ಹೊಸಶಕೆ ನ್ಯೂಸ್-ಕೊಪ್ಪಳ : ಎಂ ಎಸ್ ಪಿ ಎಲ್ ಬಲ್ದೋಟ್ ಕಂಪನಿಯವರು ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸುವ ಸಂಬಂಧ ತಮ್ಮ ಪರವಾಗಿ ಹೇಳಿಕೆಗಳನ್ನು ಬೇರೆ ತಾಲೂಕ, ಜಿಲ್ಲೆಯ ದಲಿತ ಸಂಘಟನೆ, ಮುಖಂಡರಿಂದ ಕೊಡಿಸುವ ಕೆಲಸವನ್ನು ತಕ್ಷಣ ನಿಲ್ಲಿಸುವುಂತೆ ಮಾದಿಗ ಮಹಾಸಭಾ ಮುಖಂಡರು ಹೇಳಿದ್ದಾರೆ.
ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಮಹಾಸಭಾ ಮುಖಂಡರಾದ ಮಲ್ಲಿಕಾರ್ಜುನ ಪೂಜಾರ್, ಸಿದ್ದು ಮಣ್ಣಿನವರ, ಮುಕಪ್ಪ ಮೇಸ್ತ್ರಿ , ಖಾಜಾ ಸಾಬ್ ಹೊಸಳ್ಳಿ ಅವರು, ದಲಿತರು ಯಾರಿಗೂ ಒತ್ತಿ ಬಿದ್ದಿಲ್ಲ ಕಾರ್ಖಾನೆ ಮಾಲಿಕರು ದಲಿತ ಸಂಘಟನೆ ಮುಖಂಡರ ನಡುವೆ ಬೆಂಕಿ ಹಚ್ಚುವ, ಒಡೆದು ಆಳುವ ತಂತ್ರಗಾರಿಕೆ ಮಾಡುವುದನ್ನು ಮುಂದುವರೆಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆ ಬೇಕು ಎನ್ನುವವರು ಕೆಲ ಗಂಗಾವತಿ ಭಾಗದ ದಲಿತ ಮುಖಂಡರು ಹಾಗೂ ನಮ್ಮ ವಿರುದ್ದ ಕಾರ್ಖಾನೆಯವರು ಎತ್ತಿಕಟ್ಟುವ ಕೆಲಸ ನಡೆಸಿದ್ದಾರೆ ಈ ಕುತಂತ್ರ ನಡೆಯದು, ದಲಿತರ ಮುಖಂಡರ ಹೆಸರಿನಲ್ಲಿ ಕಾರ್ಖಾನೆಯ ಪರ ಇರುವವರು ಬಲ್ಡೋಟಾ ಇಲ್ಲಿರುವ ದಲಿತರು ಹಾಗೂ ಬೇರೆ ಸಮುದಾಯದ ಯುವಕರಿಗೆ ಎಷ್ಟು ಉದ್ಯೋಗ ನೀಡಿದ್ದಾರೆ..? ಕಾರ್ಖಾನೆಯ ಮೋಸವನ್ನು ಎಲ್ಲರು ಸೂಕ್ಷ್ಮವಾಗಿ ಗಮನಿಸಬೇಕು, ಕೊಪ್ಪಳದ ಎಲ್ಲಾ ದಲಿತ ಮುಖಂಡರು ಕಾರ್ಖಾನೆ ಬೇಡ ಎನ್ನುವ ನಿಲುವಿಗೆ ಬದ್ಧರಿದ್ದೇವೆ ಎಂದರು.