Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಇದು ಹಾರಿಕೆಯ, ತೋರಿಕೆಯ ಬಜೆಟ್: ಸಿ ವಿ ಚಂದ್ರಶೇಖರ್

Hosashake News by Hosashake News
March 8, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ
0
ಇದು ಹಾರಿಕೆಯ, ತೋರಿಕೆಯ ಬಜೆಟ್: ಸಿ ವಿ ಚಂದ್ರಶೇಖರ್
Share on FacebookShare on Twitter

ಹೊಸಶಕೆ ನ್ಯೂಸ್- -ಕೊಪ್ಪಳ:  ಕಾಂಗ್ರೆಸ್ ಸರಕಾರದ ಬಜೆಟ್ ನಿಂದ ಹೆಚ್ಚಿನ ನಿರೀಕ್ಷೆ ಏನೂ ಇಲ್ಲ ಎಂಬ ನಮ್ಮ ನಿಲುವನ್ನು ಈ ಸರಕಾರ ಸ್ಪಷ್ಟಪಡಿಸಿದೆ. ಕೊಪ್ಪಳಕ್ಕೆ ಏನಾದರೂ ಸಿಕ್ಕಿದೆಯೇ ಎಂಬುದನ್ನು ಕನ್ನಡಕ ಹಾಕಿ ಹುಡುಕುವಂತಹ ಪರಿಸ್ಥಿತಿ ಇದೆ.‌ ಸೂಪರ್ ಸ್ಪೆಷಾಲಿಟಿ ಹಾಗೂ ಮೇಕೆ ಮತ್ತು ಕುರಿ ಮಾರುಕಟ್ಟೆ ಯೋಜನೆಗಳ ಘೋಷಣೆ ಬಿಟ್ಟಂತೆ ಕೊಪ್ಪಳಕ್ಕೆ ಬೇರೆ ಏನು ಇಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ್ ಹೇಳಿದ್ದಾರೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ಆರ್ಥಿಕ ಆಶಿಸ್ತು ನೋಡಿದರೆ ಈ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಕುರಿತಂತೆ ಆಂಧ್ರ ಸರಕಾರದೊಡನೆ ಚರ್ಚಿಸುವುದಾಗಿ ಹೇಳಲಾಗಿದೆ.‌ ಏನು ಚರ್ಚೆ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.‌ ಇಷ್ಟು ಪ್ರಮಾಣದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ನಿರ್ಲಕ್ಷಕ್ಕೆ ಒಳಗಾದ ಉದಾಹರಣೆಗಳೇ ಇರಲಿಲ್ಲ ಎಂದಿದ್ದಾರೆ.

ಇಲ್ಲಿನ ಶಾಸಕರು, ಸಚಿವರು ಹಾಗೂ ಆರ್ಥಿಕ ಸಲಹೆಗಾರರು ಏನು ಮಾಡುತ್ತಿದ್ದರೆಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರು ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಾ ಧೂಳಿನಲ್ಲಿ, ಗುಂಡಿ ಬಿದ್ದ ರಸ್ತೆಯಲ್ಲಿ, ಕನಿಷ್ಠ ಸೌಲಭ್ಯಗಳು ಇಲ್ಲದ ವ್ಯವಸ್ಥೆಯಲ್ಲಿ ಬದುಕುವಂತಾಗಿದೆ.

ಕೇಂದ್ರ ಸರಕಾರವನ್ನು ದೋಷಿಸುತ್ತ, ಸುಳ್ಳಿನ ಕಂತೆ ಬಿಚ್ಚುತ್ತಾ, ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸನ್ನು ಹೇಗೆ ಕ್ರೂಢೀಕರಿಸಲಾಗುವುದು ಎಂಬುದನ್ನು ಮರೆಮಾಚುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತಪಡಿಸಿರುವ ಇದು ಹಾರಿಕೆಯ, ತೋರಿಕೆಯ ಬಜೆಟ್. ಇಲ್ಲಿ ಘೋಷಿಸಲಾಗಿರುವ ಭರವಸೆಗಳನ್ನು ನೋಡಿದರೆ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಹಾಗೂ ಅವರು ಮುಖ್ಯಮಂತ್ರಿ ಸ್ಥಾನದಿಂದ ಶೀಘ್ರದಲ್ಲಿ ನಿರ್ಗಮಿಸಲಿದ್ದಾರೆ ಎಂಬುದರ ಸೂಚನೆಯಂತಿದೆ.ಎಂದು ಸಿ.ವಿ.ಚಂದ್ರಶೇಖರ್ ಎಂದು ಹೇಳಿರುವರು

Tags: BudjetCmCvcKoppalಕೊಪ್ಪಳಬಜೆಟ್ಸಿಎಂಸಿದ್ದರಾಮಯ್ಯಸಿವಿಸಿ
Previous Post

ಕೊಪ್ಪಳ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆ ಘೋಷಿಸಿಲ್ಲ : ಡಾ. ಬಸವರಾಜ ಕ್ಯಾವಟರ್

Next Post

ಹೊಸಶಕೆ ಕನ್ನಡ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!