Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ರಾಜ್ಯ

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ನರೇಗಾ ಹಬ್ಬದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಶಸ್ತಿಗಳ ಗರಿ

graochandan1 by graochandan1
February 5, 2025
in ರಾಜ್ಯ, ಸುದ್ದಿ
0
ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ನರೇಗಾ ಹಬ್ಬದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಶಸ್ತಿಗಳ ಗರಿ
Share on FacebookShare on Twitter

ತೋಟಗಾರಿಕೆ, ಮುನಿರಾಬಾದ ಡ್ಯಾಂ ಗ್ರಾ.ಪಂ, ಅಳವಂಡಿ ಉತ್ತಮ ಕಾಯಕ ಬಂಧು ಪ್ರಶಸ್ತಿ
ಹೊಸಶಕೆ ನ್ಯೂಸ್-ಕೊಪ್ಪಳ:-ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮುನಿರಾಬಾದ ಡ್ಯಾಂ ಗ್ರಾಮ ಪಂಚಾಯತಿ, ಉತ್ತಮ ಕಾಯಕ ಬಂಧು ಅಳವಂಡಿ ಗ್ರಾಮ ಪಂಚಾಯತಿಯ ಶ್ರೀದೆವಿ ಎಲಿಬಳ್ಳಿ, ಹಾಗೂ ತೋಟಗಾರಿಕೆ ಇಲಾಖೆಗೆ ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆಗಾಗಿ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚಗೌಡ, ಶಾಸಕರಾದ ಹರ್ಷಾದ್ ರಿಜ್ವಾನ್, ಪ್ರಧಾನ ಕಾರ್ಯದರ್ಶಿಗಳಾದ ಅಜುಂಮ್ ಫರ್ವೆಜ್, ಉಮಾಮಹಾದೇವನ್ , ಅಯುಕ್ತರಾದ ಪವನಕುಮಾರ ಮಾಲಪಾಟಿ, ಅರುಂಧತಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಅತ್ಯುತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿಯನ್ನು ಮುನಿರಾಬಾದ ಡ್ಯಾಂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಯೂಬ್ ಖಾನ್ ಪಿಡಿಒ ಮಹೇಶ್ ಸಜ್ಜನ್, ಉಪಾಧ್ಯಕ್ಷರಾದ ಸೌಭಾಗ್ಯ ನಾಗರಾಜ ಮತ್ತು ಸರ್ವ ಸದಸ್ಯರು, ತಾಂತ್ರಿಕ ಸಹಾಯಕ, ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವೀಕರಿಸಿದರು.

ಅಳವಂಡಿ ಗ್ರಾಮ ಪಂಚಾಯತಿಯ ಉತ್ತಮ ಕಾಯಕಬಂಧು ಪ್ರಶಸ್ತಿಯನ್ನು ಕಾಯಕ ಬಂಧು ಶ್ರೀದೇವಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ,ಅಧ್ಯಕ್ಷೆ ಶಂಕ್ರಮ ಜೊಗಿನ್, ಪಿಡಿಒ ಕೊಟ್ರಪ್ಪ ಅಂಗಡಿ, ಗ್ರಾಮ ಕಾಯಕ ಮಿತ್ತ ಗೀತಾ ಕಿಲ್ಲೆದ ಸ್ವೀಕರಿಸಿದರು.

ಅತ್ಯುತ್ತಮ ಒಗ್ಗೂಡಿಸುವಿಕೆ ತೋಟಗಾರಿಕೆ ಇಲಾಖೆಯ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳ ತಂಡ ಪ್ರಶಸ್ತಿ ಸ್ವೀಕರಿಸಿತು.


ಜಿಲ್ಲಾ ಪಂಚಾಯತಿಯಿಂದ ನಿರ್ಮಿಸಲಾಗಿದ್ದ ಬೂದು ನಿರು ನಿರ್ವಹಣಾ ಕಾಮಗಾರಿ ಅನುಷ್ಠಾನ ಮಾದರಿಯ ಸ್ತಬ್ದಚಿತ್ರವನ್ನು ಸ್ಟಾಲ್ ಅಳವಡಿಸಿರುವದನ್ನು ಇಲಾಖಾ ಸಚಿವರು, ವಿಧಾನಪರಿಷತ್ ಸಭಾಪತಿಗಳ ತಂಡ ವೀಕ್ಷಿಸಿ ಅನುಷ್ಠಾನ ಮಾದರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.

 

ಕೊಪ್ಪಳ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಎಡಿಪಿಸಿ ಮಹಾಂತಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ವಾಸಣ್ಣ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ವಿಶ್ವನಾಥ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಗುರುರಾಜ ಇತರರು ಇದ್ದರು.

Previous Post

ಸಿರಾಜ್ ಬಿಸರಳ್ಳಿ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ

Next Post

ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ

graochandan1

graochandan1

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!