Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕೊಪ್ಪಳದಲ್ಲಿ ಮಾ.9 ರಂದು ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ –ಶಿವನಾಂದ ತಗಡೂರು

ಜಿಲ್ಲೆಗೆ ಒಂದು ಒಳ್ಳೆಯ ಮೆರಗು ಬರುವಂತೆ ಸಂಘದ ಸದಸ್ಯ ಪತ್ರಕರ್ತರು ಶ್ರಮಿಸಬೇಕು

Hosashake News by Hosashake News
March 2, 2025
in ಜಿಲ್ಲೆ, ಪರಿಸರ, ರಾಜ್ಯ
0
ಕೊಪ್ಪಳದಲ್ಲಿ ಮಾ.9 ರಂದು ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ –ಶಿವನಾಂದ ತಗಡೂರು
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ : ಪ್ರಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ ಮಾ.9 ರಂದು ಜರುಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು  ಜಿಲ್ಲೆಗೆ ಒಂದು ಒಳ್ಳೆಯ ಮೆರಗು ಬರುವಂತೆ ಸಂಘದ ಸದಸ್ಯ ಪತ್ರಕರ್ತರು ಶ್ರಮಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗುಡೂರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ದತ್ತಿ ಪ್ರಶಸ್ತಿ ಪ್ರಧಾನ , ಮತ್ತು ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದ ವಿವಿಧ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಕಾರ್ಯಕ್ರಮದ ಬಗ್ಗೆ ವಿವಿಧ ಉಪಸಮಿತಿಗಳ ರಚನೆ ಮಾಡಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,

ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಶಸ್ತಿ ಪುರಸ್ಕೃತರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಸಂಘದ ಪ್ರತಿನಿಧಿಗಳು ಮತ್ತು ಸದಸ್ಯರು ಕೊಪ್ಪಳಕ್ಕೆ ಆಗಮಿಸಲಿದ್ದು ಅವರೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡು ಅವರಿಗೆ ವಸತಿ ಮತ್ತು ಊಟ ಉಪಚಾರದ ವ್ಯವಸ್ಥೆ ಸೇರಿದಂತೆ ಇತರ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಲ್ಲಿ ಸಂಘದ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಘದ ಕಾಡು೯ನೋಂದಣಿ ಮತ್ತು ಮರು ನೊಂದಣಿ ಕಾರ್ಯ ಕೂಡ ಕೂಡಲೆ ಕೈಗೊಳ್ಳಬೇಕು ರಾಜ್ಯ ಸಮಿತಿಯ ನೀಯಮಾನುಸಾರ ನೋಂದಣಿಗೆ ಪ್ರತಿಯೊಬ್ಬರು ಮಾನದಂಡಗಳನ್ನು ಅನುಸರಿಸಿ ಅರ್ಜಿ ತುಂಬಿ ಸದಸ್ಯತ್ವ ಪಡೆಯಬೇಕು ಎಂದು  ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಸೂಚನೆ ನೀಡಿದರು,

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಮಾತನಾಡಿ, ಎಲ್ಲರೂ ಒಗ್ಗೂಡಿ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡು ಅದರ ಯಶಸ್ವಿಗೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಸ್ಥಳ ಪಾನಘಂಟಿ ಕಲ್ಯಾಣ ಮಂಟಪಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಸಂಘದ ಪದಾಧಿಕಾರಿಗಳಾದ  ಸಾಧಿಕ ಅಲಿ,  ಎಚ್ಎಸ್ ಹರೀಶ್, ಬಸವರಾಜ್, ಗುಡ್ಲಾನೂರ್, ರಾಜು ಬಿ ಆರ್, ಎನ್ ಎಂ ದೊಡ್ಡಮನಿ. ವೀರಣ್ಣ ಕಳ್ಳಿಮನಿ, ಮಂಜುನಾಥ್ ಅಂಗಡಿ , ಚಂದ್ ಸಿಂಗ್ ರಜಪೂತ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Previous Post

ಭಾಗ್ಯನಗರದ ನವನಗರ ನೇಕಾರರ ಮನೆಗೆ ಶಿವಾನಂದ ತಗಡೂರ ಭೇಟಿ

Next Post

ಬಲ್ದೋಟ್- ಬಿಎಸ್ಪಿಎಲ್ ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ ಅನುಮತಿಸಿದೆ : ಹೆಚ್ ಡಿ ಕುಮಾರಸ್ವಾಮಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Select Month

    Most commented

    Hosashake daily Koppal

    ಹೊಸಶಕೆ ದಿನಪತ್ರಿಕೆ

    ಹೊಸಶಕೆ ದಿನಪತ್ರಿಕೆ

    ಕೊಪ್ಪಳ ಜಿಲ್ಲಾ ಯಾದವ್ ಸಮಾಜದ ನೂತನ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ

    ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಕೊನೆಗೂ ಎಸ್‍ಐಟಿ ರಚಿಸಿದ ಸರ್ಕಾರ

    ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಅಂತಿಮ ವರದಿ ಸಲ್ಲಿಕೆಗೆ ಜು.31ರವರೆಗೆ ಅವಧಿ ವಿಸ್ತರಣೆ

    • Facebook
    • Twitter
    • Instagram
    Call us: +91 7026237749
    Email: hosashakepress@gmail.com

    © 2025 Hosashakenews - Powered by KIPL.

    No Result
    View All Result
    • Home
    • About Us
    • E-paper
    • ಸುದ್ದಿ
    • ದೇಶ
    • ರಾಜ್ಯ
    • ಜಿಲ್ಲೆ
    • ಪರಿಸರ
    • ಅವಲೋಕನ
    • ಶಿಕ್ಣಣ-ಆರೋಗ್ಯ
    • ಕ್ರೀಡೆ
    • ಕಲೆ-ಸಾಹಿತ್ಯ-ಸಂಸ್ಕೃತಿ
    • ರಾಜಕೀಯ
    • ಪ್ರಾದೇಶಿಕ

    © 2025 Hosashakenews - Powered by KIPL.

    error: Content is protected !!
    Contact usContact us