ಹೊಸಶಕೆ ನ್ಯೂಸ್–ಕೊಪ್ಪಳ: ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಮಾ. 7 ರಂದು ಶುಕ್ರವಾರ ಕೊಪ್ಪಳ ನಗರಕ್ಕೆ ಆಗಮಿಸಲಿದ್ದಾರೆ.
ವಿಜಯಯಾತ್ರೆ ನಿಮಿತ್ಯ ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕೊಪ್ಪಳ ನಗರಕ್ಕೆ ದಿ. 7 ಮತ್ತು 8 ಮಾರ್ಚ 2025 ರಂದು ಆಗಮಿಸುವರು, ನಗರಕ್ಕೆ ಪುರಪ್ರವೇಶ ಮಾಡುವ ಮುನ್ನ ದಿ. 07-03-2025 ರಂದು ಸಂಜೆ 6-30ಕ್ಕೆ ಶೋಭಾಯಾತ್ರೆ ಜರುಗಲಿದ್ದು, ಶೋಭಾಯಾತ್ರೆಯು ಹೊಸಪೇಟೆ ರಸ್ತೆಯ ಶ್ರೀ ಈಶ್ವರ ಪಾರ್ಕನಿಂದ ಪ್ರಾರಂಭವಾಗಿ ಅಶೋಕ ಸರ್ಕಲ್ ಮುಖಾಂತರ ಕಿನ್ನಾಳ ರಸ್ತೆಯ ಪ್ರವಾಸಿ ಮಂದಿರ ಹತ್ತಿರವಿರುವ ಸತ್ಯಧ್ಯಾನಪುರ ಬಡಾವಣೆಯ ವಾಸವಿ ಮಂಗಲ ಭವನದ ವರೆಗೆ ಶೋಭಾಯಾತ್ರೆ ಮುಕ್ತಾಯಗೊಳ್ಳುತ್ತದೆ.
ಬಳಿಕ ಪರಮಪೂಜ್ಯ ಶ್ರೀ ಶ್ರೀ ಗಳಿಂದ ಆಶೀರ್ವಚನ ಹಾಗೂ ಶ್ರೀ ಚಂದ್ರಮೌಳೇಶ್ವರ ಪೂಜೆ ದಿ. 8 ಮಾರ್ಚ 2025 10 ಗಂಟೆಗೆ ನೂತನ ಶ್ರೀ ಶಂಕರ ಮಠದ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ, ಎರಡು ದಿನ ಪ್ರಸಾದ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ಮಾಡಲಾಗಿರುತ್ತದೆ ಎಂದು ತಿ ಸುವರು ಎಂದು ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಕೃಷ್ಣ ಪದಕಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟಿನ ಉಪಾಧ್ಯಕ್ಷ ವೆಂಕಟೇಶ್ ಜೋಶಿ, ಕಾರ್ಯದರ್ಶಿ ರವಿ ಪುರೋಹಿತ, ಖಜಾಂಚಿ ಶ್ರೀನಿವಾಸ್ ಅಶ್ವಥಪುರ, ವಿಜಯ್ ಕುಮಾರ್ ಪದಕಿ, ವೆಂಕಟೇಶ್ ಪದಕಿ, ಸುರೇಶ್ ನಾಡಗೇರಿ, ಸುರೇಶ್ ಗುಡಿ ಮತ್ತಿತರರು ಮನವಿ ಮಾಡಿರುವರು.