ಪ್ರೇಮಿಗಳ ದಿನವನ್ನು ಫೆಬ್ರುವರಿ 14 ರಂದೇ ಆಚರಿಸುವುದು ಯಾಕೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇದರ ಹಿಂದೆ ಮಹತ್ವದ ಕಾರಣ. ಪ್ರೀತಿಯ ಸಂಕೇತದ ಈ ಪವಿತ್ರ ದಿನದ ಇತಿಹಾಸ, ಮಹತ್ವದ ಕುರಿತ ಆಸಕ್ತಿದಾಯಕ ವಿಚಾರಗಳನ್ನು ಪತ್ರಕರ್ತ ರವಿಕುಮಾರ ಶಿದ್ನೆಕೊಪ್ಪ ಅವರು ಪ್ರೇಮಿಗಳಿಗಾಗಿ ಲೇಖನದಲ್ಲಿ ಬಿಚ್ಚಿಟ್ಟಿದ್ಸಾರೆ.
ಪ್ರೇಮ ಎಂಬುದು ಜಗತ್ತಿನ ಅದ್ಭುತಗಳಲ್ಲಿ ಒಂದು. ಜಗತ್ತಿನ ಸರ್ವವನ್ನೂ ಆವರಿಸಿರುವ ಪ್ರೇಮ ಪರಿಶುದ್ಧವಾದುದು. ಫೆಬ್ರುವರಿ ತಿಂಗಳು ಆರಂಭವಾಯಿತು ಎಂದರೆ ಎಲ್ಲೆಲ್ಲೂ ಪ್ರೀತಿ-ಪ್ರೇಮದ ಪದಗಳು, ಕೆಂಗುಲಾಬಿ ಹೂಗಳು, ಟೆಡ್ಡಿಬೇರ್ಗಳು, ಬಗೆಬಗೆಯ ಚಾಕೊಲೇಟ್ಗಳು ಕಣ್ಣಿಗೆ ರಾರಾಜಿಸುತ್ತವೆ. ಇದಕ್ಕೆ ಕಾರಣ ಪ್ರೇಮಿಗಳ ದಿನ. ಫೆಬ್ರುವರಿ 7 ರಿಂದ ಫೆಬ್ರುವರಿ 14ರವರೆಗೆ ವ್ಯಾಲೆಂಟೈನ್ಸ್ ವೀಕ್ ಆಚರಿಸಲಾಗುತ್ತದೆ. ರೋಸ್ ಡೇಯಿಂದ ಆರಂಭವಾಗುವ ವ್ಯಾಲೆಂಟೈನ್ಸ್ ವೀಕ್ ಫೆಬ್ರುವರಿ 14ರ ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ.
ಹಲವು ಪ್ರೇಮ ಪಯಣಿಗರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನಕ್ಕಾಗಿ ಕಾಯುತ್ತಾರೆ. ಆದರೆ ಪ್ರೇಮಿಗಳ ದಿನವನ್ನು ಫೆಬ್ರುವರಿ 14 ರಂದೇ ಆಚರಿಸುವುದು ಯಾಕೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇದರ ಹಿಂದೆ ಮಹತ್ವದ ಕಾರಣ. ಪ್ರೀತಿಯ ಸಂಕೇತದ ಈ ಪವಿತ್ರ ದಿನದ ಇತಿಹಾಸ, ಮಹತ್ವದ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.ಫೆ
. 14 ರಂದು ಪ್ರೇಮಿಗಳ ದಿನ ಆಚರಿಸಲು ಕಾರಣ?ಹಲವು ಶತಮಾನಗಳಿಂದ ಫೆಬ್ರುವರಿ 14 ರಂದು ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಲಾಗುತ್ತದೆ. ದಂತಕಥೆಗಳ ಪ್ರಕಾರ 14ನೇ ಶತಮಾನದಿಂದ ಪ್ರೇಮಿಗಳ ದಿನಾಚರಣೆ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತದೆ. 8ನೇ ಶತಮಾನದ ಗೆಲಾಸಿಯನ್ ಸ್ಯಾಕ್ರಮೆಂಟರಿ ಫೆಬ್ರುವರಿ 14 ರಂದು ಸೇಂಟ್ ವ್ಯಾಲೆಂಟೈನ್ ಹಬ್ಬ ಎಂಬುದನ್ನು ದಾಖಲಿಸಿದೆ. 14 ಹಾಗೂ 15ನೇ ಶತಮಾನಗಳಲ್ಲಿ ವಸಂತಕಾಲದ ಆರಂಭದಲ್ಲಿ ಲವ್ ಬರ್ಡ್ಸ್ಗಳು ಚಿಂವ್ಗುಡುವ ಸಮಯಕ್ಕೆ ಅನುಗುಣವಾಗಿ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಕ್ರಿಸ್ತಪೂರ್ವ 270ರ ಸುಮಾರಿನಲ್ಲಿ ಇದ್ದ ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್ನೊಂದಿಗೂ ಈ ದಿನ ಸಂಬಂಧ ಹೊಂದಿದೆ.
ಈ ವರ್ಷದ ಪ್ರೇಮಿಗಳ ದಿನವನ್ನು ಅವಿಸ್ಮರಣೀಯವಾಗಿಸಿ ಪ್ರೇಮಿಗಳ ದಿನದ ಇತಿಹಾಸ ಹಾಗೂ ಮಹತ್ವ ತಿಳಿಯಿರಿ
ಪ್ರೇಮಿಗಳ ದಿನದ ಹುಟ್ಟಿನ ಹಿಂದೆ ಹಲವು ದಂತಕಥೆಗಳಿವೆ. ಇದರಲ್ಲಿ ಹೆಚ್ಚು ಜನಪ್ರಿಯವಾದ ಕಥೆ ಫೆಬ್ರುವರಿ ಮಧ್ಯದಲ್ಲಿ ನಡೆಯುವ ರೋಮನ್ ಹಬ್ಬವಾದ ಲುಪರ್ಕಾಲಿಯಾ. ಇದು ವ್ಯಾಲೆಂಟೈನ್ಸ್ ಡೇಯ ಮೂಲವನ್ನು ಹೊಂದಿದೆ ಎನ್ನಲಾಗುತ್ತದೆ. ವಸಂತಕಾಲದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ಇದರಲ್ಲಿ ಲಾಟರಿ ಮೂಲಕ ಪುರುಷ ಹಾಗೂ ಮಹಿಳೆಯನ್ನು ಜೋಡಿ ಮಾಡಲಾಗುತ್ತಿತ್ತು. ಪೋಪ್ ಗೆಲಾಸಿಯಸ್ 1 ಈ ಹಬ್ಬವನ್ನು ವ್ಯಾಲೆಂಟೈನ್ಸ್ ಆಗಿ ಬದಲಿಸಿದರು ಎಂದು ಹೇಳಲಾಗುತ್ತದೆ. ಈ ಕಥೆಯ ಪ್ರಕಾರ 14ನೇ ಶತಮಾನದ ಅವಧಿಯಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಶುರುವಾಯಿತು.
ಇನ್ನೊಂದು ದಂತಕಥೆಯ ಪ್ರಕಾರ ಫೆಬ್ರುವರಿ 14 ರಂದು ಸೇಂಟ್ ವ್ಯಾಲೆಂಟೈನ್ ಅವರನ್ನು ಗೆಲ್ಲಿಗೇರಿಸಲಾಯಿತು. ಸೇಂಟ್ ವ್ಯಾಲೆಂಟೈನ್ ರೋಮ್ ದೇಶದ ದೊರೆ ಕ್ಲಾಡಿಯಸ್ II ಅವರ ಕಾಲದಲ್ಲಿದ್ದರು. ಕ್ಲಾಡಿಯಸ್ ತನ್ನ ಸೈನಿಕರು ಯಾರೂ ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದ. ಅಂತಹ ಸಮಯದಲ್ಲಿ ರಾಜನನ್ನೇ ಎದುರು ಹಾಕಿಕೊಂಡ ವ್ಯಾಲೆಂಟೈನ್ ಗುಟ್ಟಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದರು. ಸೈನಿಕರ ಬದುಕಿನಲ್ಲೂ ಪ್ರೇಮ ಮೂಡುವಂತೆ ಮಾಡುತ್ತಿದ್ದರು. ಇದನ್ನು ತಿಳಿದ ರಾಜ ಕ್ಲಾಡಿಯಸ್ ವಾಲೈಂಟೈನ್ ಅವರನ್ನು ಫೆ. 14 ರಂದು ಗಲ್ಲಿಗೇರಿಸುತ್ತಾನೆ. ಆ ದಿನದಿಂದ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ.
ಇದರ ನಡುವೆ ವ್ಯಾಲೆಂಟೈನ್ಸ್ ಡೇ ಎಂಬುದು ಪ್ರೀತಿಯ ದೇವತೆ ಕ್ಯುಪಿಡ್ನಿಂದಲೂ ಸಂಕೇತಿಸುತ್ತದೆ. ರೋಮನ್ ಪುರಾಣದ ಪ್ರಕಾರ ಕ್ಯುಪಿಡ್ ಶುಕ್ರನ ಮಗ. ಇವನು ಪ್ರೀತಿ ಹಾಗೂ ಸೌಂದರ್ಯದ ಕ್ಯುಪಿಡ್ನ ಬಿಲ್ಲು-ಬಾಣ ಹೃದಯವನ್ನು ಚುಚ್ಚುವುದು ಮಾತ್ರವಲ್ಲ, ಅದು ಪ್ರೀತಿಯ ಕಾಗುಣಿತವನ್ನು ಬಿತ್ತರಿಸುತ್ತದೆ. ಅವನ ನೆನಪಿನಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ ಎಂಬುದು ಒಂದು ನಂಬಿಕೆ.
ಪ್ರೇಮಿಗಳ ದಿನದ ಆಚರಣೆ
ಪ್ರೇಮಿಗಳ ದಿನದಂದು ನಮ್ಮ ಮನಸ್ಸಂಗಾತಿಯ ಜೊತೆ ಕಾಲ ಕಳೆಯುವ ಮೂಲಕ ಆಚರಿಸಬಹುದು. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವುದು, ಅವರೊಂದಿಗೆ ರೆಸ್ಟೋರೆಂಟ್ನಲ್ಲಿ ಜೊತೆಗೆ ಕುಳಿತು ಊಟ ಮಾಡುವುದು, ಪ್ರವಾಸ ಆಯೋಜಿಸುವುದು, ಲಾಂಗ್ ಡ್ರೈವ್ ಹೀಗೆ ಹಲವು ಭಿನ್ನ ವಿಧಗಳ ಮೂಲಕ ಆಚರಿಸಬಹುದು.