ಹೊಸಶಕೆ ನ್ಯೂಸ್-ಯಲಬುರ್ಗಾ:ಪಟ್ಟಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಮನೆಗಳಿಗೆ ಹಾನಿ, ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಮಸ್ಯೆಗಳ ಪರಿಹಾರಕ್ಕಾಗಿ ಪ.ಪಂ. ದಿಂದ ಸಹಾಯವಾಣಿ ಆರಂಭಿಸಿದೆ ಎಂದು ಮುಖ್ಯಾಧಿಕಾರಿ ನಾಗೇಶ್ ಅವರು ತಿಳಿಸಿದ್ದಾರೆ.
ಮಳೆಯಿಂದ ಆಗಿರುವ ತೊಂದರೆ ಬಗ್ಗೆ ಪಟ್ಟಣದ ವಿವಧಡೆ ಸದಸ್ಯರು, ಸಾರ್ವಜನಿಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಕ್ಷಣದ ಕ್ರಮಗಳನ್ನು ಕೈಗೊಂಡಿರುವದಾಗಿ ಹೇಳಿದ್ದಾರೆ
ಸತತ ಮಳೆ ಬೀಳುತ್ತಿರುವುದರಿಂದ ಸಾರ್ವಜನಿಕ ತೊಂದ್ರೆ ಆಗಬಾರದು ಅದಕ್ಕಾಗಿ ಪಟ್ಟಣ ಪಂಚಾಯತ ದಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ, ಸಾರ್ವಜನಿಕರು ಮಳೆಯಿಂದ ಆಗುತ್ತಿರುವ ತೊಂದರೆ, ಹಾಗೂ ಪರಿಹಾರಕ್ಕಾಗಿ ಸಿಬ್ಬಂದಿಗಳನ್ನು ಭೇಟಿಯಾಗಲು ಅಥವಾ ಫೋನ್ ಮುಖಾಂತರಮನೆಗಳು ಬಿದ್ದಲ್ಲಿ, ಹಾನಿಯಾದರೆ ವೆಂಕಣ್ಣ ಜೋಶಿ- 9996441060,
ಕನಕಪ್ಪ ನಾಯಕ್- 9036401729, ಹಾಗೂ ಕುಡಿಯುವ ನೀರಿನ ಸಮಸ್ಯೆ ಆದಲ್ಲಿ ಸುಭಾಷ್ ಚಂದ್ರ 99 80 45 49 30 , ಬಸವರಾಜ್ ಬೂತೆ 98 80 5 24225, ಮತ್ತು ರಸ್ತೆ ಚರಂಡಿ ಏನಾದರೂ ತೊಂದರೆಗೆ ಉಮೇಶ್ ಬೇಲಿ. ಕಿರಿಯ ಅಭಿಯಂತರು 9743277571, ರಮೇಶ್.9844167649, ಅಧಿಕಾರಿ, ಸಿಬ್ಬಂದಿಯವರನ್ನು ಸಂಪರ್ಕಿಸಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಮುಖ್ಯಾಧಿಕಾರಿ ನಾಗೇಶ್ ಅವರು ಕೋರಿದ್ದಾರೆ
