ಹೊಸಶಕೆ ನ್ಯೂಸ್–ಕೊಪ್ಪಳ:ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಅನಿಕೇತ ರಾಜೇಶ ಬಳ್ಳಾರಿ ಕರ್ನಾಟಕ ಸರಕಾರ ಕೊಡಮಾಡುವ ‘ಬಾಲ ವಿಕಾಸ ಅಕಾಡೆಮಿ’ಯ ‘ಅಕಾಡೆಮಿ ಬಾಲ ಗೌರವ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾನೆ.
ಉತ್ತಮ ಈಜು ಮತ್ತು ನೃತ್ಯಪಟುವಾಗಿರುವ ಅನಿಕೇತ ಬಳ್ಳಾರಿ ‘ನಮ್ಮ ಭಾಷೆ – ನಮ್ಮ ಕನ್ನಡ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಬಾಲನಟನಾಗಿಯೂ ಅಭಿನಯಿಸಿದ್ದು, ಕಳೆದ 2024-25 ನೇ ಸಾಲಿನಲ್ಲಿಯೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿಯಲ್ಲಿ ಕೊಡಮಾಡಲಾದ ಹತ್ತು ಸಾವಿರ ರೂಪಾಯಿ ನಗದು ಬಹುಮಾನದ ‘ಕೊಪ್ಪಳ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ’ವೂ ಅನಿಕೇತನಿಗೆ ಲಭಿಸಿತ್ತು.
ಅನಿಕೇತನಿಗೆ ಸದರಿ ಪ್ರಶಸ್ತಿಯನ್ನು ಇದೇ ಡಿಸೆಂಬರ್ 16, ಮಂಗಳವಾರದAದು ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆಯ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ, ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
