ಹೊಸಶಕೆ ನ್ಯೂಸ್-ಕುಷ್ಟಗಿ: ಕುಷ್ಟಗಿ ತಾಲೂಕ ಹಾಲುಮತ ಸಮಾಜ ಹಾಗೂ ಹಾಲುಮತ ಮಹಾಸಭಾ ಹಾಗೂ ಕನಕ ನೌಕರರ ಸಂಘ ಕುಷ್ಟಗಿ ಸಹಯೋಗದಲ್ಲಿ 2024 – 25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಕಾರ್ಯ್ರಮದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿ ಅವರ ಮುಂದಿನ ವಿದ್ಯಾಭ್ಯಾಸ ಉನ್ನತ ಮಟ್ಟಕ್ಕೆ ಹೋಗಲೆಂದು ಆಶಿಸಿದರು. ಸಂದರ್ಭದಲ್ಲಿ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್, ಕನಕ ಗುರುಪೀಠದ ಶಾಖಾ ಮಠದ ಜಗದ್ಗುರು ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳು, ಇನ್ ಸೈಟ್ ಐಎಎಸ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕರಾದ ಜಿ ಬಿ ವಿನಯ್ ಕುಮಾರ್, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ, ಸಮಾಜದ ಹಿರಿಯರಾದ ಮಲ್ಲಣ್ಣ ಪಲ್ಲೆದ್, ಫಕೀರಪ್ಪ ಚಳ್ಳಿಗೇರಿ, ಹಾಲುಮತ ಮಹಾಸಭಾ ತಾಲೂಕು ಅಧ್ಯಕ್ಷರಾದ ಗೂರಪ್ಪ ಕುರಿ, ಮಂಜುನಾಥ ನಾಲಗಾರ್ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
