*ವಿಶ್ವಮಟ್ಟದಲ್ಲಿ ಬಳಕೆ ಆಗುತ್ತಿರುವ ತಂತ್ರಜ್ಞಾನ, ಕೌಶಲ್ಯಗಳ ತರಬೇತಿ – ಜಿಲ್ಲಾಧಿಕಾರಿ ಸುರೇಶ ಇಟ್ನಾಳ
ಹೊಸಶಕೆ ನ್ಯೂಸ್-ಕೊಪ್ಪಳ: 2025-26ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದು ಘೋಷಿಸಲಾಗಿರುವ ಹಿನ್ನಲೇಯಲ್ಲಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ವಿಶ್ವ ದರ್ಜೆಯ ಕೇಂದ್ರಗಳನ್ನಾಗಿ ಸ್ನಾಪಿಸಲು ಸಚಿವರ ಹಾಗೂ ಹಿರಿಯ ಅಧಿಕಾರಿಗಳ ತಂಡವು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ವಿಶ್ವ ದರ್ಜೆಯ ಬಹು ಕೌಶಲಾಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿದೆ.
ಜಿಲ್ಲೆಯ ತಳಕಲ್ನಲ್ಲಿ ರೂ.120.00 ಕೋಟಿಗಳ ವೆಚ್ಚದಲ್ಲಿ ಹಾಗೂ ಕಲಬುರಗಿಯಲ್ಲಿ ರೂ.120.00 ಕೋಟಿಗಳ ವೆಚ್ಚದಲ್ಲಿ ವಿಶ್ವ ದರ್ಜೆಯ ಬಹು ಕೌಶಲ್ಯಾಭಿವೃದ್ಧಿ ಕೇಂದ್ರ, ಮತ್ತು ಮೈಸೂರು ಜಿಲ್ಲೆಯ ವರುಣಾದಲ್ಲಿ ರೂ.110.00 ಕೋಟಿಗಳ ವೆಚ್ಚದಲ್ಲಿ ನಬಾರ್ಡ್ ಯೋಜನೆಯಡಿ ಸ್ಥಾಪನೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ,
ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು, ಸಚಿವ ಎಂ.ಸಿ.ಸುಧಾಕರ, ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ, ಕೌಶಲಾಭಿವೃದ್ಧಿ ನಿಗಮ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ, ವ್ಯವಸ್ಥಾಪಕರಾದ ನಾಗರಾಜ ಎನ್. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ನಳಿನ್ ಅತುಲ್, ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ವ್ಯವಸ್ಥಾಪಕ ಡಾ.ದಿನೇಶ ಕುಮಾರ್ ಅವರ ತಂಡ ಒರಿಸ್ಸಾಕ್ಕೆ ಭೇಟಿ ನೀಡಿ ಬಂದಿದೆ.
ಕೇಂದ್ರ ಸರ್ಕಾರವು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಪೆಟ್ರೋಲಿಯಂ ಕಂಪನಿಗಳ ಧನ ಸಹಾಯದಡಿಯಲ್ಲಿ ವಿಶ್ವ ದರ್ಜೆಯ ಬಹುಕೌಶಲ್ಯಾಭಿವೃದ್ಧಿ ಕೇಂದ್ರವೊಂದನ್ನು ಸ್ಥಾಪಿಸಿದೆ. ಕೇಂದ್ರಕ್ಕೆ ಭೇಟಿ ನೀಡಿ ಬಂದಿರುವ ಈ ತಂಡವು ವಿಸ್ತ್ರತ ವರದಿ ನೀಡಿದರೆ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ವಿಶ್ವ ದರ್ಜೆಯ ಕೇಂದ್ರಗಳನ್ನಾಗಿ ಸ್ನಾಪಿಸಲು ನೆರವಾಗಲಿದೆ.
ಜಿಲ್ಲೆಯಲ್ಲಿ ಮತ್ತೊಂದು ಕೌಶಲ್ಯ ಅಭಿವೃದ್ಧಿ ಕೇಂದ್ರ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈಗಾಗಲೇ ತಳಕಲ್ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವಿದ್ದು, ಮತ್ತೊಂದು ವಿಶ್ವ ಮಟ್ಟದ ಉತ್ತಮ್ಮ ಗುಣಮಟ್ಟದ ಕೇಂದ್ರ ಆರಂಭವಾಗುವ ಲಕ್ಷಣಗಳು ಇವೆ. ಗುಲ್ಬರ್ಗಾ ಜಿಲ್ಲೆಯ ಸೇಡಂ, ಸಿಂಧನೂರು, ಕಂಪ್ಲಿಯಲ್ಲಿನ ಜಿಟಿಟಿಸಿಗಳನ್ನು ಸುಧಾರಿಸುವುದಾಗಿ ಹೇಳಿದೆ. ತಳಕಲ್ನಲ್ಲಿ ಈಗಾಗಲೇ ಕೌಶಲ ಕೇಂದ್ರವಿದ್ದು, ವಿಶ್ವದರ್ಜೆಯ ತರಬೇತಿ ನೀಡುವ ಇನ್ನೊಂದು ಕೇಂದ್ರ ತಲೆ ಎತ್ತಲಿದೆ.
ಈಗಾಗಲೇ ಹಲವಾರು ವೃತ್ತಿ ಸಂಬಂಧಿ ತರಬೇತಿ ಒದಗಿಸುತ್ತಿದೆ. ಐಟಿಐ, ಡಿಪ್ಲೋಮಾ ಕಾಲೇಜುಗಳು ಸಾಮಾನ್ಯ ಕೋರ್ಸ್ಗಳನ್ನು ನೀಡುತ್ತಿವೆ. ಮುಂದುವರಿದ ಭಾಗವಾಗಿ ವಿಶ್ವಮಟ್ಟದಲ್ಲಿ ಸದ್ಯ ಬಳಕೆ ಆಗುತ್ತಿರುವ ತಂತ್ರಜ್ಞಾನ, ಕೌಶಲ್ಯಗಳನ್ನು ತರಬೇತಿ ಮೂಲಕ ಯುವಜನತೆಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ತಿಳಿಸಿದರು.
ಗುಲ್ಬರ್ಗಾ ಜಿಲ್ಲೆಯ ಸೇಡಂ, ಸಿಂಧನೂರು, ಕಂಪ್ಲಿಯಲ್ಲಿನ ಜಿಟಿಟಿಸಿಗಳನ್ನು ಸುಧಾರಿಸುವುದಾಗಿ ಹೇಳಿದೆ. ತಳಕಲ್ನಲ್ಲಿ ಈಗಾಗಲೇ ಕೌಶಲ ಕೇಂದ್ರವಿದ್ದು, ವಿಶ್ವದರ್ಜೆಯ ತರಬೇತಿ ನೀಡುವ ಇನ್ನೊಂದು ಕೇಂದ್ರ ಶ್ರೀ ತಲೆ ಎತ್ತಲಿದೆ ಎಂಬುದು ವಿಶೇಷ. ಈಗಾಗಲೇ ಹಲವಾರು ವೃತ್ತಿ ಸಂಬಂಧಿ ತರಬೇತಿ ಒದಗಿಸುತ್ತಿದೆ. ಐಟಿಐ, ಡಿಪ್ಲೋಮಾ ಕಾಲೇಜುಗಳು ಸಾಮಾನ್ಯ ಕೋರ್ಸ್ಗಳನ್ನು ನೀಡುತ್ತಿವೆ. ಮುಂದುವರಿದ ಭಾಗವಾಗಿ ವಿಶ್ವಮಟ್ಟದಲ್ಲಿ ಸದ್ಯ ಬಳಕೆ ಆಗುತ್ತಿರುವ ತಂತ್ರಜ್ಞಾನ, ಕೌಶಲ್ಯಗಳನ್ನು ತರಬೇತಿ ಮೂಲಕ ಯುವಜನತೆಗೆ ನೀಡಲಾಗುವುದು. ಓರಿಸ್ಸಾದಲ್ಲಿ ಏನೇನು ತರಬೇತಿ ನೀಡುತ್ತಿದ್ದಾರೆಂದು ತಂಡ ತಿಳಿದು ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಿದೆ ಅದರಂತೆ ಹೊಸ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ ಎಂದು ಒರಿಸ್ಸಾ ರಾಜ್ಯಕ್ಕೆ ತೆರಳಿದ್ದ ಸಚಿವರ ಹಾಗೂ ಹಿರಿಯ ಅಧಿಕಾರಿಗಳ ತಂಡದಲ್ಲಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಮಾಹಿತಿ ನೀಡಿದರು.
ಕುಕನೂರು ತಾಲೂಕಿನ ತಳಕಲ್ನಲ್ಲೇ ಕೇಂದ್ರ ಆರಂಭಗೊಳ್ಳಲಿದೆ. ಈಗಿರುವ ಕೇಂದ್ರ ಅಲ್ಲದೆ ಹೆಚ್ಚಿನದಾಗಿ 25ಕ್ಕೂ ಎಕರೆ ಜಮೀನು ಗುರುತಿಸಲಾಗುತ್ತಿದೆ, ಕೆಕೆಆರ್ಡಿಬಿ ಅನುದಾನವು ಸಹ ನಿಗದಿಯಾಗಿದ್ದು, ಜತೆಗೆ ಐಇಸಿಎಲ್, ವಿಂಡ್ ಪವರ್, ಸೋಲಾರ್ ಪವರ್ ಕಂಪನಿಗಳ ಜೊತೆ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡು ಯುವಜನರಿಗೆ ಉದ್ಯೋಗವಾಕಾಶಗಳು ಸಿಗುವ ತರಬೇತಿ ನೀಡುವ ಯೋಜನೆಯಾಗಿದೆ, ಮೂರು, ಆರು ತಿಂಗಳ ಸೇರಿ ಒಂದು ವರ್ಷದ ಅವಧಿಯ ತರಬೇತಿ ಕೋರ್ಸ್ಗಳು ಆರಂಭವಾಗಲಿವೆ. ಆಯಾ ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳನ್ನು ಸ್ಥಳಿಯವಾಗಿಯೇ ತರಬೇತುಗೊಳಿಸುವುದರಿಂದ ಶೇ.100ರಷ್ಟು ಉದ್ಯೋಗ ಭರವಸೆಯೂ ದೊರೆಯಲಿದೆ. : ಡಾ.ಸುರೇಶ ಇಟ್ನಾಳ, ಜಿಲ್ಲಾಧಿಕಾರಿಗಳು ಕೊಪ್ಪಳ
