Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಅವಲೋಕನ

ಏ. 17 ರಂದು ಜಾತಿ ಗಣತಿ ವರದಿ ವಿಸ್ತೃತವಾಗಿ ಚರ್ಚೆ : ಸಚಿವ ಶಿವರಾಜ ತಂಗಡಗಿ

ಕಾಂತರಾಜು ವರದಿ ಬಗ್ಗೆ ವಾಸ್ತವ ತಿಳಿಯದೆ ಮಾತನಾಡುವುದು ಸರಿಯಲ್ಲ

Hosashake News by Hosashake News
April 13, 2025
in ಅವಲೋಕನ, ದೇಶ, ಪ್ರಾದೇಶಿಕ, ರಾಜ್ಯ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಏ. 17 ರಂದು ಜಾತಿ ಗಣತಿ ವರದಿ ವಿಸ್ತೃತವಾಗಿ ಚರ್ಚೆ : ಸಚಿವ ಶಿವರಾಜ ತಂಗಡಗಿ
Share on FacebookShare on Twitter

ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ ಸಮುದಾಯದಲ್ಲೂ ಬಡವರಿದ್ದಾರೆ. ಸರಕಾರದ ಯೋಜನೆ ಅವರಿಗೂ ತಲುಪಿಸಬೇಕು ಎಂದು ಜಾತಿ ಗಣತಿ ವರದಿ ಎಂದ ಸಚಿವ ತಂಗಡಗಿ

ಹೊಸಶಕೆ ನ್ಯೂಸ್ -ಕೊಪ್ಪಳ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್ ಕಾಂತರಾಜು ನೇತೃತ್ವದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ ಬಗ್ಗೆ ವಾಸ್ತವ ಸತ್ಯ ತಿಳಿಯದೆ ಮಾತನಾಡುವುದು ಸರಿಯಲ್ಲ. ಎಲ್ಲಾ ಸಚಿವರಿಗೂ ವರದಿ ಪ್ರತಿ ಕಳುಹಿಸಲಾಗುತ್ತಿದೆ.  ವರದಿ ಓದಿ ತಿಳಿದುಕೊಳ್ಳಬೇಕು ಎಂದುಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್‌.ತಂಗಡಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣತಿ ವಾಸ್ತವ ಸತ್ಯ ಯಾರಿಗೂ ಗೊತ್ತಿಲ್ಲ. ಈಗಾಗಲೇ 26 ಮಂತ್ರಿಗಳಿಗೆ ವರದಿ ಪ್ರತಿ ಕಳುಹಿಸಲಾಗಿದೆ. ಎಲ್ಲಾ ಮಂತ್ರಿಗಳಿಗೂ ಪ್ರತಿ ಕಳುಹಿಸಲಾಗುವುದು. ಜಾತಿ ಲೆಕ್ಕ ಹಾಕಲು ಗಣತಿ ಮಾಡಿಲ್ಲ. ಎಲ್ಲ ಸಮುದಾಯಗಳಲ್ಲಿ ವಿದ್ಯಾವಂತರು, ಅವಿದ್ಯಾವಂತರು ಎಷ್ಟಿದ್ದಾರೆ?  ಆಸ್ತಿ ಎಷ್ಟಿದೆ? ಬಡವರು ಎಷ್ಟಿದ್ದಾರೆ? ಉದ್ಯೋಗದಲ್ಲಿ ಎಷ್ಟು ಮಂದಿ ಇದ್ದಾರೆ ಇತ್ಯಾದಿ ಮಾಹಿತಿ ಸಂಗ್ರಹಿಸಲು ಈ ಜಾತಿ ಗಣತಿ ಮಾಡಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿ ನಮಗೆ ಜಾತಿ ಲೆಕ್ಕವಲ್ಲ. ರಾಜ್ಯದ ಪ್ರತಿ ವಿಧಾನಸಭಾವಾರು ಸಮುದಾಯಗಳ ಸ್ಥಿತಿಗತಿ ಕುರಿತ ಮಾಹಿತಿ ಒಳಗೊಂಡ 50 ಸಂಪುಟಗಳ ವರದಿ ಇದೆ. ಈ ವರದಿ ಆಧರಿಸಿ ಎಲ್ಲ ಸಮುದಾಯಗಳ ಬಡವರನ್ನು ಮೇಲೆತ್ತಲು ಯೋಜನೆ ರೂಪಿಸುವುದು ಮುಖ್ಯಮಂತ್ರಿಗಳ ಚಿಂತನೆಯಾಗಿದೆ ಎಂದರು.

ಮಾಧ್ಯಮಗಳಲ್ಲಿ ತೋರಿಸುತ್ತಿರುವುದು ತಪ್ಪು ಮಾಹಿತಿ: ವರದಿಯನ್ನು ಓದದೆ ಮಾತನಾಡುವುದು ಸರಿಯಲ್ಲ. ವರದಿ ಓದಿ ಕೂಲಂಕಷವಾಗಿ ಚರ್ಚೆ ಮಾಡಲಿ. ಅದಕ್ಕಾಗಿ ಮುಖ್ಯಮಂತ್ರಿ ಅವರು ಒಂದು ವಾರ ಸಮಯ ನೀಡಿದ್ದಾರೆ. ಏ.17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಅಂಕಿ-ಅಂಶ ಸರಿಯಿಲ್ಲ. ಈ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೂ ವರದಿ ಪ್ರತಿ ನೀಡುವುದಾಗಿ ಸಚಿವರು ತಿಳಿಸಿದರು.

ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಸಂಬಂಧ ಯಾರು ಏನು ಮಾಡಿದ್ದಾರೆ. ಸಿಐಡಿ ಯಾರನ್ನೆಲ್ಲಾ ಬಂಧಿಸಿದೆ. ಬಿಜೆಪಿಗರು ಯಾರು ಭಾಗಿಯಾಗಿದ್ದಾರೆ ಎಲ್ಲದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಒದಗಿಸುತ್ತೇನೆ. ಈ ಸಂಬಂಧ ಸಂಪೂರ್ಣ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘‘ಬಿಜೆಪಿಯವರಿಗೆ ಬಡವರ ಬಗ್ಗೆ ಚಿಂತನೆ ಇಲ್ಲ. ಎಲ್ಲ ಸಮುದಾಯದಲ್ಲಿಯೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿದ್ದಾರೆ,’’ ‘‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಂಗಳ ಹಿಂದೆ ನೀಡಿರುವ ಹೇಳಿಕೆ ಒಮ್ಮೆ ನೋಡುವುದು ಒಳಿತು. 1.66 ಲಕ್ಷ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿದ್ದಾರೆ. 1.55 ಲಕ್ಷ ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಜಾತಿ ಗಣತಿ ವರದಿ ಸಿದ್ದಪಡಿಸಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 69.60 ಆಗಿದ್ದು, ಈ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣವನ್ನು ಸದ್ಯದ ಶೇ.32 ರಿಂದ ಶೇ.51ಕ್ಕೆ ಹೆಚ್ಚಳ ಮಾಡಲು ಕೆ.ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಹಿಂದುಳಿದ ಆಯೋಗವು ಸರಕಾರಕ್ಕೆ ಈ ಹಿಂದೆಯೇ ಸಲ್ಲಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ಈ ವರದಿ ಬಗ್ಗೆ ಏ 17 ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.ಎಂದು ತಿಳಿಸಿದರು

ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ ಸಮುದಾಯದಲ್ಲೂ ಬಡವರಿದ್ದಾರೆ. ಸರಕಾರದ ಯೋಜನೆ ಅವರಿಗೂ ತಲುಪಿಸಬೇಕು ಎಂದು ಜಾತಿ ಗಣತಿ ವರದಿ ತಂದಿದ್ದಾರೆ. ಏ.17ಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದು ಚರ್ಚಿಸಲಾಗುತ್ತದೆ,’’ ಸರಕಾರದ ಪ್ರತಿಯೊಂದು ಯೋಜನೆಗಳು ಎಲ್ಲರಿಗೂ ಸಿಗಬೇಕೆಂದು ಜಾತಿ ಗಣತಿ ವರದಿ ಜಾರಿಗೊಳಿಸಲಾಗುತ್ತದೆ. ಪ್ರಮುಖ 54 ಮಾನದಂಡವಿಟ್ಟುಕೊಂಡು ಜಾತಿ ಗಣತಿ ಮಾಡಿದ್ದೇವೆ :  ಶಿವರಾಜ ತಂಗಡಗಿ ಸಚಿವರು

Tags: Caste census report to be discussed in detail on April 17: Minister Shivraj ThangadgiIt is not right to talk about the Kantaraju report without knowing the facts - Thangadgiಏ. 17 ರಂದು ಜಾತಿ ಗಣತಿ ವರದಿ ವಿಸ್ತೃತವಾಗಿ ಚರ್ಚೆ : ಸಚಿವ ಶಿವರಾಜ ತಂಗಡಗಿಕಾಂತರಾಜು ವರದಿ ಬಗ್ಗೆ ವಾಸ್ತವ ತಿಳಿಯದೆ ಮಾತನಾಡುವುದು ಸರಿಯಲ್ಲ-ತಂಗಡಗಿ
Previous Post

ಅಂಬೇಡ್ಕರ್ ಎಂಬುವುದೇ ಸ್ಪೂರ್ತಿ…

Next Post

ಅ.ಕ.ಬ್ರಾಹ್ಮಣ ಮಹಾಸಭಾ ಚುನಾವಣೆ:ಕೊಪ್ಪಳ ಜಿಲ್ಲಾ ಪ್ರತಿನಿಧಿಯಾಗಿ ಗುರುರಾಜ ಜೋಶಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!