ಪಂಚಾಯತದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಸಹಾಯವಾಣಿ
ಹೊಸಶಕೆ ನ್ಯೂಸ್-ಯಲಬುರ್ಗಾ: ಸ್ಥಳೀಯ ಪಟ್ಟಣ ಪಂಚಾಯತಿ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಹಾಯ ವಾಣಿ ಕೇಂದ್ರ ತರಲಾಗಿದ್ದು ನೀರಿನ ಸಮಸ್ಯೆಗಳ ಕುರಿತು ಜನರು ದೂರು ನೀಡಬಹುದು ಎಂದು ಪ.ಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, ಜಿಲ್ಲಾಧಿಕಾರಿಗಳು ನೀರು ಬಗ್ಗೆ ಕಟ್ಟುನಿಟ್ಟಾಗಿ ಆದೇಶ ನೀಡಿದ್ದು ಹೀಗಾಗಿ ಬೇಸಿಗೆ ಪ್ರಾರಂಭವಾಗಿದ್ದು ಇಲ್ಲಿನ ಎಲ್ಲಾ ವಾರ್ಡಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದ್ದು ಒಂದು ವೇಳೆ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣವೇ ಸಾರ್ವಜನಿಕರು ಪ.ಪಂ ನ ನೀರು ಸರಬರಾಜು ಸಹಾಯಕ ಆಪರೇಟರ್ ರವಿ ಭಾಸ್ಕರ ( 8867162796 ಮೇಲ್ವಿಚಾರಕ ಸುಭಾಷ ಭಾವಿಮನಿ (9980454930), ನೋಡಲ್ ಅಧಿಕಾರಿ ಉಮೇಶ್ ಬೇಲಿ (9743277571) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ