ಹೊಸಶಕೆ ನ್ಯೂಸ್-ಕೊಪ್ಪಳ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾದ ಇತಿಹಾಸ ಸಹಪ್ರಾಧ್ಯಾಪಕರಾದ ಇಬ್ರಾಹಿಂ ಕುದುರಿಮೋತಿ ಅವರಿಗೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡನ್ ವಿಶ್ವವಿಧ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಕುದುರಿಮೋತಿ ಅವರು ಡಾ ಶರಣಬಸಪ್ಪ ಪಿ. ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ ಆನೆಗೊಂದಿ ಹಿಸ್ಟರಿ ಅಂಡ್ ಆರ್ಟ್ ‘ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿದೆ.
ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳು ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.