ಹೊಸಶಕೆ ನ್ಯೂಸ್ -ಕೊಪ್ಪಳ : ಪುಣೆನಲ್ಲಿ ಜರುಗಿದ ಕಿರ್ಲೋಸ್ಕರ-ವಸುಂಧರಾ ಇಕೋ ಅಂತರಾಷ್ಟ್ರೀಯ ಮಟ್ಟದ ‘ಗ್ರೀನ್‌ಕಾಲೇಜ್-ಕ್ಲೀನ್‌ಕಾಲೇಜ್’ ಕಾರ್ಯಕ್ರಮದಲ್ಲಿ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬಿ.ಎಸ್ಸಿ 4ನೇ ಸೆಮ್ ವಿದ್ಯಾರ್ಥಿನಿ ಕು. ಮೇಘನಾ ಪಾಟೀಲ ಮತ್ತು ಬಿ.ಎ 4ನೇ ಸೆಮ್ ವಿದ್ಯಾರ್ಥಿಗಳಾದ ಕು. ಅಕ್ಷತಾ ನಾಗದೇವಿ ಹಾಗೂ ಕು. ಮುತ್ತಣ್ಣ ರಾಠೋಡ ಇವರು ಭಾಗವಹಿಸಿದ್ದರು. ಮಹಾ ವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕರಾದ ಶರಣಪ್ಪ ಚೌವ್ಹಾಣ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿ ಡಾ. ಆರ್. ಮರೇಗೌಡ, ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.