ಹೊಸಶಕೆ ನ್ಯೂಸ್-ಕೊಪ್ಪಳ: ಶಿವಪುರದ ಬೋರುಕಾ ಹತ್ತಿರ ಇರುವ ಮೀನು ಮರಿ ಉತ್ಪಾದನ ಪಾಲನಾ ಕೇಂದ್ರಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿದರು.
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸುವಂತೆ ಸೂಚಿಸಿದರು. ಬರುವ 2 ವರ್ಷದೊಳಗಾಗಿ ಮಾದರಿ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರವನ್ನಾಗಿ ನಿರ್ಮಿಸಿ ಈ ಭಾಗದ ಅತೀ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರವಾಗಿಸಬೇಕು. ಈ ಮುಂಚೆ ಇದ್ದ ಮೀನು ಮರಿ ಉತ್ಪಾದನೆ ಮಾದರಿ ಕೇಂದ್ರವನ್ನಾಗಿ ಮಾರ್ಪಡಿಸಲಾಗುವದು ಎಂದರು.
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಭಾಗ್ಯಶ್ರೀ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಜನೀಶ್, ಬಸವರಾಜ, ಗ್ರಾಮ ಪಂಚಾಯತ ಅಧ್ಯಕ್ಷ ರವಿಕುಮಾರ ಚೆಲಸಾನಿ, ಉಪಾಧ್ಯಕ್ಷ ವೆಂಕಟೇಶ ಚನ್ನದಾಸರ, ಸದಸ್ಯ ಶೇಷನಗೌಡ, ಪಿಡಿಓ ಮಂಜುಳಾ ಪಾಟೀಲ್, ತಾಲೂಕ ಐ.ಇ.ಸಿ ಸಂಯೋಜಕ ದೇವರಾಜ ಪತ್ತಾರ ಹಾಗೂ ಇತರರು ಉಪಸ್ಥಿತಿತರಿದ್ದರು.