ಕ್ಷಮೆ ಇರಲಿ ಗೆಳೆಯ
ಅನುಮತಿ ಇಲ್ಲದೆ
ಅಹ್ವಾನ ನೀಡುತಿರುವೆ…..
ಬೇಸರಿಸದೆ ಸಮ್ಮತಿಸಿ ಬರುವೆಯ
ಕ್ಷಣ ಹೊತ್ತು ನನ್ನ ಕನಸಿನ ಲೋಕಕೆ
ಬಣ್ಣದ ಬಯಕೆಯ ನಾಕಕೆ……
ಮಬ್ಬುಗತ್ತಲೆಯ ಮುಸುಕ ಸರಿಸಿ
ಮೌನದೇವಿಗೆಯ ಮನದಲ್ಲಿ ಸ್ಥಾಪಿಸಿ
ಮುದದಿಂದ ನಿಂತಿರುವೆ ಮುತ್ತಿನ
ಮಂಟಪದಲಿ….
ಮತ್ತು ಬರುವಷ್ಟು ಒಲವ ಧಾರೆ
ಎರೆಯಲು…..!!!!!!
ಮನ ತಣಿಯುವಂತೆ
ನಿನ್ನನ್ನೋಮ್ಮೆ ಮುದ್ದಿಸಲು…
ಭಾವನೆಗಳ
ಬರಹಗಾರ್ತಿ…..