತ್ರಿಗಳು ಸಾಬೀತು ಮಾಡಿದ್ದಾರೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಿದರೆ ರೈತರು ನಿಟ್ಟುಸಿರುವ ಬಿಟ್ಟು ತಾವು ಬೆಳೆದ ಬೆಳೆಗೆ ಕನಿಷ್ಟ ಬೆಲೆಯನ್ನು ಪಡೆಯುತ್ತಾರೆ. ಸರಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹರತಟ್ನಾಳ್, ಬಿಜೆಪಿ ಮುಖಂಡರಾದ ಸುನಿಲ್ ಹೆಸರೂರು, ನೀಲಕಂಠಯ್ಯ ಹಿರೇಮಠ ಇತರರು ಇದ್ದರು.
==ಮರಳು ದಂಧೆಕೊರರ ಹೆಸರನ್ನು ಹೇಳಲು ಗ್ರಾಮಸ್ಥರು ಭಯಗೊಂಡಿದ್ದಾರೆ. ಈ ಹಿಂದೆ ನಡೆದ ಮರಳು ದಂಧೆಯ ಪ್ರಕರಣದಲ್ಲಿ ಐವತ್ತು ಜನರ ಹೆಸರು ದಾಖಲು ಮಾಡಿದ್ದರು ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಎಫ್ಐಆರ್ನಲ್ಲಿರುವ ಹೆಸರು ಹೇಳಲು ಪೊಲೀಸರು ಕೂಡಾ ಹಿಂದೆಟು ಹಾಕುತ್ತಿದ್ದಾರೆ, ನಾನು ಈಗ ಮತ್ತೊಮ್ಮೆ ಮಾಧ್ಯಮದ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಅಗ್ರಹಿಸುತ್ತಿದ್ದೇನೆ. ಇದೇ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪಿಸಿ ಸರಕಾರದ ಮುಂದೆ ಇಡುತ್ತೇನೆ : ಹೇಮಲತಾ ನಾಯಕ , ವಿಧಾನ ಪರಿಷತ್
ಸದಸ್ಯರು.
==ಮೆಕ್ಕೆಜೋಳ ಖರೀದಿ ಸಂಬಂಧಿಸಿದಂತೆ ಕೇಂದ್ರ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ ಆದರೆ ರಾಜ್ಯ ಸರ್ಕಾರ ಸಮರ್ಪಕ ಕ್ರಮ ಮಾಡದೇ ಅನಗತ್ಯ ನಿಯಾಮಗಳನ್ನು ರೂಪಿಸಿದೆ, ಈವರೆಗೂ ಸರಿಯಾದ ಖರೀದಿ ಕೇಂದ್ರಗಳು ಇಲ್ಲ, ರೈತರಿಂದ ಖರೀದಿ ಸಹ ಮಾಡಿಲ್ಲ, ರಾಜ್ಯ ಸರ್ಕಾರ ರೈತರೊಂದಿಗೆ ಚೆಲ್ಲಾಟ ಆಡುತ್ತಿದೆ, ಪ್ರತಿಜಿಲ್ಲೆಯಲ್ಲಿಯೂ ಖರೀದಿ ಕೇಂದ್ರ ಆರಂಭಿಸಿ, ಯಾವುದೇ ನಿಯಮ ಮಾಡದೇ ಮೆಕ್ಕೆಜೋಳ ಬೆಳದ ರೈತರಿಂದ ಖರೀದಿಗೆ ಮುಂದಾಗಲಿ, ಸರ್ಕಾರ ಕ್ಕೆ ಮುಂದಾಲೋಚನೆ ಇಲ್ಲ, ರೈತರ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ ಕೊಡದೇ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ: ಡಾ.ಬಸವರಾಜ ಕ್ಯಾವಟರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು.==
