ಹೊಸಶಕೆ ನ್ಯೂಸ್-ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿರುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಸಮಾರಂಭದ ವೇದಿಕೆ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಕಠಾರೆ ಹಾಗೂ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯನಿರತರಾಗಿರುವ ವೃತ್ತಿಬಾಂಧವರಿಗೆ ಗೌರವ ನೀಡುವ ನಿಟ್ಟಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಸಮಾರಂಭ ಆಯೋಜಿಸಿರುವುದು ನಮ್ಮೆಲರಿಗೆ ಹರ್ಷ ತಂದಿದೆ. ದತ್ತಿನಿಧಿ ಪ್ರಶಸ್ತಿ ಸಮಾರಂಭವನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಯಶಸ್ವಿಗೊಳಿಸಿ ಎಂದರು.
ಅಖಿಲ ಭಾರತೀಯ ಕೆಯುಡಬ್ಲ್ಯೂಜೆ ರಾಷ್ಟ್ರೀಯ ಸಂಚಾಲಕ ಮದನಗೌಡ್ರ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೋರ್, ಸಂಪಾದಕರ ಸಂಘದ ಅಧ್ಯಕ್ಷ ಕೆಂಚೆಗೌಡ್ರ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ಟೆಲಾಕ್ಸ್, ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಪತ್ರಕರ್ತರಾದ ಎಚ್.ಎಸ್.ಹರೀಶ್. ಎಂ. ಸಾಧಿಕ್ ಅಲಿ, ನಾಗರಾಜ್ ವೈ, ರುದ್ರಗೌಡ ಪಾಟೀಲ್, ರಾಜು ಬಿ.ಆರ್., ಬಸವರಾಜ ಗುಡ್ಲಾನೂರು, ಎನ್.ಎಂ. ದೊಡ್ಡಮನಿ, ಧರ್ಮಣ್ಣ ಹಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.