ಹೊಸಶಕೆನ್ಯೂಸ್-ಕೊಪ್ಪಳ: ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಕೊಪ್ಪಳ ಸ್ಟೇಷನ್ನ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ನಡೆಸುತ್ತಿರುವ ಪ್ರಯುಕ್ತ ಕೊಪ್ಪಳ ನಗರದ ವಿವಿಧಡೆ ಮೇ 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ 110 ಕೆ.ವಿ ಸ್ಟೇಷನ್ಗೆ ಒಳಪಡುವ ಮಾರ್ಗಗಳಾದ ಎಫ್-13 ಕಾಳಿದಾಸ ನಗರ ಫಿಡರ್ನ ಕಲ್ಯಾಣ ನಗರ, ಚನ್ನಬಸವ ನಗರ, ಗಣೇಶ ತೆಗ್ಗು, ಹೇಮರೆಡ್ಡಿ ಮಲ್ಲಮ್ಮ ಗುಡಿ ಏರಿಯಾ, ಪ್ರಗತಿ ನಗರ, ಜೆ.ಹೆಚ್.ಪಾಟಿಲ್ ನಗರ, ಅಭಿಷೇಕ್ ಬಡಾವಣೆ, ರಾಮಚಂದ್ರಪ್ಪ ಪೊಲೀಸ್ ಕಾಲೋನಿ, ಎಫ್.ಸಿ.ಐ ಗೊಡಾನ್, ಭಾಗ್ಯನಗರ ಸರ್ಕಲ್, ವೀರಭದ್ರಪ್ಪ ಅಗಡಿ ಲೇಔಟ್ ಮತ್ತು ಎನ್.ಜಿ.ಓ ಕಾಲೋನಿ. ಈ ಎಲ್ಲಾ ಫೀಡರನ 11 ಕೆವಿ ಲೈನ್ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ವಿದ್ಯುತ್ ನಿರ್ವಹಣಾ ಕಾರ್ಯವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.