*ರಾಜ್ಯ ಸರ್ಕಾರದಿಂದ ಯೋಜನೆಗಳಲ್ಲಿದುರ್ಬಳಕೆ, ಕಲ್ಯಾಣಕರ್ನಾಟಕಕ್ಕೆ ಮೀಸಲಿಟ್ಟ ಅನುದಾನದ ಬಿಡುಗಡೆ ಇಲ್ಲ : –ಹೆಚ್ಡಿಕೆ
ಹೊಸಶಕೆ ನ್ಯೂಸ್-ಕೊಪ್ಪಳ:
ಕೊಪ್ಪಳದ ಜನರ ಜೀವಕ್ಕೆ ಹಾಗೂ ಪರಿಸರಕ್ಕೆ ಅತ್ಯಂತ ಹಾನಿಯನ್ನುಂಟು ಮಾಡುವ ಬಲ್ದೋಟ ಬಿಎಸ್ಪಿಎಲ್ ಉಕ್ಕು ಕಾರ್ಖಾನೆ ಸ್ಥಾಪನೆಗೆ ಅನುಮತಿಸಿರುವ ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭಾನುವಾರ ಆಗಮಿಸಿದ್ದ ಸಚಿವರು ಜಿಲ್ಲಾಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಹೊಂದಿಕೊಂಡು ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದು ಉಚಿತವಲ್ಲ, ಇದರಿಂದ ಪರಿಸರಕ್ಕೆ, ಜೀವ ಹಾನಿಕಾರಕವಾಗಲಿದೆ, ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಜನರು ಪರಿಸರ ಹಾನಿಯಾಗುತ್ತಿದೆ ಎನ್ನುತ್ತಾರೆ, ರಾಜ್ಯ ಹಾಗು ಕಾರ್ಖಾನೆ ನಡುವೆ ಒಪ್ಪಂದ ಈ ಕುರಿತು ನನ್ನ ಬಳಿ ಪ್ರಸ್ತಾಪ ಬಂದಿಲ್ಲ ರಾಜ್ಯ ಸರಕಾರ ಜನರ ಪರವಾಗಿ ಇರಬೇಕು ಎಂದರು.
ಕೈಗಾರಿಕೆಗಳು ಸ್ಥಾಪನೆಯಾಗಬೇಕು, ಅದಕ್ಕೆ ನಿಯಮಗಳು ಇವೆ, ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುವ ಈ ಘಟಕದ ವಿರುದ್ಧ ಈಗಾಗಲೇ ಜನರು ಹಾಗೂ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಪ್ರಬಲವಾದ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದಾರೆ, ಜನರ ದ್ವನಿಗೆ ಸರ್ಕಾರ ಕಿವಿಗೊಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇಲ್ಲ. ಸರಕಾರದ ಬೊಕ್ಕಸದಲ್ಲಿ ಹಣವಿದೆ. ಆದರೆ ವ್ಯಾಪಕ ಪ್ರಮಾಣದ ದುರ್ಬಳಕೆಯಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನವೇ ಇಲ್ಲದಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಆದರೆ ಒಂದು ನಯಾ ಪೈಸಾ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರಿಂದ ಹೆಚ್ಚಿನ ಕಮಿಷನ್ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ ಸರ್ಕಾರ ಉತ್ತರರಿಸಲಿ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಜನರ ಆಶಯದಂತೆ ಅವರು ಕೆಲಸ ಮಾಡಲಿ. ನಟ್ ಹಾಗೂ ಬೋಲ್ಟ್ ರಿಪೇರಿ ಮಾಡಲು ತಜ್ಞರಿದ್ದಾರೆ. ಅದು ಶಿವಕುಮಾರ್ ಅವರ ಕೆಲಸವಲ್ಲ ಎಂದು ಟಿಕೀಸಿದರು.
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ, ರಾಜ್ಯದ ಖಜಾನೆ ಕಾಲಿ ಆಗಿದೆ, ಅಭಿವೃದ್ಧಿ ಕುಂಟಿತವಾಗಿದೆ, ರಾಜ್ಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿವೆ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲಾ, ರಾಜ್ಯದಲ್ಲಿ ಬರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ , ಡಿಸಿಎಂ ಡಿ.ಕೆ ಶಿವಕುಮಾರ್ ಬೆದರಿಕೆ ವಿಚಾರ ಅದರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲಾ ಯಾರು ಬೆಂಬಲ ಕೊಟ್ಟಿದ್ದಾರೋ ಬಿಟ್ಟಿದ್ದಾರೋ ಅನ್ನೋದಲ್ಲಾ, ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಹಣದ ಕೊರತೆ ಇಲ್ಲ, ಆದರೆ ದುರ್ಬಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ, ಹಲವಾರು ಯೋಜನೆಗಳಲ್ಲಿ ದುರ್ಬಳಿಕೆಯಾಗುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಪಕ್ಷದ ರಾಜ್ಯ ಕಾರ್ಯದರ್ಶಿ ವೀರೇಶ್ ಮಹಾಂತಯ್ಯನಮಠ, ಬಿಜೆಪಿಯ ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಬಿಜೆಪಿ ನಾಯಕರಾದ ಡಾ. ಬಸವರಾಜ್ ಕ್ಯಾವಟರ್, ಜೆಡಿಎಸ್ ಮುಖಂಡರಾದ ಸೋಮನಗೌಡ ಯರದಾಳ, ಮಲ್ಲನಗೌಡ ಕೋನನಗೌಡ್ರ, ಬಸವರಾಜ ಗುಳಗುಳಿ, ಸೇರಿದಂತೆ, ಬಿಜೆಪಿ ಜೆಡಿಎಸ್ ನ ಮುಖಂಡರು, ಕಾರ್ಯಕರ್ತರು ಇದ್ದರು.
==ಕಾರ್ಖಾನೆಗೆ ಜನರು ಹಾಗೂ ಸ್ವಾಮಿಜಿ ಹೇಳಿದಂತೆ ನಗರದ ಜನ ವಸತಿ ಬಳಿ ಬೃಹತ್ ಕಾರ್ಖಾನೆ ಬೇಡ , ರಾಜ್ಯ ಸರಕಾರ ಹಾಗೂ ಸ್ಥಳೀಯ ಕಂಪನಿಯೊಂದು ಒಪ್ಪಂದ ಮಾಡಿಕೊಂಡಿರುವ ಉಕ್ಕು ಘಟಕದ ಸ್ಥಾಪನೆ ಕೇಂದ್ರದ ಯೋಜನೆ ಅಲ್ಲ. ರಾಜ್ಯ ಸರ್ಕಾರ ಅನುಮತಿಸಿ, ಒಡಂಬಡಿಕೆ ಮಾಡಿಕೊಂಡಿದೆ. ಇದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಗವಿಸಿದ್ದೇಶ್ವರ ಸ್ವಾಮೀಜಿಯವರು ವಿರೋಧಿಸಿದ್ದಾರೆ. ಪರಿಸರ ಹಾಗೂ ಜನರಿಗೆ ಹಾನಿ ಉಂಟು ಮಾಡುವ ಘಟಕಗಳನ್ನು ಸ್ಥಾಪಿಸಬಾರದು. ಕೈಗಾರಿಕಾ ಘಟಕದ ಸ್ಥಾಪನೆಯ ವಿರೋಧಕ್ಕೆ ನಮ್ಮ ಪಕ್ಷದ ಸಹಮತವೂ ಇದೆ. : ಹಚ್,ಡಿ ಕುಮಾರ ಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕೆ ಸಚಿವರು.==