ಹೊಸಶಕೆ ನ್ಯೂಸ್-ಕೊಪ್ಪಳ : ಕೊಪ್ಪಳ ತಾಲೂಕಿನಲ್ಲಿ ಕಾರ್ಖಾನೆಗಳು ಬಿಡುವ ವಿಷ ಅನಿಲಗಳ ಬಗ್ಗೆ ಯೋಚಿಸಿದರೆ ನಮ್ಮ ಬದುಕು ದುಸ್ತರವಾಗಲಿದೆ. ಇಂತಹದರಲ್ಲಿ ಸರ್ಕಾರ ಖಾಸಗಿ ಬಲ್ಡೋಟಾ ಉಕ್ಕು ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ನೀಡಿರುವುದು ತುಂಬಾ ಆತಂಕದ ಸಂಗತಿಯಾಗಿದ್ದು, ಇದನ್ನು ವಿರೋಧಿಸುವದಾಗಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಗುರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ, ಅಲ್ಲಾನಗರ, ಹಾಲವರ್ತಿ, ಕುಣಿಕೇರಿ, ಕುಣಿಕೇರಿ ತಾಂಡಾ ಲಾಚನಕೇರಿ, ಕರ್ಕಿಹಳ್ಳಿ ಹ್ಯಾಟಿ ಮುಂಡರಗಿ ಈ ಎಲ್ಲಾ ಗ್ರಾಮಗಳು, ಅಪಾಯ ಮಟ್ಟ ಮೀರಿ ಹೊಗಿದೆ. ಸುಮಾರು 202 ಕಾರ್ಖಾನೆಗಳಿಂದ ವಾಯುವ್ಯ ಮಾಲಿನ್ಯವಾಗಿದೆ ಎಂದು ದೂರಿದರು.
ತಾಲೂಕಿನ ರೈತರ ಜೀವನ ಹಾಳಾದರೂ ಮತ್ತೇ ಬಟ್ಟೋಟಾ ಸಮೂಹ ಸಂಸ್ಥೆ ನಗರಕ್ಕೆ ಹತ್ತಿರದಲ್ಲಿ ಉಕ್ಕಿನ ಕಾರ್ಖಾನೆ ತೆಗೆಯಲು ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಇದು ನಿಜಕ್ಕೂ ಕೊಪ್ಪಳ ಜನತೆ ಬಯದಲ್ಲಿದ್ದಾರೆ, ರೂ: 54/- ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 10.05 ದಶ ಲಕ್ಷ ಟನ್ ಉತ್ಪಾದನೆ ಸಾಮಾರ್ಥ್ಯದಿಂದ ಇಂಟಿಗ್ರೇಟೇಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಮುಂದಿನ ಹಂತದ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದರು
ಕೊಪ್ಪಳ ಜಿಲ್ಲೆ ಜನರ ಸಾದಾಕ ಬಾದಕಗಳ ಬಗ್ಗೆ ಸಂಪೂರ್ಣವಾಗಿ ಯೋಚಿಸಿ ನಮ್ಮ ಭಾವನೆಗಳ ಬಗ್ಗೆ ಮುಖ್ಯಮಂತ್ರಿಗಳು, ಕೇಂದ್ರ ಕೈಗಾರಿಕೆ ಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ, ಸಚಿವರಾದ ಎಮ್ ಬಿ ಪಾಟೀಲ್ ಈ ಖಾಸಗಿ ಉಕ್ಕು ಕಂಪನಿ (ಬಲ್ನೋಟಾ ಉಕ್ಕು ಕಾರ್ಖಾನೆ) ಸ್ಥಾಪಿಸದಿರಲು ಅವರಲ್ಲಿ ಒತ್ತಾಯ ಮಾಡುವದಾಗಿ ತಿಳಿಸಿದರು. ಬಲ್ಡೋಟಾ ಸ್ಟೀಲ್ ಕಂಪನಿ ಮತ್ತು ಪರ್ವ ಲೀಮಿಟೇಡ್ ಇದರಿಂದ ಕರ್ನಾಟಕದಲ್ಲಿ ಉಕ್ಕು ಉತ್ಪಾದನೆ ಹೆಚ್ಚಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಎಂದು ಸರ್ಕಾರ ಮತ್ತು ಕಂಪನಿ ಹೇಳುತ್ತಿದೆ. ಆದರೆ ಇದರಿಂದ ಜನರ ಜೀವನ ಆರೋಗ್ಯ, ಬೇಳೆ ಎಷ್ಟು ನಷ್ಟವಾಗಲಿದೆ ಎಂದು ಅಂದಾಜಿನಲ್ಲಿ ಹೇಳುವುದಾದರೇ, ಈಗಾಗಲೇ ಮಹಿಳೆಯರು, ಮಕ್ಕಳು, ರೈತರು ಅನಾರೋಗ್ಯ ಆರ್ಥಿಕ ನಷ್ಟ ನಿರಾಸೆ ಹೊಂದಿದ್ದಾರೆಂದು ಗ್ರಾಮಗಳಿಗೆ ಹೋಗಿ ನೋಡಿ ಆಗ ತಿಳಿಯುತ್ತದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ನೀಲಕಂಠಯ್ಯ ಹಿರೇಮಠ, ವಾಣಿಶ್ರೀ ಮಠದ, ಹುಲಗಪ್ಪ ಮೇಟಿ ಇತರರು ಇದ್ದರು.