ಹೊಸಶಕೆ ನ್ಯೂಸ್-ಕೊಪ್ಪಳ: ಪ್ರತಿಯೊಬ್ಬ ಮಗುವಿನಲ್ಲಿ ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳಸಬೇಕಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಶ್ರೀಶೈಲನಗರದಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಂಚಜನ್ಯ ಅಕ್ಷರ ಕಲಿತವರ ಬದುಕು ಧನ್ಯ ಎಂಬ ಅಡಿ ಬರಹದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,,ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನಗಳು ಬೆಳದಂತೆ ಮಕ್ಕಳು ಓದುವ ಹವ್ಯಾಸವನ್ನು ಬಿಟ್ಟು ಮೊಬೈಲ ಬಳಕೆಯಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ.ಮಕ್ಕಳು ಮೊಬೈಲ್ ಬದಲಾಗಿ ಅವರು ಪುಸ್ತಕವನ್ನು ಅಭ್ಯಾಸ ಮಾಡುವಂತ ಹವ್ಯಾಸವನ್ನು ಬೆಳಸಬೇಕಿದೆ ಎಂದರು.
ಜಿಲ್ಲಾ ಕಾರಾಗೃಹದ ಮುಖ್ಯ ಅಧಿಕ್ಷರಾದ ಅಂಬರೇಶ ಪೂಜಾರ ಮಾತನಾಡಿ, ಸರಕಾರಿ ಶಾಲೆಯಲ್ಲಿ ಪಾಂಚಜನ್ಯ ಸಾಹಿತ್ಯ ಅಭಿರುಚಿ ಬೆಳೆಸುವುದು,ಸ್ಪಷ್ಟ ಓದು-ಶುದ್ದ ಬರಹ,ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಮಾಹಿತಿ ಪಡೆಯುವುದು,ಪರಿಸರ ಜಾಗೃತಿ,ಕಲಿಕಾ ಖಾತರಿ ಎಂಬ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷರಾದ ಅಮ್ದಜ ಪಟೇಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲನಾಗಮ್ಮ ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮುಸ್ತಿಸಾಬ ವಾಲಿಕಾರ ಸ್ವಾಗತಿಸಿ,ಬೀಬಿಜಾನ ವಂದಿಸಿದರು. ಅಕ್ಷರ ದಾಸೋಹ ತಾಲೂಕ ಅಧಿಕಾರಿ ಮಲ್ಲಿಕಾರ್ಜುನ ಗುಡಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ,ತಾಲೂಕ ಅಧ್ಯಕ್ಷರಾದ ಹೋಳಿಬಸಯ್ಯಾ.ಕೆ.ಎಂ.,ಶಿಕ್ಷಣ ಪ್ರೇಮಿಗಳಾದ ಅಜರತ ಅಲಿ,ಪೀರಸಾಬ ಬೆಳಗಟ್ಟಿ,ಸಲೀಂ ಅಳವಂಡಿ,ಬಸವರಾಜಯ್ಯಾ ವಸ್ತ್ರದ ಇದ್ದರು.