ಗ್ರೂಫ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳಿಗೆ ಸಾಮಾನ್ಯ ಬುನಾದಿ ತರಬೇತಿ
ಹೊಸಶಕೆ ನ್ಯೂಸ್-ಕೊಪ್ಪಳ: ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ 42 ದಿನಗಳ ಕಾಲ ಹಮ್ಮಿಕೊಂಡಿರು ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಗ್ರುಫ್ ಸಿ ವೃಂದದ ಲಿಪಿಕ ಪ್ರಶಿಕ್ಷಾರ್ಥಿಗಳು ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇತ್ತಿಚೆಗೆ ಆಯ್ಕೆಯಾದ ಗ್ರೂಫ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಡಳಿತಾತ್ಮಕವಾಗಿ ಹೆಚ್ಚಿನ ಸುಧಾರಣೆಯಾಗಬೇಕಾದರೆ ತಮ್ಮ ತಮ್ಮ ಕಛೇರಿ ವಿಷಯಗಳ ಕುರಿತು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಯಾವುದೆ ಫೈಲಿಗೆ ಸಹಿ ಮಾಡಬೇಕಾದರೆ ಅದನ್ನು ಓದಿ ತಿಳಿದುಕೊಂಡೆ ಮಾಡಬೇಕು. ಗೊತ್ತಿಲ್ಲದ ವಿಷಯಗಳ ಕುರಿತು ಚರ್ಚೆಮಾಡಿ ತಿಳಿದುಕೊಳ್ಳಬೇಕು. 42 ದಿನಗಳ ತರಬೇತಿ ಅವಧಿಯಲ್ಲಿ ತಮ್ಮ ಇಲಾಖೆಗಳ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಹೋಗಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ್ ಮಾತನಾಡಿ ತರಬೇತಿ ನಮ್ಮ ವೃತ್ತಿ ಜೀವನದ ಕೊನೆ ಕ್ಷಣದವರೆಗೆ ಬೇಕು. ವೃತ್ತಿ ಜೀವನದಲ್ಲಿ ನಾವು ಮೇಲೆ ಬರಬೇಕಾದರೆ ಕೌಶಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬೇಸಿಕ್ ಗೊತ್ತಿಲ್ಲದಿದ್ದರೆ ನಾವು ಯಾವ ತಂತ್ರಾಂಶ ಕಲಿತರು ಅದು ತಲೆಯಲ್ಲಿ ಹೋಗುವುದಿಲ್ಲ ಹಾಗಾಗಿ ಪ್ರಶಿಕ್ಷಾರ್ಥಿಗಳಿಗೆ ಬುನಾದಿ ತರಬೇತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಗ್ರೇಡ್-2 ತಹಶಿಲ್ದಾರ ಗವಿಸಿದ್ದಪ್ಪ ಮಣ್ಣೂರ. ವಾರ್ತಾ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ. ಸುರೇಶ ಜಿ. ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರಾದ ಶ್ರೀ ಧರ್ ಮತ್ತು ನರ್ಮದಾ ಸೇರಿದಂತೆ ಗ್ರುಪ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೃಷ್ಣಮೂರ್ತಿ ದೇಸಾಯಿ, ಮೈಲಾರ್ ರಾವ್ ಕುಲಕರ್ಣಿ, ಲಾಯಕ್ ಅಲಿ, ಎಂ.ಗುರುರಾಜ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.