Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಡಾ. ಫ.ಗು.ಹಳಕಟ್ಟಿ,  ಹಡಪದ ಅಪ್ಪಣ್ಣ ಜಯಂತಿಗೆ ಅಗತ್ಯ ಸಿದ್ಧತೆ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Hosashake News by Hosashake News
June 18, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ
0
ಡಾ. ಫ.ಗು.ಹಳಕಟ್ಟಿ,  ಹಡಪದ ಅಪ್ಪಣ್ಣ ಜಯಂತಿಗೆ ಅಗತ್ಯ ಸಿದ್ಧತೆ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ :  ಜಿಲ್ಲಾ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೆಂಪೇಗೌಡ, ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

*ಡಾ. ಫ.ಗು ಹಳಕಟ್ಟಿ ಜಯಂತಿ:* ಜಿಲ್ಲಾ ಮಟ್ಟದಲ್ಲಿ ಡಾ. ಫ.ಗು ಹಳಕಟ್ಟಿ ಜಯಂತಿಯನ್ನು ಜುಲೈ 2 ರಂದು ಹಮ್ಮಿಕೊಳ್ಳಲಾಗುವುದು. ಅಂದು ಬೆಳಿಗ್ಗೆ 8.30ಕ್ಕೆ ಕುಷ್ಟಗಿ ರಸ್ತೆಯಲ್ಲಿರುವ ಡಾ. ಫ.ಗು ಹಳಕಟ್ಟಿ ವೃತ್ತದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಲಿದೆ. ನಂತರ 10.30 ಗಂಟೆಗೆ ನಗರದ ಸಾಹಿತ್ಯ ಭನವದಲ್ಲಿ ನಡೆಯಲಿರುವ ವೇದಿಕೆ ಸಮಾರಂಭದಲ್ಲಿ ಡಾ. ಫ.ಗು ಹಳಕಟ್ಟಿ ಭಾವಚಿತ್ರಕ್ಕೆ ಪೂಜೆ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

*ಹಡಪದ ಅಪ್ಪಣ್ಣ ಜಯಂತಿ:* ಸಮಾಜದ ಮುಖಂಡರ ಕೋರಿಕೆಯ ಮೇರೆಗೆ ಕೊಪ್ಪಳ ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನು ಜುಲೈ 10ರ ಬದಲಿಗೆ ಜುಲೈ 22ಕ್ಕೆ ಆಯೋಜಿಸಲಾಗುವುದು. ಅಂದು ಬೆಳಿಗ್ಗೆ 8.30ಕ್ಕೆ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೇರವಣಿಗೆಯು ನಗರದ ಗಡಿಯಾರ ಕಂಬದ ಹತ್ತಿರವಿರುವ ಅಕ್ಕಮಹಾದೇವಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಲಿದೆ. ಬಳಿಕ 10.30 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪೂಜೆ, ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭಗಳ ದಿನದಂದು, ಸಾಹಿತ್ಯ ಭವನ, ಡಾ. ಫ.ಗು ಹಳಕಟ್ಟಿ ವೃತ್ತ ಮತ್ತು ರಸ್ತೆ ಸ್ವಚ್ಛತೆಗೆ ಸೂಚಿಸಿದರು.  ಕೆಂಪೇಗೌಡ ಜಯಂತಿಯನ್ನು ಜೂನ್ 27 ರಂದು ಸರಳವಾಗಿ ಆಚರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಬಸವ ಅನುಯಾಯಿಗಳಾದ ಗವಿಸಿದ್ದ ಕೊಪ್ಪಳ, ಈರಣ್ಣ ಕೊರಳಳ್ಳಿ, ಹನುಮಂತ ಕಲಮಂಗಿ, ಶೇಖರ ಇಂಗಳದಾಳ, ಶರಣಬಸವ ಪಾಟೀಲ್, ಗುಡದಪ್ಪ ಹಡಪದ, ವೀರಣ್ಣ ಸಂಕ್ಲಾಪುರ, ಈಶ್ವರಪ್ಪ ದಿನ್ನಿ, ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ಹನುಮಂತಪ್ಪ ಈಶ್ವರಪ್ಪ, ಮಂಜುನಾಥ ಹಡಪದ, ಶವುಕುಮಾರ ಕಾರಟಗಿ, ಮೌನೇಶ ಕೊಪ್ಪಳ, ದ್ಯಾಮಣ್ಣ ಮದಿನೂರ, ಈಶಪ್ಪ ಮುದ್ದಾಬಳ್ಳಿ, ವೀರುಪಾಕ್ಷಪ್ಪ ಮ್ಯಾದ್ನೇರಿ, ಬಸವರಾಜ್ ಇಟಗಿ, ಶರಣಪ್ಪ ಇಟಗಿ, ಗವಿಸಿದ್ದಪ್ಪ ಮಾದಿನೂರ, ಮುತ್ತಣ್ಣ ಬೆಣಕಲ್, ಬಸವರಾಜ್ ಉಣಿಸಿಹಾಳ್, ಅಂದಪ್ಪ, ವೀರುಪಾಕ್ಷ ದೊಡ್ಡಮನಿ, ಗವಿಸಿದ್ದಪ್ಪ ಕಾಟ್ರಳ್ಳಿ, ಶಂಕ್ರಪ್ಪ ಹಡಪದ, ಈರಣ್ಣ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Tags: Dr. F.G.HalakattiKoppal Additional Deputy Commissioner SidrameshwaraKoppal ಡಾ. ಫ.ಗು.ಹಳಕಟ್ಟಿnecessary preparations for Hadapada Appanna Jayanti - Additional Deputy Commissioner Sidrameshwaraಹಡಪದ ಅಪ್ಪಣ್ಣ ಜಯಂತಿಗೆ ಅಗತ್ಯ ಸಿದ್ಧತೆ - ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
Previous Post

ಜಿ. ಪಂ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

Next Post

ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರ ಸ್ವೀಕಾರ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಮೊರೆರ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲಾಗುವುದು- ಸಚಿವ ಎಚ್.ಕೆ. ಪಾಟೀಲ್

ಕೊಪ್ಪಳ ಜಿ.ಪಂ. ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರ ಸ್ವೀಕಾರ

ಡಾ. ಫ.ಗು.ಹಳಕಟ್ಟಿ,  ಹಡಪದ ಅಪ್ಪಣ್ಣ ಜಯಂತಿಗೆ ಅಗತ್ಯ ಸಿದ್ಧತೆ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಜಿ. ಪಂ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

ಕೊಪ್ಪಳ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ್ ಬಿ ಇಟ್ನಾಳ ಅಧಿಕಾರ ಸ್ವೀಕಾರ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!