ಬೇರೆಯವರ ಜೀವನದಲ್ಲಿ ನಾವು ಬರೀ ಆಯ್ಕೆ ಆಗೆ ಉಳಿದು ಬಿಡುತ್ತೇವೆ ಶಾಶ್ವತವಾಗಿ,,,,
ನಿನ್ನ ಜೀವನದಲ್ಲಿ ನಾನೊಂದು ತಾತ್ಕಾಲಿಕ ಪರಿಚಯ ಅಷ್ಟೇ,,,,,
ಬದುಕಲಿ ಇಷ್ಟ ಪಟ್ಟಿದ್ದು ಒಂದೇ ಅದು ನೀನು….
ಆದರೆ ನೀನು ಬರೀ ನೆನಪಾಗಿ ಉಳಿದುಬಿಟ್ಟೆ ನಿರಂತರವಾಗಿ,,,,
ಏಕಾಂಗಿ ಪಯಣ ನನ್ನದು ಜೊತೆಯಾಗಿ ಇರು ಎಂದು ಅಂಗಲಾಚ್ಚಿದ್ದೆ,,,,
ಕವಲು ದಾರಿಯಲಿ ಕೈ ಚೆಲ್ಲಿ ಒಂಟಿ ಮಾಡಿ ಹೊರೆಟೇ ಬಿಟ್ಟೆಯಾ ಗೆಳೆಯ….
ಒಮ್ಮೆ ಅತ್ತು ಮುಗಿಸಿ ಮರೆತು ಬಿಡಬೇಕು ಅನ್ನಿಸುತ್ತೆ ಆದರೆ ನೀ ಬಿಡೋಲ್ಲವೇ,,,,
ಕಣ್ಣು ಕಂಬನಿ ಮುಚ್ಚಿಡಲು ಹೆದರುವುದು,,,,
ಒತ್ತಾಯದ ಪ್ರೀತಿಯ ನಾಟಕ ಬೇಡ,,,
ಕೆಲವೊಂದು ನೋವುಗಳು ಬದುಕಲು ಬಿಡೋಲ್ಲ , ಜವಾಬ್ದಾರಿಗಳು ಸಾಯಲು ಬಿಡೋಲ್ಲ,,,,
ಮತ್ತೆ ಮತ್ತೆ ಕರೆಯೋ ಆಸೇ ಮರಳಿ ಬಾ ಗೆಳೆಯ…. ನೀ ಮರೆತರೂ ನಾ ಮರೆಯಲಾರೆ,,,
ಮತ್ತೆ ನೆನಪು ಬಾರದಿರಲಿ ಎಂದು ಮರೆಯುವ ಖಾಯಲಿ,,,
ಕರೆದರೂ ನೀ ಬರಲಾರೆ ಮರೆತರೂ ಮರೆಯೋಲ್ಲ ನಾ,,,
ಕಾದೆ ಕ್ಷಣಗಳು,ನಿಮಿಷಗಳು, ಘಂಟೆಗಳು, ದಿನಗಳು, ವರ್ಷಗಳು,,ಮೌನಿಯಾದೆ,,,ಮಾತುಗಳಿಲ್ಲದೆ,,,ಅದನ್ನೇ ಉತ್ತರವಾಗಿ ಸ್ವೇಕರಿಸಿದೆ,,,,
ಸಿಗ್ತಿಯ ಅನ್ನೋದು ಕಲ್ಪನೆ…. ಸಿಗಲೇಬೇಕು ಅನ್ನೋದು ನನ್ನ ಸ್ವಾರ್ಥ,,,
ದುಃಖವಿದೆ ನೀ ಸಿಗಲಿಲ್ಲ ಅನ್ನೋದು,,,
ಸಂಬಂಧ ಅನ್ನೋದು ಸಣ್ಣ ಸಣ್ಣ ಭಾವನೆಗಳ ವಿನಿಮಯ…ನನ್ನ ಕಲ್ಪನೆಗೂ ಮೀರಿದ ಕನಸು ನೀ,,
ನೀನೆಂದರೆ ಮನದೊಳಗೆ ಮೊಡಿದ ಮಧುರ ಭಾವ,,
ಆಸೆಯಯೂ ಅಲ್ಲ ಆಕರ್ಷಣೆಯೂ ಮೊದಲೇ ಅಲ್ಲ,,,,,
ನಿನಗೋಸ್ಕರ ಮೌನವಾಗಿ ಕಾದಿರುವ ಸಮಯವೇ ಹೆಚ್ಚು ಸುಖವನು ನೀಡಿದೆ
ನಿನ್ನ ನೊಡನೆ ಮಾತಾಡದ್ದಕ್ಕಿಂತ,,,,,
ಉಸಿರು, ಹೆಸರು, ಜೀವ, ಜೀವನ, ಆತ್ಮ, ಮೋಹ, ವ್ಯಮೋಹ, ಬದುಕು, ಭಾವ,ಮಾತು, ಮೌನ ಎಲ್ಕವೂ ನೀನೇ ಆಗಿದ್ದೆ,,,
ಸಮುದ್ರದಲ್ಲಿ ಹುಡುಕುವ ಆಸೆ ಮುತ್ತಾಗಿ ಸಿಗ್ತಿಯ ಗೆಳೆಯ,,,
ವಿಪರೀತ ಅನ್ನೋಷ್ಟು ಕಾಳಜಿ ಮಾಡಿದ್ದೆ ನೀ ಕೊಡೊ ನೋವಿಗಾಗಿ ಅನ್ನಿಸಿ ಬಿಟ್ಟಿದೆ,,,,
ಆಯ್ಕೆ ನನ್ನದೇ ಆಗಿರುವಾಗ ದೋರುವುದು ಯಾರನ್ನು,,,,
ಭಾವನೆಗಳಿಗೆ ಬೆಲೆ ಇಲ್ಲದ ಕಲ್ಲು ಶಿಲೆಯಾಗಲು ಯೋಗ್ಯ ಅಲ್ಲ ನೀ….
ಮೌನವೇ ಉತ್ತರವಾಗಿಸಿ ಕೊಂಡು ಗಂಟಲು ಬಿಕ್ಕುವರೆಗೂ ರೋಧಿಸಿ ಎಲ್ಲವೂ ಪ್ರಶ್ನಿಣಾತ್ಮಕವಾಗಿ ಉಳಿದ ಮೇಲೆ,,,,, ನಿರುತ್ತರವೇ ಉತ್ತರ,,,
ಮನಸೆಲ್ಲ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ,,,
ಸಾವಿಲ್ಲದ ನನ್ನ ಮನದೊಳಗೆ ಗೋರಿಯಾಗಿಸಿದ್ದ ಪ್ರೀತಿಗೆ ನಿನ್ನ ನೆನಪುಗಳೇ ಹೂವಾಗಿರಲಿ,,,,
ನೆನಪಿದೆ ನಂಗೆ ಮೊದಮೊದಲು ಮಾತನಾಡಲು ಶುರುಮಾಡಿದಾಗ ನೀನೇ ನನ್ನ ಮೊಗದಲಿ ನಿಜವಾದ ನಗು ಮೂಡಿಸಿದ್ದು ಬಹಳ ದಿನಗಳ ನಂತರ…..
ನನ್ನದೇ ಆಯ್ಕೆ, ನನ್ನದೇ ನಿರ್ಧಾರ, ಅದಕ್ಕೆ ನೋವು ಮಲಗಿದೆ ಜೀವಂತ ಶವವಾಗಿ,,,
ನೋವನ್ನು ನಗುನಗುತ ಬಚ್ಚಿಟ್ಟು ಹೋದ ನೀ ಮರಳುವೆ ಎಂಬ ನಂಬಿಕೆ ಉಳಿದಿಲ್ಲ,,,
ಕಲ್ಪನೆಯ ಕನಸಿನಲ್ಲಿ ಸಾಗಿಸಬೇಕಿದೆ ಅರ್ಥ ಕಳೆದು ಕೊಂಡ ಬದುಕು,,,,
ಕೊಟ್ಟು ಕಿತ್ತುಕೊಂಡ ಪ್ರೀತಿಗಾಗಿ ಹಂಬಲಿಸಿ ಹಾತೋರೆಯುತಿದೆ,,,,
ನನ್ನನ್ನು ನಾನೇ ಬಲವಂತವಾಗಿ ಭಾವನೆಗಳ ಬೇಲಿಯೊಳಗ ಬಂಧಿಸಿ ಇಡೋದು ಪ್ರೀತಿಯ ಜೀವಂತ ಝರಿ ಜಿನುಗುತ್ತಿರುವಾಗ,,,,
ಒಮ್ಮೆ ನೋಡಲು ಕಾದಿರುವೆ ಅಸುನೀಗುವ ಮುನ್ನ,,,,,
ಬದುಕಿನ ಇಳಿ ಸಂಜೆಯಲಿ ಬಯಕೆಗಳ ಬೇಗುದಿಯ ಬೆಂಕಿಯಲ್ಲಿ ಜ್ವಲಂತ ಅತೃಪ್ತ ಆತ್ಮ ಮಿಲನಕ್ಕೆ ಕಾಯುವ ನೋವೇ ನನ್ನ ಸುಖ,,,
ಇದ್ದಕಿದ್ದಂತ ನಾ ಮರಣ ಅಪ್ಪಿದರೆ ಹನಿ ಕಣ್ಣೀರು ಬೇಡ ಮುಗಿಲ ನೋಡಿ ಒಂದು ಸಣ್ಣ ಮುಗುಳ್ನಗೆ ಬೀರೀ ವಿದಾಯ ಹೇಳುಬಿಡು ಗೆಳೆಯ,,,ಸಹೃದಯದಿಂದ,,,,
ನಿಜವಾದ ಪ್ರೀತಿಯಲಿ ಬಿದ್ದರೆ ದಿನವೂ ತುಟಿ ಅಂಚಲಿ ನಗು ಕಣ್ಣ್ ಅಂಚಲಿ ಹನಿ,,,,,
ಕಣ್ಣ ಮುಚ್ಚಿ ನಿನ್ನ ನೋಡುವೆ ಎನ್ನ ಹೃದಯದ ಅರಮನೆಯಲ್ಲಿ ರಜನಾಗಿ,,, ಇರುವೆಯಾ……
✍️ಮೇಖಲಾ ಆರಾಧ್ಯ