ಹೊಸಶಕೆ ನ್ಯೂಸ್- ಪಿಂಜಾರ್ ಸಮಾಜಕ್ಕೆ ಸರಕಾರ ಸ್ಪಂದಿದೆ ಅನ್ಯಾಯ ಮಾಡುತ್ತಿದೆ ಎಂದು ಕೊಪ್ಪಳ ಜಿಲ್ಲಾ ನದಾಫ್ ಪಿಂಜಾರ ಸಮಾಜದ ಮುಖಂಡರು ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಕಾಶೀಂಅಲಿ ಮುದ್ದಾಬಳ್ಳಿ ಮಾತನಾಡಿ, ರಾಜ್ಯದಲ್ಲಿ ಪಿಂಜಾರ್ ನದಾಫ್ ಸಮಾಜ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು , ನಮ್ಮ ಸಮಾಜ ಅರೆ ಅಲೆಮಾರಿಗಳಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರುಗಳಿಗೆ ಖುದ್ದಾಗಿ ಭೇಟಿ ಮಾಡಿ ಅನುದಾನ ಒದಗಿಸಲು ಕೋರಿದರು ಬಜೆಟ್ ನಲ್ಲಿ ಪ್ರಸ್ತಾಪವೇ ಮಾಡದೇ ಅನ್ಯಾಯ ಮಾಡಿದೆ ಎಂದು ತಿಳಿಸಿದರು.
ಸರಕಾರ ವೃತ್ತಿ ಆಧಾರದ ಮೇಲೆ ಪ್ರವರ್ಗ-1ರಲ್ಲಿ ಮೀಸಲಾತಿಯನ್ನು ನೀಡಿದ್ದು, ಇತರೆ 117 ಜಾತಿಯರೊಂದಿಗೆ ಸ್ಪರ್ಧೆ ಮಾಡಿ ಶೇ.4ರ ಒಟ್ಟು ಮೀಸಲಾತಿಯಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟ ಸಾಧ್ಯವಾಗಿರುತ್ತದೆ, ಕೆಪಿಎಸ್ಸಿಯಲ್ಲಿ ಪಿಂಜಾರ ಸಮಾಜದವರು ಆಯ್ಕೆಯಾಗಿರುವುದಿಲ್ಲ, ಸಮಾಜದವರು ಸತತವಾಗಿ ಮನವಿಗಳನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪಿಂಜಾರ್ ನದಾಫ್ ಸಮಾಜದ ರಾಜ್ಯ ಕೋಶಾಧ್ಯಕ್ಷ ಶಾಬುದ್ದೀನ್ ನೂರಬಾಷಾ, ಜಿಲ್ಲಾ ಗೌರವಾಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ, ಕೊಪ್ಪಳ ತಾಲೂಕು ಅಧ್ಯಕ್ಷ ಆಸ್ಮಾನ್ ಸಾಬ್ ಕರ್ಕಿಹಳ್ಳಿ, ಕೊಪ್ಪಳ ತಾಲೂಕ ಉಪಾಧ್ಯಕ್ಷರಾದ ಫಕ್ರುಸಾಬ್ ನದಾಫ್, ಮುರ್ತುಜಾ ಚುಟ್ಟಾದ್ ಅಸಮಾಧಾನ ವ್ಯಕ್ತಪಡಿಸಿ ನದಾಫ್ ಪಿಂಜಾರ ಸಮಾಜದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಂದಿನ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.