ಹೊಸಶಕೆ ನ್ಯೂಸ್-ಗಂಗಾವತಿ: ಪತ್ರಿಕಾ ಬಳಗದಲ್ಲಿ ಸುಮಾರು 15 ವರ್ಷಗಳ ಸಾರ್ಥಕ ಸೇವೆ, ಚಲನಚಿತ್ರರಂಗ, ನಾಟಕ, ಕಲೆ, ಸಾಹಿತ್ಯ,ರಂಗಭೂಮಿ ಹಾಗೂ ಪ್ರವಾಸೋದ್ಯಮದಲ್ಲಿ ಸಲ್ಲಿಸಿದ ಕಾರ್ಯಕ್ಕಾಗಿ Magic art university, ಫರೀದಾಬಾದ್ ಹರ್ಯಾಣ, ನವ ದೆಹಲಿ ವತಿಯಿಂದ ದಿನಾಂಕ 13-9-2025 ರಂದು ನವದೆಹಲಿಯಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು.
ಈ *ಭಾಗದ ಉದಯೋನ್ಮುಖ ಪ್ರತಿಭೆ ಶ್ರೀ ಚನ್ನಬಸವ ಕೊಟಗಿಯವರ ಗೌರವ ಡಾಕ್ಟರೇಟ್ ಸಮಾರಂಭಕ್ಕೆ ಗಣ್ಯರು ಸ್ನೇಹಿತರು,ಆತ್ಮೀಯರು ಶುಭ ಹಾರೈಸಿದ್ದಾರೆ ಶ್ರೀ ಚನ್ನಬಸವ ಕೊಟಗಿಯವರು ಕನ್ನಡ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ವಿವಿಧ ಸಮಾಜದ ಹಿರಿಯರೊಂದಿಗೆ ಸಹೃದಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. Art and music university ಯ ನಿರ್ದೇಶಕರು, ಡೀನ್, ರಿಜಿಸ್ಟರ್ ಹಾಗೂ ಸಂಸ್ಥೆಯ ಸಂಪರ್ಕ ಅಧಿಕಾರಿ ಶ್ರೀಮತಿ ಆಶಾ ರವರಿಗೆ ವೈಯಕ್ತಿಕವಾಗಿ ಸಮಸ್ತ ಕರ್ನಾಟಕ ಜನತೆ ಪರವಾಗಿ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ರಾಗಲಿರುವ ಚನ್ನಬಸವ ಕೊಟಗಿ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
