Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಆದರ್ಶಗಳು ಸಾರ್ವಕಾಲಿಕವಾಗಿವೆ:ಅಮಿರ್ ಬನ್ನೂರ್

Hosashake News by Hosashake News
September 5, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸಾಮಾಜಿಕ
0
ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಆದರ್ಶಗಳು ಸಾರ್ವಕಾಲಿಕವಾಗಿವೆ:ಅಮಿರ್ ಬನ್ನೂರ್
Share on FacebookShare on Twitter

ಮುಧೋಳದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆ

ಹೊಸಶಕೆ ನ್ಯೂಸ್-ಯಲಬುರ್ಗಾ : ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಆದರ್ಶಗಳು ಸಾರ್ವಕಾಲಿಕವಾಗಿವೆ ಎಂದು ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿಯ ಹಜರತ್ ಅಮೀರ್ ಬನ್ನೂರ್ ಅವರು ಹೇಳಿದರು.

ತಾಲೂಕಿನ ಮುಧೋಳ ಗ್ರಾಮದ ಜಾಮಿಯಾ ಮಸ್ಜಿದ್ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿ ಹಾಗೂ ನೌ ಜವಾನ್ ಯೂಥ್ ಕಮಿಟಿ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೊಂದಿಗೂ ಸ್ನೇಹ, ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದು ಪ್ರವಾದಿ ಮಹಮ್ಮದ್ ಪೈಗಂಬ‌ರ್ ಅವರು ತಿಳಿಸಿದ್ದರು. ಈ ಸಂದೇಶವನ್ನು ಜಗತ್ತಿನಾದ್ಯಂತ ಹರಡಬೇಕು ಎಂಬುದು ನಮ್ಮ ಆಶಯವಾಗಿದೆ. ಆಧುನಿಕ ಜಗತ್ತಿಗೆ ಪೈಗಂಬ‌ರ್ ಅವರ ಸಂದೇಶ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿದೆ ಎಂದರು.

ಹಜರತ್ ಸಯ್ಯದ್ ಶಾವಲಿ ದರ್ಗಾದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯ ಮೂಲಕ ಮಕ್ಕಳೆಲ್ಲ ಧ್ವಜ ಹಿಡಿದು  ವಾಹನಗಳನ್ನ ಶೃಂಗಾರಗೊಂಡು ಮೆರವಣಿಗೆಯಲ್ಲಿ ಸಾಗಿದವು. ಗೂಳಿ ಬಸವೇಶ್ವರ ದೇವಸ್ಥಾನ. ಹುಲಿಗೆಮ್ಮನ ದೇವಸ್ಥಾನ. ಮೈಬು ಸ್ವಾನಿ ದರ್ಗಾ. ಟಿಪ್ಪು ಸುಲ್ತಾನ್ ವೃತ್ತದ, ಡಾ. ಬಿ ಆರ್ ಅಂಬೇಡ್ಕರ್ ವೃತ್ತದ  ಮೂಲಕ ಸಾಗಿ ಹಳ ಪೇಟೆ ಜಾಮಿಯಾ ಮಸೀದಿಗೆ ಆಗಮಿಸಿ ಹಜರತ್ ಮಹ ಮ್ಮದ್ ಪೈಗಂಬರ್ ಅವರ ಕುರಿತು ಪಠಣ ಮಾಡಿದರು. ನಂತರ ಹಲ್ಪ ಉಪಹಾರ ಪುನಃ ಹಜರತ್ ಸಯ್ಯದ್ ಶಾವಲಿ ಅವರ ದರ್ಗಾದ ಕಡೆ ಸಾಗಿದರು. ಮುಸ್ಲಿಮರು ಪೈಗಂಬರ್ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು.

ಈದ್ ಮಿಲಾದುನ್ನಬಿಯ ಹಿನ್ನೆಲೆ ಮದರ್ಸ ಮ ಕ್ಕಳಿಂದ ನಾತ್ ಶರೀಫ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಭಾನುವಾರ ಭಕ್ತಿಯಿಂದ, ಹರ್ಷೋಲ್ಲಾಸ, ಸಂಭ್ರಮದಿಂದ ಆಚರಿಸಲಾಯಿತು.  ಇದೇ ಸಂದರ್ಭದಲ್ಲಿ ಹಜರತ್ ಸೈಯದ್ ಶಾವಲಿ ಅಂಜುಮನ್ ಕಾಮೀಟಿ ಸದಸ್ಯರು, ಸಯ್ಯದಸಾಬ್ ಹಿರೇಮನಿ ಚೇರಮನ್, ಮೌಲಸಾಬ್ ಮೊತೇಖಾನ್, ಹಾಸನಸಾಬ್ ಹಿರೇಮನಿ ವಕೀಲರು, ಮಹಮ್ಮದ್ ಆರಾಬಳ್ಳಿನ, ಹಜರತ್ ಅಮಿರ್ ಬನ್ನೂರ್, ಗಣಿಸಾಬ ನೂರಾಬಾಷಾ. ಗ್ರಾಪಂ ಸದಸ್ಯ ಖಾದಿರಾಬಾಷಾ ತೋಳಗಲ್, ಮುಖಂಡರು ಹೊನ್ನೂರಸಾಬ ವಟಪರ್ವಿ, ದದೇಸಾಬ ತೋಳಗಲ್, ಕೂತುಬೂಸಾಬ ನದಾಫ್, ಮತ್ತು ಹಜರತ್ ಸೈಯದ್ ಶಾವಲಿ ನೌ ಜವಾನ್ ಯೂಥ್ ಕಮಿಟಿ ಯ ಸದಸ್ಯರು ಹಸೇನ್, ಅಬ್ದುಲ್ ರಜಾಕ್, ಮಾಬೂಸಾಬ, ರಹಿಮಾನ್, ಗುಡುಸಾಬ್, ಪಿರಸಾಬ್, ಅಜ್ಮಿರ್, ಮರ್ತುಜ್, ರಾಜಸಾಬ್ ಷರೀಫ್ ಕುರುಡಗಿ, ಉಸ್ಮಾನ್, ಅಬ್ದುಲ್, ಇನ್ನು ಹಲವಾರು ಯುತ್ ಕಮಿಟಿಯ ಸರ್ವ ಸದಸ್ಯರು ಈ ಜಾತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಮಿಟಿಯ ಸರ್ವ ಸದಸ್ಯರು ಇನ್ನಿತರಿದ್ದರು.

Tags: 1500th birth anniversary of Pravadi Muhammad paigamber celebrated in MudholKoppal News The ideals of Prophet Muhammad are timeless: Amir BannurYelburga newsಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಆದರ್ಶಗಳು ಸಾರ್ವಕಾಲಿಕವಾಗಿವೆ:ಅಮಿರ್ ಬನ್ನೂರ್
Previous Post

ಸೆ. 6 ರಂದು ಹೊಸಪೇಟೆಯಲ್ಲಿ ಕಲಬುರಗಿ ವಿಭಾಗ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಾಗಾರ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!