ಹೊಸಶಕೆ ನ್ಯೂಸ್-ರಾಯಚೂರು : ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8ರಂದು ಅಗ್ನಿವೀರ್ ಸೇನಾ ನೇಮಕಾತಿ ಭರ್ತಿ ಕಾರ್ಯಕ್ರಮ ಮೊದಲ ದಿನ ಯಶಸ್ವಿಯಾಗಿ ನಡೆದಿದ್ದು, ಈ ಸೇನಾ ನೇಮಕಾತಿಗೆ, ದೇಶಸೇವೆ ಬಯಸಿದ ಅನೇಕ ವಿವಿಧ ಜಿಲ್ಲೆಗಳ ಯುವಕರು ಉತ್ಸಾಹದಿಂದ ಭಾಗಿಯಾಗಲಿದ್ದು, ಮೊದಲ ದಿನ ಕೊಪ್ಪಳ ಜಿಲ್ಲೆಯಿಂದ ಒಟ್ಟು 587 ಅಭ್ಯರ್ಥಿಗಳು ವರದಿ ಮಾಡಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆ ಸೇರಿದಂತೆ ಕಠಿಣ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದ್ದು, ಈ ಸೇನಾ ಭರ್ತಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು. ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದ್ದು, ಅವರು ಶೀಘ್ರದಲ್ಲೇ ತರಬೇತಿಗೆ ಹಾಜರಾಗಲಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು. ದೇಶಸೇವೆಯ ಕನಸು ಹೊತ್ತು ಅದನ್ನು ಸಾಕಾರಗೊಳಿಸಲು ಸೇನಾ ಭರ್ತಿಗೆ ಆಗಮಿಸಿ, ಶಾರಿರೀಕ ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿ ಮುಂದಿನ ಹಂತಕ್ಕೆ ಕಾಲಿಟ್ಟ ಯುವಕರ ಮೊಗದಲ್ಲಿ ಸಂತಷ ಮತ್ತು ದೇಸೆ ಸೇವೆಗೆ ತಾನು ಆಯ್ಕೆಯಾಗುತ್ತೇನೆ ಎನ್ನುವ ಹೆಮ್ಮೆಯ, ವಿಶ್ವಾಸದ ಭಾವ ಕಾಣಿಸಿತು. ತಮ್ಮ ತಮ್ಮ ಕುಟುಂಬದ ಯುವಕರ ಸೇನಾ ಭರ್ತಿ ನೋಡಲು ಮತ್ತು ಅವರಿಗೆ ಸಹಾಯ ಮಾಡಲು ಕುಟುಂಬದವರು ಆಗಮಿಸಿದ್ದರು. ಶಾರೀರಿಕ ಪರೀಕ್ಷೆಯ ಹಂತದಲ್ಲಿ ಯುವಕರು ಪಾಸಾಗಿದ್ದನ್ನು ಕಂಡು ಕೆಲವರು ಭಾವುಕರಾದರು. ಯುವಕರಿಗೆ ಅಭಿನಂದನೆ ತಿಳಿಸಿದರು.
==ಸೇನಾ ಭರ್ತಿ: ಆಗಸ್ಟ್ 9ರಂದು ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರನಿಂದ 860 ಅಭ್ಯರ್ಥಿಗಳು ಭಾಗಿ: ನಗರದ ಕೃಷಿ ವಿವಿ ಆವರಣದಲ್ಲಿ ಆರಂಭಗೊಂಡ ಅಗ್ನಿವೀರ್ ಸೇನಾ ಭರ್ತಿಯಲ್ಲಿ ಆಗಸ್ಟ್ 9ರಂದು ಕೊಪ್ಪಳ ಜಿಲ್ಲೆಯಿಂದ 83 ಅಭ್ಯರ್ಥಿಗಳು, ಯಾದಗಿರಿ ಜಿಲ್ಲೆಯಿಂದ 251 ಅಭ್ಯರ್ಥಿಗಳು, ಕಲಬುರಗಿ ಜಿಲ್ಲೆಯಿಂದ 445 ಮತ್ತು ಬೀದರ್ ಜಿಲ್ಲೆಯಿಂದ 81 ಅಭ್ಯರ್ಥಿಗಳು ಸೇರಿ ಒಟ್ಟು 860 ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.==